ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೯೨ ಭಾರತೀಯ ಇತಿಹಾಸವು. ಹೊಸ ಸಾಂಪ್ರದಾಯದ ಬೀಜಗಳನ್ನು ಯಾವ ಸ್ಥಳಗಳರಿದರೆ. ಅವುಗಳ ಬೆಳವಳಿಗೆಗೆ ಹದವಾದ ಭೂಮಿ ದೊರೆತು ಅವು ಬೆಳೆಯಲಿಕ್ಕೆ ಅನುವಾಗುವದೆಂಬುದರ ಹದನವನ್ನರಿತು ಕೊ೦ಡೇ ಬುದ್ಧನು ಮೊದಲು ತನ್ನ ಹೊಸ ತತ್ವಗಳನ್ನು ಕೋಸಲ ಹಾಗೂ ಮಗಧ ದೇಶಗಳಲ್ಲಿ ಬಿತ್ತಿದನು. ಈ ಪ್ರದೇಶವು ಬ್ರಾಮೃ ಣ ಸಂಸ್ಕೃತಿಯಿಂದ ಬಹು ದೂರ ವಿದ್ದುದರಿಂದ ಇಲ್ಲಿ ಬೌದ್ಧ ಮತವು ಬೇರೂರಿ ಬೆಳೆಯಲು ಆಸ್ಪದ ದೊರೆ ಯಿ ತು. ಈ ದೇಶದ ಜನರ ಆಧ್ಯಾತ್ಮಿಕ ಜೀವನದಲ್ಲಿ ಬುದ್ಧನ ಮ ತ ತತ್ವ ಗಳು ಇಳಿದು ಇಂಗಿ ಹೋಗಿರುವಷ್ಟು ಮತ್ಯಾವ ದೇಶದಲ್ಲಿಯೂ, ಇ೦ಗಿರುವದಿಲ್ಲವೆಂಬುದು ಅಲ್ಲಿಯ ಜನ ಜೀವನದಿಂದ ತಿಳಿಯುತ್ತದೆ. ಬುದ್ಧ ಸಂಪ್ರದಾಯವು ಲೋಪವಾಗಿ ಅನೇಕ ಶತಕ ಗಳು ಸಂದು ಹೋದರೂ, ಅದರ ಹೆಗ್ಗುರುತುಗಳು ಇನ್ನೂ ಬಿಹಾರಪ್ರಾಂತದ ಜನ ಜೀವನದೊಳಗೆ ಎದ್ದು ಕಾಣಿಸುತ್ತಿವೆ. ಬೌದ್ದರ ವಿಹಾರಗಳು ಈ ಪ್ರಾಂತದೊಳಗೆ ಅಸಂಖ್ಯಾಕವಾಗಿದ್ದರಿಂದಲೇ ಈ ದೇಶವು ಬಿಹಾರ ವೆಂದು ಹೆಸರಾಯಿ ತು. ವಿಹಾರಗಳೆಂದರೆ ಬೌದ್ಧ ಭಿಕ್ಷುಗಳ ಮತಗಳು. ಬೌದ್ಧಮತವು ಸಯಾಮ, ಬ್ರಹ್ಮದೇಶ, ಸಿಲೋನ, ಜಾವಾ, ಸುಮಾತ್ರಾ, ಚೀನ, ಕೊರಿಯಾ, ಜಪಾನ ದೇಶಗಳಲ್ಲಿ ಇನ್ನೂ ಬೆಳೆದು ಕೊ೦ಡಿದೆ. ಬೌದ್ಧ ಸಂಪ್ರದಾಯದ ಐತಿಹಾಸಿಕ ಬೆಲೆ:- ಭಾರತೀಯರ ಚರಿತ್ರೆಯಲ್ಲಿ ಬೌದ್ಧ ಸಂಪ್ರದಾಯದ ಕಾರ್ಯವು ಅಷ್ಟಿಷ್ಟು ಮಹತ್ವ ದ್ದೆಂದು ಹೇಳಲಿಕ್ಕೆ ಬಾರದಷ್ಟು ಮಲಾಗಿರುವದು. ಭಗವಾನ್ ಬುದ್ಧ ದೇವನು ನೆರವೇರಿಸಿದ ಕಾರ್ಯದ ಮೇಲೆಯನ್ನು ಜ್ಞಾಪಕಕ್ಕೆ ತಂದು ಕೊಂಡರೆ, ಮಾನವಧರ್ಮದ ಬಗ್ಗೆ ಕುರುಡಾದ ಸಮಾಜಕ್ಕೆ ಕಣ್ಣು ಕೊಟ್ಟು, ಅದನ್ನು ನೀತಿಯ ದಾರಿಗೆಳದು, ತನಿಗ೦ವಾದ ಅಹಿಂಸೆಯನ್ನೂ, ಕಾರುಣ್ಯಾ ವನ್ನೂ, ಸ್ವತಃ ಆಚರಿಸಿ, ಅದನ್ನು ತಿದ್ದಿ ತಿಳಿಗೊಳಿಸಲು ಹೆಣ ಗಿದವರಲ್ಲಿ ಬುದ್ಧನೇ ಆದಿಗನು. ಅವನನ್ನು ಸರಿಗಟ್ಟುವ ಬೇರೆ ಪುರು ಷರು ಹುಟ್ಟಲಿಲ್ಲವೆಂದೇ ಹೇಳಬಹುದು. ಬುದ್ಧನು ತನ್ನ ಮತವನ್ನು ಕೇವಲ ಮತವಾಗಿಯೆ ಇಡದೆ, ಅರ್ಯ ಧರ್ಮಕ್ಕೆ ಪೋಷಕವಾಗು ವಂತೆ ಅದನ್ನ ಅದು ಬೇರೆ ಸಂಪ್ರದಾಯವನ್ನಾಗಿಯೇ ಬೆಳಿಸಿ ಹರಡಿ