ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

= ಎಲ್ಲರೊಡನೆ ಲಗ್ಗೆ. ೨೧೧ ಅಲೆಕ್ಸಾಂಡರನು ಮಾತ್ರ ಹಾರಿರುವ ಒಂದು ಗಿಡವನ್ನು ಆತು ಕೊ೦ಡು ನಿಂತನು. ಅಲ್ಲಿಯ ಜನರಿಗೂ ಒಂಟಿಗನಾದ ಅವನಿಗೂ ಲಗ್ಗೆ ಹತ್ತಿತು. ಈ ಲಗ್ಗೆಯಲ್ಲಿ ಕೋಟೆಯ ಪಾಳೆಯಗಾರನು ಮಡಿದನು; ಆದರೂ ಅಲೆಕ್ಸಾಂಡರನು ಒಬ್ಬೊಂಟಿಗನಾಗಿ ಅಷ್ಟು ಜನರೊಡನೆ ಕಾದುವ ಭರ ದೊಳಗೆ ಅವನ ಮೈಗೆ ಬಾ ಣದ ಪೆಟ್ಟು ತಗಲಿ ಕೆಳಕ್ಕೆ ಬಿದ್ದನು. ಈ ಸಮಯ ವನ್ನರಿತು ಕೊ೦ಡು ನೆರೆಯಲ್ಲಿದ್ದ ಆತನ ದಂಡಾಳು ಅಲೆಕ್ಸಾಂಡ ರನ ಮೇಲೆ ಜಿಲಬತ್ತನ್ನು ಬೀಸಾಡಿದನು. ಅವರಿಬ್ಬರೂ ಕಾದಲಾರಂಭಿಸಿ ದರು. ಕೋಟೆಯ ಸ್ನೇರಿ ಬಂದು ತಮ್ಮ ರಾಜನಿಗೆ ನೆರವಾಗಬೇಕೆಂದರೆ ಕೊಟೆಗೆ ಹಚ್ಚಿದ ನಿಚ್ಚಣಿಕೆಯು ಮುರಿದು ಹೋದದ್ದರಿಂದ ಗ್ರೀಕ ದಂಡಾಳುಗಳು ಬಹಳ ಹೊತ್ತಿನವರೆಗೆ ಚಡಪಡಿಸಿ ಕೊನೆಗೆ ಹೇಗೊ ಸಂಕಟ ಪಟ್ಟು ಕೋಟೆಯ ನೈರಿ ಕೋಟೆಯ ಬಾಗಿಲವನ್ನೊ ತೆದು ಒಳಗೆ ಧುಮುಕಿ ತೀರ ಹತಾಶನಾಗಿರುವ ಅಲೆಕ್ಸಾಂಡರನನ್ನು ಳೆಸಿದರು. ಈ ಲಗ್ಗೆಯಲ್ಲಿ ಅಲೆಕ್ಸಾಂಡರನ ಎದೆಯಲ್ಲಿ ಬಾಣ ನೆಟ್ಟಿದ್ದರಿಂದ ಅವನು ಬದಕುವದೇ ಕೈ ಮೀರಿದ ಕೆಲಸವಾಗಿತ್ತು; ಆದರೆ ಸ್ವಾಭಾವಿಕ ವಾಗಿ ಅವನ ಮೈ ಕಟ್ಟು ಬಹು ಗಟ್ಟಿಯಿರುವದರಿಂದ ಇದನ್ನು ಲೆಕ್ಕಿಸದೆ ಬಾಣವನ್ನು ಶಸ್ತ್ರಕ್ರಿಯೆಯಿಂದ ತೆಗೆಯಿಸಿಕೊಂಡು ಕ್ರಮೇಣ ನೆಟ್ಟ ಗಾ ದನು. ಮಲ್ಲರು ಅಲೆಕ್ಸಾಂಡರನಿಗೆ ಶರಣು ಬಂದರು; ಅಲ್ಲದೆ ನೆರೆಯ ಪುಂಡರು ಗ್ರೀಕ ಅರಸನ ಶೌರ್ಯದ ಕೀರ್ತಿಯನ್ನು ಕೇಳಿ ತಾನಾ ಗಿಯೇ ಕಪ್ಪು ಕಾಣಿಕೆಯೊಡನೆ ಶರಣಾಗತರಾದರು. ಈ ಪ್ರಾಂತಕ್ಕೆಲ್ಲ ಅಲೆಕ್ಸಾಂಡರನು ಫಿಲಿಪಾಸ ಎ೦ಬೊಬ್ಬ ತನ್ನ ಸರದಾರನನ್ನು 'ಕತ್ರವ' ನನ್ನಾಗಿ ಇಟ್ಟನು. ದಾರಿಯೊಳಗೆ ಅಲ್ಲಲ್ಲಿಯ ಸೃಷ್ಟಿ ಸೌಂದರ್ಯವನ್ನು ನೋಡುತ್ತಲೂ ಹಲವು ಬಗೆಯ ಶೋಧಗಳನ್ನು ನಡಿಸುತ್ತಲೂ ಸಿಂಧು ನದಿಯ ಮುಖಕ್ಕೆ ಬಂದು ಮುಟ್ಟಿ, ತನ್ನ ಒ೦ದು ದಂಡಿನ ತಂಡನ್ನು ಜಲಮಾರ್ಗವಾಗಿ ನಡಿಸಿಕೊಂಡು ಹೋಗಬೇಕೆಂದೂ, ತಾನು ಸ್ವತಃ ಮತ್ತೊಂದು ದಂಡಿನ ತಂಡನ್ನು ತೆಗೆದು ಕೊಂಡು ಭೂ ಮಾರ್ಗವಾಗಿ ಹೋಗಬೇಕೆ೦ದೂ ನಿರ್ಧರಿಸಿ, ಆ ಪ್ರಕಾರ ಜಲಮಾರ್ಗ ಪ್ರಯಾಣದ ಹೊಣೆಯನ್ನು ನಿಯಾರ್ಕಸನಿಗೆ ಹೊರಿಸಿ, ತಾನು ಏದೊಳಗಿಂದ