ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗ್ರೀಕರ ದಾಳಿ.

೨೦೫

ಯಿಂದಲೂ, ಮೈತೊಗಲು ಸುಟ್ಟು ಸುಲಿಯುವಂಥ ಕಾಡುಬಿಸಿಲಿನ ತಾಪದಿ೦ದಲೂ, ಹಣ್ಣುಹಣ್ಣಾಗಿ ಹೋದ ಸೈನಿಕರಿಗೆ ಕಾಡುಜನರೊಡನೆ ಕಾದುವದು ಆಗದನೀಗದ ಕೆಲಸವಾಗಿತ್ತು; ಆದರೂ ಅಲೆಕ್ಸಾಂಡರನು ಅಸಾಮಾನ್ಯವಾದ ತೇಜಸ್ವಿ ಪುರುಷನಿದ್ದುದರಿಂದ ಆಗಾಗ್ಗೆ ತಲೆಎತ್ತುವ ಎಡರುಗಳಿಗೆ ಎದೆಗುಂದದೆ, ಕೆಚ್ಚೆದೆಯಿಂದ ಮುನ್ನಡೆದನು. ಈ ಗುಡ್ಡಗಾಡು ಪ್ರದೇಶದೊಳಗಿನ ಒಂದು ಊರೊಳಗೆ ಅಲೆಕ್ಸಾಂಡರನ ಹೆಗಲಿಗೆ ಕಾಡುಜನರಿಂದ ಒಂದು ಬಾಣವು ತಗಲಿ ಗಾಯವಾಯಿತು. ತಮ್ಮ ಒಡೆಯನನ್ನು ಗಾಯಗೊಳಿಸಿದಕ್ಕಾಗಿ ಅಲೆಕ್ಸಾಂಡರನ ದಂಡಿನೊಳಗಿನ ಸಿಪಾಯಿಗಳು ರೇಗಿ ಅ ಊರಲ್ಲಿ ಸೆರೆಸವಿಡಿದ ಸೆರೆಯಾಳುಗಳನೆಲ್ಲ ಒತ್ತಡವೆಯೇ ಕೊಲೆಮಾಡಿ, ಊರನ್ನು ಹಾಳುಗೆಡವಿರರು; ಹೀಗೆ ಗುಡ್ಡಗಾಡೊಳಗಿನ ಪಾಳೆಯಗಾರರನ್ನು ಮುರಿಬಡಿದು ಅವರನ್ನು ಗೆಲಿಯುತ್ತಲೂ, ಸಾಧ್ಯವಿದ್ದರೆ ಅವರಿಂದ ಸಹಾಯ ಪಡೆಯುತ್ತಲೂ, ಕಾಡಿನ ಪಯಣದಿಂದ ಬೇಸತ್ತ ದಂಡಿನವರಿಗೆ ಆಗಾಗ್ಗೆ ವಿಶ್ರಾಂತಿ ಕೊಡುತ್ತಲೂ, ಕಾಡುಜನರ ಆಟನೋಟಗಳನ್ನು ನೋಡಿ ನಲಿಯುತ್ತಲೂ ಅಲೆಕ್ಸಾಂಡರನು ಓಹಿಂದಕ್ಕೆ ಬಂದು ತಲ್ಪಿದನು. ಹೊಸದಾಗಿ ತಕ್ಷಶಿಲೆಯ ಪಟ್ಟಕ್ಕೆ ಕುಳಿತ೦ಧ ಅ೦ಭಿರಾಜನು ಇಲ್ಲಿಗೆನೇ ಅಲೆಕ್ಸಾಂಡರನ ಕಡೆಗೆ ತನ್ನ ರಾಯಭಾರಿಯನ್ನು ಕಳುಹಿ, ಅಲೆಕ್ಸಾಂಡರನ ಮಾಂಡಲಿಕನಾಗಲೊಪ್ಪಿ ಆತನಿಗೆ ಕಾಣಿಕೆಯೆಂದು ವೆಗ್ಗಳ ದ್ರವ್ಯವನ್ನೂ ೭೦೦ ಕುದುರೆ, ೩೦ ಅನೆ, ೩ ನಾವಿರ ಎತ್ತು, ೧೦ ಸಾವಿರ ಕುರಿಗಳನ್ನೂ ಒಪ್ಪಿಸಿದನು. ಈ ಸಮಯಕ್ಕೆ ತಕ್ಷಶಿಲೆಯ ಅರಸನಿಗೂ ಪೋರಸರಾಜನಿಗೂ ಹಗೆತನವಿದ್ದುದರಿಂದ ತನಗೆ ಅಲೆಕ್ಸಾಂಡರನಿಂದ ನೆರವು ದೊರೆಯಬೇಕೆಂಬ ಒಳಉದ್ದೇಶದಿಂದ ಹೀಗೆ ಮಾಡಿದನಂತೆ ! ಈ ಕಾಲಕ್ಕೆ ತಕ್ಷಶಿಲೆಯು ದೊಡ್ಡದೊಂದು ವಿದ್ಯಾಪೀಠವೆಂದು ಖ್ಯಾತಿಗೂ೦ಡಿದ್ದು, ದೂರದೂರಿನ ದೇಶಗಳಿಂದ ಇಲ್ಲಿಗೆ ವಿದ್ಯಾರ್ಥಿಗಳೂ, ವಿದ್ವಾಂಸರೂ ಅಧ್ಯಯನಕ್ಕಾಗಿ ಬರುತ್ತಿದ್ದರು. ಅಲೆಕ್ಸಾಂಡರನು ತಕ್ಷಶಿಲೆಯ ವಿದ್ಯಾಪೀಠದೊಳಗಿರುವ ವಿದ್ವಾಂಸರೊಡನೆ ಮಾತುಕಥೆಯಾಡಿದನ೦ತೆ! ತಕ್ಷಶಿಲೆಯ ಅರಸನೊಡನೆ ಈ ಬಗೆಯಾಗಿ