ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಜ್ಞಾನೋತ್ತರ ಬುದ್ಧಕಾಯ೯, nor ನೆಡುತ್ತಿತ್ತು. ಕೋಸಲ ಹಾಗೂ ಮಗಧ ಪ್ರಾಂತಗಳೇ ಮುಖ್ಯವಾಗಿ ಅವನ ಕಾರ್ಯ ಕ್ಷೇತ್ರಗಳಾಗಿದ್ದರೂ, ಅವನ ಕೀರ್ತಿಯು ದಿಗ್ಗೇಶ ಗಳಲ್ಲಿ ಹರಡಿತು. ಬುದ್ಧನ ಹ೦ಡತಿಯ ಮಗನಾದ ರಾಹುಲನೂ ಅವನ ಶಿಷ್ಯರಾದರು. ಹಲವು ರಾಜರೂ, ಶಾಸ್ತ್ರಸಂಪನ್ನರಾದ ಬ್ರಾಮ್ಮ ಣರೂ ಬುದ್ಧನ ಪಾದಕ್ಕೆರಗಿ ಬುದ್ಧ ಶಿಷ್ಯರಾದರು. ಜಾ ರ, ಚೋರ, ಪತಿತ, ಚಾಂಡಾಲ, ಅವರಂತಹ ಮೂಢರು ಸಹ ಬುದ್ಧದೇವನ ಪ್ರನಾದತೀರ್ಧ ದಿ೦ದ ಅ೦ತ ಬಾಹ್ಯ ಶುದ್ಧ ರಾಗಿ ಸದ್ದು ಣಿಗಳಾದರು. ಒಬ್ಬ ಭಿಕ್ಷುವು ಅತಿಸಾರ ಬೇನೆಯಿಂದ ನರಳುತ್ತ ಹಾಸಿಗೆ ಹಿಡಿದು ಬಿದ್ದಿ ರಲು, ಬುದ್ಧನು ಅವನನ್ನು ಕೇಳುವವರು ಯಾರೂ ಇಲ್ಲದ ಸ್ಥಿತಿಯನ್ನು ಕ೦ಡು ತಾನೇ ಸ್ವತಃ ಅವನ ಸೇವಗೆ ಕೈ ಕಟ್ಟಿ ಕೊಂಡು ನಿಂತಿರುವ ಕಥೆಯ ಮೇಲಿಂದ ಬುದ್ಧದೇವನ ಅಂತಃಕರಣದ ಕಲ್ಪನೆಯಾಗುತ್ತದೆ. ರಾಜವೈಭವದೊಳಗೆ ಓಲಾಡುತ್ತಿರುವ ಅನೇಕ ರಾಜಪುತ್ರರು ಬುದ್ಧ ದರ್ಶನದಿಂದ ಸಂಸಾರವನ್ನು ತೊರೆದು ಭಿಕುಗಳಾದ ಕಥೆಗಳಿವೆ. ಯಾವುದೊಂದು ಊರಲ್ಲಿ ಒಂದು ದೊಡ್ಡ ಸಮಾರಂಭ ನಡೆದಿರಲು, ಅಲ್ಲಿ ಬುದ್ಧದೇವನು ಹೋಗಿದ್ದನು. ಆ ಸಮಾರಂಭದೊಳಗಿರುವ ಮನೆ ತನಸ್ಥಳಾದ ಒಬ್ಬ ಸುಂದರ ಹಾಗೂ ಶ್ರೀಮಂತ ಯುವತಿಗೆ ಬುದ್ಧದೇವ ನನ್ನು ನೋಡಿದೊಡನೆಯೇ ವೈರಾಗ್ಯವುಂಟಾದ್ದರಿಂದ ಅವಳು ಬೌದ್ಧ ಮಠಕ್ಕೆ ಹೋಗಿ, ಬುದ್ಧನ ಬೋಧೆಯಿಂದ ಭಿಕ್ಷುಣಿಯಾದಳು. ಬುದ್ಧ ಸಂಘದೊಳಗೆ ಅ೦ಬಾ ಪಾಲಿಯೆಂಬ ವೇಶೈಯೂ, ಸುವಿನೀತನೆಂಬ ಭಂಗಿಯ ವನ, ಉವಾಲಿಯೆಂಬ {ರಕನೂ ಸೇರಿ, ಒಳ್ಳೆ ಗೌರವಕ್ಕೆ ರಿದ್ದರು. ವಾರಾಣಸಿಯ೦ಥ ಸನಾತನ ವೈದಿಕ ಧರ್ಮದ ಕೋಟೆ ಯಲ್ಲಿ ಸಹ ಹೊಕ್ಕು ಬುದ್ಧದೇವನು ತನ್ನ ವಾಗ್ದಲದಿಂದ ವಿದ್ವಾಂಸ ರನ್ನು ಗೆದ್ದನು. ನಿಜವಾಗಿ ನೋಡಿದರೆ, ಸ್ತ್ರೀಯ ರನ್ನು ಕಂಡರೆ ಬುದ್ಧನಿಗಾಗುತ್ತಿರಲಿಲ್ಲ. ಸ್ತ್ರೀಯರು ಚಂಚಲರೂ, ಅವರಲ್ಲಿ ನೈತಿಕ ಬಲವು ಕಡಿಮೆಯಿರುವದೆಂದೂ ಅರಮನೆಯಲ್ಲಿರುವಾಗ ಅವನಿಗೆ ಮನ ದಾದ್ದರಿಂದ ಸ್ತ್ರೀಯರ ವಿಷಯದಲ್ಲಿ ಅವನಿಗೆ ಬಲವಾದ ತಿರಸ್ಕಾರ; ಆದುದರಿಂದ ಮೊತ್ತ ಮೊದಲು ಅವನು ಸ್ತ್ರೀಯರನ್ನು ತನ್ನ ಭಿಕ್ಷು ಸಂಘ