ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೯೪ ಭಾರತೀಯರ ಇತಿಹಾಸವು. ಚಲಿಸುತ್ತಿದ್ದುದರಿಂದಲೇ, ಅವನು ಗೊಡ್ಡು ನೀತಿಮಾರ್ಗದರ್ಶಕನೂ, ತತ್ವಜ್ಞಾನಿಯೂ ಆಗಿ ಉಳಿಯದೆ, ತನ್ನ ಭಕುತರಿಂದ ಜೀವಂತ ದೇವ ರೆಂದೆಣಿಸಲ್ಪಟ್ಟನು. ಧರ್ಮ ಪಕ್ಷವಾಯುವಿನಿಂದ ಅ೦ ಧವಾದ ನಮ್ಮ ಧರ್ಮದೃಷ್ಟಿಯನ್ನು ತೆರೆದು ಸ್ವಲ್ಪು ವಿಶಾಲಗೊಳಿಸಿ, ನೋಡಿದರೆ, ಬುದ್ದ ದೇವನು ಆರ್ಯ ಧರ್ಮವನ್ನು ೩೦ ಡಿಸದೆ, ಅರ್ಯ ಧರ್ಮವನ್ನು ಮುಸುಕಿರುವ ಬಹು ದಿವಸದ ಬ ದಿಯನ್ನು ಹಾರಿಸಿ, ಅದರ ತನಿ ಗಿಚ್ಚನ: ಪ್ರಕಾಶವನ್ನೂ ಹೆಚ್ಚಿಸಿದನೆಂತಲೇ ಒಪ್ಪ ಬೇಕಾಗುವದು. ಬುದ್ಧ ದೇವನು ತನ್ನ ಸೂಕ್ಷ್ಮ ಬುದ್ಧಿಯಿಂದ ಸಮಾಜದ ತಪ್ಪನ್ನು ಕಂಡು ಹಿಡಿದು ಸುಮ್ಮನಿರದೆ, ಯಜ್ಞ ಯಾಗಾದಿಗಳ ಮಟ್ಟಿಗೆ ಬಿದ್ದು, ದಯೆಯೇ ಧರ್ಮ ಮಲವೆಂಬ ತತ್ವವನ್ನು ಮರೆತು, ಸಾಮಾನ್ಯವಾದ ನೀತಿ ತತ್ವಕ್ಕೆ ಅರೆದಾಳ ಹಾಕಿ ನಡೆಯುತ್ತಿರುವ ಗ್ರಾಮ ಸಮಾಜವನ್ನು ಒ೦ದು ಕೈಯಿ೦ದ ತಡೆದು, ಮತ್ತೊಂದು ಕೈ ೦ದ ಜನಜಂಗುಳಿಗೆ ಅವರ ಉದ್ಧಾರಕ್ಕಾಗಿ ಧರ್ಮದ ರಾಯ ಬೀದಿಯನ್ನು ತೋರಿಸಿದನು. ಬುದ್ದ ಕಾಲದ ಸಾಮಾಜಿಕ ಸ್ಥಿತಿಯು:- ಬುದ್ದಕಾಲೀನ ನಾಮಾ ಜಿಕ ಚಿತ್ರವನ್ನು ನೋಡುವ ಕುತೂ ಹಲವು ಪ್ರತಿಯೊಬ್ಬರಿಗಿರುವದು ಸರಿಯೇ! ಏಕೆಂದರೆ, ಆಯಾಯ ಕಾಲದ ಸಾಮಾಜಿಕ ಜೀವನದಲ್ಲಿ ಬೇರೆ ಬೇರೆ ಬದಲಾವಣೆಗಳಾಗಿ ಅದು ಮಾರ್ಪಡುತ್ತಿರುತ್ತದೆ. ಈ ದೇವನನ್ನು ತಿಳಿಸುವದೊ೦ದು ಇತಿಹಾಸದ ಪ್ರಮುಖ ಕಾರ್ಯವಾಗಿದೆ. ಮೇಲಾಗಿ, ಆಯಾ ಕಾಲದ ಸಮಾಜ ಚಿತ್ರಗಳನ್ನ ರಿಯದೆ, ದೇಶದ ಚರಿ ತ್ರೆಯ ಆಳಿಕೆ ಬಾಳಿಕೆಗಳನ್ನು ತಿಳಿಯುವದು ಕಷ್ಟವಾಗುತ್ತದೆ. ರಾಷ್ಟ್ರದ ಬಾಳು ಬದು ಕು ಗಳೆ ಚರಿತ್ರೆಯ ನಡು ಗಂಬಗಳು, ಬುದ್ದ ಕಾಲಕ್ಕೆ ಹಿಂದೂ ಸಮಾಜದೊಳಗೆ ಸ೦ಚಾಯತಿ ಪದ್ಧತಿಯಿತ್ತು. ಒಕ್ಕಲಿಗರು ತಮ್ಮ ತಮ್ಮ ಹೊಲಗಳನ್ನು ಬಿತ್ತಿ ಬೆಳೆದು ಕೊಂಡು ಸುಖದಿಂದಿರು ತಿದ್ದರು. ಪ್ರತಿಯೊಬ್ಬನ ಹೊಲಕ್ಕೆ ಈಗಿನಂತೆ ಬೇಲಿಗಳಿರದೆ, ಎಲ್ಲ ಹೊಲಗಳಿಗೆ ಕೂಡಿ ಒ೦ದೇ ಸಾಮಾನ್ಯವಾದ ಬೇಲಿಯಿರುತ್ತಿತ್ತು. ಹಳ್ಳಿಯ ಜನರಲ್ಲಿ ತಮ್ಮ ಜಾತಿ, ಕುಲ ಊರವರ ಬಗ್ಗೆ ವಿಲಕ್ಷಣವಾದ ಅಭಿಮಾನವಿರುತ್ತಿತ್ತು. ಯಾವುದೊಂದು ಕೆಲಸವನ್ನು ದುಡ್ಡು ತೆಗೆದು