ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ಬ್ರಾಮ್ಮಣರು ತಮ್ಮ ಸಂಸ್ಕೃತಿಯನ್ನು ಕಾಯ್ದದ್ದು. ೧೯೭ ರದ ಸರಕುಗಳು, ರಾಜಮುದ್ರಾಂಕಿತವಾದ ನಾಣ್ಯಗಳು ಬಳಕೆಯಲ್ಲಿ ರಲಿಲ್ಲ. ಸರಕಿನ ವಿನಿಮಯ ದಿಂದ ವ್ಯಾಪಾರ ನಡಿಸುವ ಪದ್ಧತಿಯು ನಿಂತು ಹೋಗಿತ್ತು. ಜನರ ಅರ್ಥಿಕಸ್ಥಿತಿ ಹಾಗೂ ಓದು ಬರಹ:- ಒಟ್ಟಿನಮೇಲೆ, ಈ ಕಾಲಕ್ಕೆ ಜನಾ೦ಗದ ಅರ್ಧಿಕ ಸ್ಥಿತಿಯು ಚನ್ನಾಗಿತ್ತು. ವ್ಯಾಪಾರ ಉದ್ಯಮವೇ ಹೆಚ್ಚಾಗಿ ನಡೆಯುತ್ತಿದ್ದುದರಿ೦ದ ಜಮೀನದಾರ ವರ್ಗವು ಇರಲಿಲ್ಲ. ಒಕ್ಕಲಿಗರ ಸಂಖ್ಯೆಯು ಹೆಚ್ಚು. ಒಕ್ಕಲಿಗರೇ ಭೂಮಿಯ ಒಡೆತನ ನಡಿಸುತ್ತಿದ್ದರು. ನಾವು ಕಾರರು ಬಹಳ ಕಡಿಮೆಯಿದ್ದರು. ಕೌಶಾಂಬಿ, ಶ್ರಾವ, ವೈಶಾಲಿ, ರಾಜ ಗೃಹ, ಕಾಶಿ, ತಕ್ಷಶಿಲೆಯ ೦ಧ ದೊಡ್ಡ ರಾಜಧಾನಿಯ ಪಟ್ಟಣಗಳಲ್ಲಿ ಲಕ್ಷಾಧೀಶರಾದ ನಾವುಕಾರರು ಕೈ ಮೇಲೆ ಎಣಿಸುವಸ್ಥೆ ಇರುತ್ತಿದ್ದರ ಮೇಲಿಂದ ತತ್ಕಾಲೀನ ಜನರ ಅರ್ಥಿಕ ಸ್ಥಿತಿಯು ಹೇಗಿತ್ತೆಂಬುದು ಚೆನ್ನಾಗಿ ಪ್ರತೀತವಾಗುತ್ತದೆ. ಈ ಕಾಲಕ್ಕೆ `ಓದು ಬರೆಯಲಿಕ್ಕೆ ಬರಿಯ ವಿಶಿಷ್ಟ ವರ್ಗದವರೇ ಕಲಿಯದೆ, ಸಾಮಾನ್ಯರೂ, ಸ್ತ್ರೀಯರೂ ಸಹ ಕಲಿಯುತ್ತಿದ್ದರು. ಪರರ ಪತ್ರ ವ್ಯವಹಾರ ನಡೆಯುತ್ತಿದ್ದಿತು. ಪಶ್ಚಿಮಕ್ಕಿರುವ ಕುರು ಕ್ಷೇತ್ರದಿ೦ದ ಮಗಧದೇ ಶದ ವರೆಗೂ, ಉತ್ತರಕ್ಕಿರುವ ಶ್ರಾವಸ್ತಿಯಿಂದ ನೇಪಾಳರ ತನಕವೂ, ದಕ್ಷಿಣಕ್ಕೆ ಉಜ್ಜಯಿನಿಯ ವರೆಗೂ ಒಂದೇ ಒಂದು ಭಾಷೆ ಬಳಕೆಯಲ್ಲಿತ್ತು. ದಾರಿಕಾ ರರು ಹೋಗು ಬರುವ ಹೆದ್ದಾರಿಗಳ ಮೇಲೆ ಅಲ್ಲಲ್ಲಿ ಈಗಿನಂತೆ ರಾರಿಯ ಅಂತರವನ್ನು ಸೂಚಿಸುವ ಕಲ್ಲುಗಳೂ, ಪ್ರಯಾಣಿಕ ರೂ ಇಳಿಯುವ ಮನೆಗಳೂ ಇದ್ದ ಬಗ್ಗೆ ಉಲ್ಲೇಖವಿದೆ. ಹಲಗೆಯ ಮೇಲೆ ಮಳಲನ್ನು ಹಾಕಿ ವರ್ಗಾಕದಿಂದ ಬರೆಯುವ ರೂಢಿ ಯಿ ತ್ತು. ಅಕ್ಕರಿಕಾ ಎಂಬುದೊಂದು ಮಕ್ಕಳ ಆಟವೂ ಪ್ರಚಾರದ ಇತ್ತು. ಇದು ಸಾಮಾನ್ಯ ವಿದ್ಯೆಯ ಮಾತಾಯಿ ತು. ಬ್ರಾಮ್ಮಣರು ತಮ್ಮ ಸಂಸ್ಕೃತಿಯನ್ನು ಕಾಯ್ದದ್ದು :ಬುದ್ದ ಕಾಲವೆಂದರೆ, ಒಂದು ಬಗೆಯಿಂದ ಬ್ರಾಮ್ಮಣ ಧರ್ಮಕ್ಕೆ ಬಂದ ಗಂಡಾಂತರವೇ! ಆದುದರಿಂದ ಬ್ರಾಮ್ಮಣಸಂಸ್ಕೃತಿಯು ಈ ಕಾಲಕ್ಕೆ ಬಲವಾದ ಇರುಕಿನೊಳಗೆ ಸಿಕ್ಕಿಕೊಂಡಿತ್ತು. ಅರಸನಿಂದ ಆಳು ಮಗನ