ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯರ ಇತಿಹಾಸವು. ವನ್ನು ಮಾಡಿ, ಅದನ್ನು ಮೌರ್ಯರಿಗೆ ತಿಳಿಸಿದರು. ನಂದರ ಕುಯುಕ್ತಿ ಯಸ್ತರಿಯ ದಿದ ಮೌರ್ಯ ರು ಕೂಡಲೇ ಇದಕೊಪ್ಪಿ, ಉದ್ಯಾನಕ್ಕೆ ನಡೆದರು. ವನಭೋಜನಕ್ಕಾಗಿಯೇ ಬೇಕೆಂದು ನಿರ್ಮಿಸಿದ ದಿವ್ಯ ಅರಮನೆಯಲ್ಲಿ ರಾಜಪುತ್ರರೆಲ್ಲರು ಬಂದು ಸೇರಿ, ತಮತಮಗಾಗಿ ಹಾಕಿಟ್ಟ ಮಣೆಗಳ ಮೇಲೆ ಕು $ ತರು, ಅರಮನೆಯ ಕೆಳಗಣ ಅ೦ಕಣ ದೊಳಗೆ ಮೌರ್ಯರಿಗಾಗಿ ನೂರೊಂದು ಲೆಗಳೆ ಮಾತ್ರ ಹಾಕಲ್ಪ ಟಿದ್ದವು. ನಂದರು ಊಟಕ್ಕೆ ಕುಳಿತವರ ಪರನ ಮರಿಕೆಯನ್ನು ತೆಗೆದು ಕೊಳ್ಳುತ್ತ ಅಲ್ಲಲ್ಲಿ ತಿರುಗಾಡುತ್ತಿದ್ದರು, ನಂದರ ಒಳಸಂಚನ್ನರಿಯದ ಮೌರ್ಯರಿಗೆ ಈ ವಿಷಯದಲ್ಲಿ ರವೆಯ ಪ್ಯಾದ ರೂ ಸ೦ಶಯ ಬರಲಿಲ್ಲ. ಎಲ್ಲರೂ ಸಂತೋಷದಿಂದ ಊಟ ಮಾಡತೊಡಗಿದರು; ಹೀಗೆ ಎಲ್ಲರೂ ದಿವ್ಯವಾದ ಊಟದ ಸ೦ಭ ದೊಳಗೆ ಮೈ ಮರೆತಿರಲು, ಒಮ್ಮೆಲೇ ಕೆಳಗಿನ ಅ೦ಕಣದ ಬಾಗಿಲು ರಭಸದಿಂದ ಮುಕ್ತಿ ತು. ಗಾ ಆರ೦ದ ಬಾಗಿಲು ಮುಚ್ಚಿರಬಹುದೆಂದ ಕೂಡಲೇ ಬಾಗಿಲ ತೆರೆಯಿರೆಂದು ಕೂಗಿ ಗಂಟಲ ಹರಕೊ೦ಡದ್ದಾಯಿ ತು, ಯಾರಾದರೂ ಬಾಗಿಲು ತೆರೆ ಯ ಬಹು ದೆಂದ ಐದು ನಿಮಿಷ, ಹತ್ತು ನಿಮಿಷ, ಕೊನೆಗೆ ಅರ್ಧ ಗಂಟೆಯ ವರೆಗೆ ದಾರಿ ಕಾಯ್ರ ಬಾಗಿಲು ತೆರೆಯಲಿಲ್ಲ. ಏಳಲು ಬೇ ಕೆ೦ದರೆ, ಎದ್ದು ಕೈ ತೊಳೆಯಲು ನೀರಿಲ್ಲ; ಎದ್ದರೆ ಕುಳ್ಳಿರಲಿಕ್ಕೆ ಸ್ಥಳ ವಿಲ್ಲ. ಹೊರಗಿನಿಂದ ಒಳಕ್ಕೆ ಬರಲಿಕ್ಕೆ ಕಿಟಕಿಗಳಿಲ್ಲದ್ದರಿಂದ ನೂರಾರು ಜನರ ಶ್ವಾಸದಿ೦ದಲೂ, ದೀವಿಗೆಯ ಹೊಗಂದಲ, ಒಳಗಿನ ಗಾಳಿಯು ಕೆಲಹೊತ್ತಿನಲ್ಲಿ ವಿಷಮಯ ವಾ೦ ತು, ಬಾಯಾರಿಕೆ ೦ದಲೂ ಒಳಗಿನ ಸೆಕೆಯ ತಾಪದಿ೦ದಲೂ, ಉಸುರು ಕಟ್ಟಿ ಮರಣ ಸಂಕಟವನ್ನು ಸಹಿಸಲಾರದೆ, ಮೌರ್ಯರೆಲ್ಲರೂ ಎಚ್ಚರಗೆಟ್ಟು ಒಬ್ಬರ ಮೇಲೆ ಬ್ಬರು ಬಿದ್ದು ಇವನು ಅಣ್ಣ, ಈ ತನು ತಮ್ಮ ಎಂಬುವದನ್ನು ಮರೆತು ಒಬ್ಬರನ್ನೊಬ್ಬರು ಕಚ್ಚಿ, ಮೈ ಮೇಲಿನ ಬಟ್ಟೆಗಳನ್ನು ಹರಿದು ಕೊ೦ಡು ಗಾಳಿಗಾಗಿ ಹೆಣಗಾಡಿ ಹೊರಳಾಡಿ ಒದ್ದಾಡಿ, ದಿಕ್ಕಿಗೊಬ್ಬ ರ೦ತ ಬಿದ್ದು ಸತ್ತು ಹೋದರು! ಆದರೆ ಈ ದಾ ರು ವಾದ ಪ್ರಸಂಗ ದೊಳಗಿ೦ದ ಮೌರ್ಯ ವಂಶದ ಪುಣ್ಯ ದಿಂದ ಚಂದ್ರಗುಪ್ತನೊಬ್ಬನೇ