ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

. ಭಾರತೀಯರ ಇತಿಹಾಸವು. ರ ೬ ಗಿರನ್ನು ಉದ್ರಕ ನಿ೦ದ ಗೌತಮನಿಗೆ ತತ್ವಜ್ಞಾನದ ಜೋಧವಾಗುವ ದಲ್ಲದೆ, ಧ್ಯಾನಯೋಗ, ಸಮಾಧಿಯೋಗಗಳ ಕೊನೆಯ ಮೆಟ್ಟಿಲುಗಳ ಜ್ಞಾನವೂ ಆಯಿತು. ಉದ್ರಕನ ಹತ್ತಿರ ಕೆಲದಿನ ಕಾಲಕಳೆದು ಗೌತ ಮನು ನಿರ್ಜನವಾದ ಸ್ಥಳಕ್ಕೆ ನಾರಿ, ೬ ವರ್ಷಕಾಲ ತಪಸ್ಸು ಮಾಡಿ ದನು. ಮನಸು ಕೈಗೆ ಸಿಕ್ಕು ವಾಸನೆಯು ಕ್ಷಯವಾಗಬೇಕೆಂದು ಗೌತ ಮನು ಅನ್ನ ಬಿಟ್ಟನು. ಉಪವಾಸದಿಂದ ಅವನು ತೀರ ಬಲಗುಂದಿ ದವನಾಗಿ ಒಂದುಸಲ ಎಷ್ಟರಿಗೆಟ್ಟು ಸಹ ಬಿದ್ದನು; ಆಗ ವಾಸನೆಯ ಕ್ಷಯವಾಗುವ ದಾರಿಂದಲ್ಲವೆಂದೆಣಿಸಿ, ಗೌತಮನು ಸುಜಾತಾ ಎಂಬ ಗೋ ವಳಗಿತ್ತಿಯು ಕೊಟ್ಟ ಹಾಲು ಅನ್ನವನ್ನು ೦ಡು ಉಪವಾಸ ಮುರಿದು ಅದೇ ಕಾಡಿನಲ್ಲಿರುವ ನಿರಂಜನಾನದಿಯ ಹತ್ತರಿರುವ ಒಂದು ಅಶ್ವತ್ಸ ವೃಕ್ಷದ ಕೆಳಗೆ ಆಸನ ಹಾಕಿ ಯೋಗಸಾಧನೆ ನಡಿಸಿರಲು, ಇದ್ದಕ್ಕಿದ್ದ ತಾಗೆ ಹೃದಯ ದೊಳಗೆ ಆತ್ಮಜ್ಯೋತಿಯು ಮಿಂಚಿ ಮನಸ್ಸು ಸಮಾ ಗಾನಗೊoಡಿತು. ಈ ವೃಕ್ಷವು ಈಗಲೂ ಬೋಧಿವೃಕ್ಷ' ವೆಂಬ ಹೆಸರಿ ನಿಂದ ಗಯಾಕ್ಷೇತ್ರದ ನೆರೆಯಲ್ಲಿದೆ. ಇಡೀ ರಾತ್ರಿಯನ್ನೆಲ್ಲ ಅವನೀ ಏಕಾ೦ತಿಕ ಮನಃಸಮಾಧಿಯಲ್ಲಿಯೇ ಕಳೆದು ಮರು ದಿನದಿಂದ ತನಗೆ ಸಿಕ್ಕ ಜ್ಞಾನದ ದಾರಿಯನ್ನು ಜನರಿಗೆ ಕಲಿಸಲು ಪ್ರಾರಂಭಿಸಿದನು. ಮತ್ತು ಈ ಅತ್ಯಂತ ಪವಿತ್ರ ಕಾರ್ಯದೊಳಗೆ ಆತನು ತನ್ನ ಮಿಕ್ಕ ೪೦ ವರ್ಷಗಳನ್ನು ವೆಚ್ಚ ಮಾಡಿದನು. ಜ್ಞಾನೋತ್ತರ ಬುದ್ದ ಕಾರ್ಯ:- ಸತ್ಯಜ್ಞಾನವಾದ ಮೇಲೆ ಗೌತಮನು ಪ್ರಪಂಚದ ನಿಜಸ್ಥಿತಿಯನ್ನರಿತುದರಿಂದ ಅವನಿಗೆ ಬುದ್ಧ' ಅ೦ದರೆ ತಿಳಿದವ, ಎಚ್ಚತ್ಯ ವನೆಂಬ ಹೆಸರಿನಿಂದ ಕರೆಯಹತ್ತಿದರು. ತನಗೆ ನಿಜಜ್ಞಾನವಾದೊಡನೆ ಬುದ್ಧದೇವನು ಪ್ರಪಂಚದೊಳಗೆ ಉಪ 'ದೇಶ ಮಾಡುತ್ತಲೇ ಉಳಿದ ೪೦ ವರ್ಷ ಕಳೆದನು. ಅನೇಕರೊಡನೆ, ವಾದ ಹಾಕಿದನು; ಅನೇಕರನ್ನು ತನ್ನ ದೈವೀವೃತ್ತಿ ೦ದ ಶಿಷ್ಯರ ನ್ನಾಗಿ ಮಾಡಿಕೊಂಡನು, ಸ್ವಾನುಭವ ಬಲದಿಂದಲೂ, ದೃಷ್ಟಾಂತ ಗಳಿ೦ದಲೂ ಜನರಾಡುವ ಸುಲಭವಾದ ನುಡಿಯಿ೦ದಲೂ ಬುದ್ಧದೇವನು ಜನರಿಗೆ ಜ್ಞಾನ ಬೋಧಿಸುತ್ತಿದ್ದುದರಿಂದ ಅವನ ಬೋ ಧವು ಜನರಲ್ಲಿ