ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

(ii)

ಜನಾಂಗದ ಇತಿಹಾಸವು ತನ್ನ ಕಾರ್ಯವನ್ನು ಚನ್ನಾಗಿ ನೆರವೇರಿಸ ಬೇಕಾದರೆ ಪೂರ್ವಿಕರ ಚರಿತ್ರೆಯನ್ನು ಹುರುಪುಗೊಳಿಸುವ ಭಾಷೆಯಲ್ಲಿ ವರ್ಣಿಸಿ ತರುಣ ಪೀಳಿಗೆಯ ಅಂತಃಕರಣದಲ್ಲಿ ಶೌರ್ಯ, ಧೈರ್ಯ, ಸಾಹಸ, ಕ್ಷಾತ್ರ ತೇಜಗಳನ್ನು ಒಡಮೂಡಿಸಬೇಕು; ಆ ಜನಾ೦ಗದ ಭಟ್ಟಂಗಿಯಾಗಬೇಕು; ಹಳವನಾಗಬೇಕು! ಶಿವಾಜಿ ಮಹಾರಾಜರು ಚಿಕ್ಕಂದಿನಲ್ಲಿಯೇ ರಾಮಾಯಣ ಮಹಾಭಾರತಾದಿ ಇತಿಹಾಸ ಪುರಾಣಗಳ ಶ್ರವಣವನ್ನು ದಿನಾಲು ಮಾಡಿದ್ದರಿಂದ ಅವರ ಹೃದಯದಲ್ಲಿ ಒಳ್ಳೆ ಸಂಸ್ಕಾರವಾಗಿ ಆ ಪೂರ್ವಜ ವೀರರಂತೆ ತಾವು ತಮ್ಮ ಚರಿತ್ರೆಯನ್ನು ಹೊಳವುಳ್ಳದ್ದಾಗಿ ಮಾಡಬೇಕೆಂದು ನಿಶ್ಚಯಿಸಿದರಂತೆ. ರಜಪೂತರ ಜೀವನವು ಕ್ಷಾತ್ರ ತೇಜದಿಂದ ಉಕ್ಕಿ ಇದುವರೆಗೂ ನಮ್ಮ ಕಣ್ಣನ್ನು ಕೂಡ ಕುಕ್ಕಿಸುವ ಮುಖ್ಯ ಕಾರಣವೆಂದರೆ ಪೂರ್ವಜರ ಚರಿತ್ರಶ್ರವಣವು ಆದರಿಂದ ಅವರ ಅಂತಃಕರಣದಲ್ಲಿ ನೆಲೆಗೊಂಡ ಸ್ವಾಭಿಮಾನ, ಸ್ವಕುಳಾಭಿಮಾನ, ಸ್ವದೇಶಾಭಿಮಾನ, ಅಪ್ರತಿಮ ಸ್ವಾರ್ಥತ್ಯಾಗ ಇವೇ.

ಈ ಹುರುದು೦ಬಿಸುವ ಕಾರ್ಯವಲ್ಲದೆ ಮತ್ತೊಂದು ಮಹತ್ವದ ಕಾರ್ಯವನ್ನು ಇತಿಹಾಸವು ಮಾಡತಕ್ಕದ್ದು. ನಮ್ಮ ಹಿರಿಯರಾದರೂ ದೇವರಿದ್ದಿಲ್ಲ. ಅವರಲ್ಲಿ ಕೆಲವು ದೋಷಗಳಿದ್ದವು. ಆ ದೋಷಗಳಿ೦ದಲೇ ಅವರು ಕೆಲವು ಅನರ್ಥಗಳನ್ನು ಅನುಭವಿಸಬೇಕಾಯಿತು. ಅವರು ಮಾಡಿದ ತಪ್ಪು ತಡೆಗಳ ವರ್ಣನೆಯನ್ನು ಕೇಳಿ ಅವುಗಳ ವಿಷಯದಲ್ಲಿ ತಿರಸ್ಕಾರಬುದ್ದಿಯಾ೦ಟಾಗಿ ಆ ತರಹದ ದೋಷಗಳು ನಮ್ಮಿಂದ ಸಂಭವಿಸದಂತೆಯೂ ಆ ಅನರ್ಥ ಪರಂಪರೆಗೆ ನಾವು ಗುರಿಯಾಗದಂತೆಯೂ ನಾವು ಎಚ್ಚರಗೊಳ್ಳತಕ್ಕದ್ದು. ಪೂರ್ವಜರ ಅನುಭವದ ಲಾಭವು ನಮಗೊದಗುವರು. ಅವರಿಗೆ ಕಂಡು ಬಂದ ಕುಮಾರ್ಗಗಳನ್ನು ಬಿಟ್ಟು ಸನ್ಮಾರ್ಗವನ್ನು ಇತಿಹಾಸವು ತೋರಿಸಿಕೊಡುತ್ತದೆ. ನರ್ಮ ಪೂರ್ವಜರ ಅವನತಿಗೆ ಅವರ ದುಂದುಗಾರಿಕೆಯ ಸ್ತ್ರೀಲೋಲುಪತೆಯ ವಿಲಾಸಭೋಗವೂ ಪ್ರಜೆಗಳ ಹಿತಾಹಿತದ ವಿಷಯದಲ್ಲಿ ಅನಾದರವೂ ಕರ್ತವ್ಯಪರಾಙ್ಮುಖತೆಯೂ ಹೇಗೆ ಕಾರಣೀಭೂತವಾದ