ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ಭಾರತೀಯರ ಇತಿಹಾಸವು. ನಡೆದನು, ನಿಯಾ೯ಸನಿಗೂ ಅಲೆಕ್ಸಾಂಡರನಿಗೂ ಮಾರ್ಗದೊಳಗೆ ಕಷ್ಟ ಪರಂಪರೆಗಳಿಗೀಡಾಗಬೇಕಾಯಿತು. ಅಲೆಕ್ಸಾಂಡರನಿಗೂ ಅವನ ದಂಡಿನವರಿಗೂ ಹಾಲಾ ಪರ್ವತದೊಳಗೆ ಕುಡಿಯಲಿಕ್ಕೆ ನೀರು ಸಹ ದೊರೆಯದ್ದರಿ೦ದಲೂ, ಹಾಲಾ ಪರ್ವತದ ಬೆಂಗಾಡಿನಿಂದಲೂ ಊಹಿಸ ಲಾರದಷ್ಟು ತಾ ಪವಾಗಿ ನಾವಿರಾರು ಸೈನಿಕರೂ, ದನಕರುಗಳೂ ನಾವಿ ಗಡೆಯಾದರು. ಈ ಬೆಂಗಾಡಿನಲ್ಲಿ ಪಯಣ ನಡಿಸಿರುವಾಗ ಸ್ವತಃ ಅಲೆಕ್ಸಾಂಡರನಿಗೂ ನೀರಿನ ಬಳಲಿಕೆಯಾಯಿತು. ದಂಡಾಳುಗಳು ಎಲ್ಲಿಂದಲೋ ಒಂದು ಬಟ್ಟಲು ನೀರು ತಂದು ಕೊಟ್ಟ ರು. ತನ್ನ ದಂಡಾ ಳುಗಳು ನೀರಿನಢಗೆಯಿಂದ ಪ್ರಾಣ ಬಿಡುತ್ತಿರಲು ತಾನು ಒಂದು ಬಟ್ಟಲ ನೀರು ಕುಡಿದು ನೀರಡಿಕೆಯನ್ನು ಹಿಂಗಿಸಿಕೊಳ್ಳು ವದು ಸರಿಯಲ್ಲವೆಂದು ಆ ನೀರನ್ನು ಮಳಲಿನಲ್ಲಿ ಸುರಿದು ಬಿಟ್ಟ ನಂತೆ ! ಈ ದೃಷ್ಟಾಂತದಿಂದ ಅಲೆಕ್ಸಾಂಡರನಲ್ಲಿ ಸಹಾನುಭೂತಿ ಗುಣವು ಎಷ್ಟು ಬಲವಾಗಿತ್ತೆಂ ಬದು ತಿಳಿಯುತ್ತದೆ. ಮುಂದೆ ಅಲೆಕ್ಸಾಂಡರನು ಹೀಗೆ ಕಷ್ಟ ಪಡುತ್ತಲೇ ಈಗ ತುರ್ಕ ಸ್ಥಾನದೊಳಗೆ ಯು ಟೇಸ ನದಿಯ ದಂಡೆಯ ಮೇಲಿ ರುವ ಬಾ ಬಿಲನ್ನ ಪಟ್ಟಣಕ್ಕೆ ಸೇರಿದನು. ದೂರಿನ ಪಯಣದಿಂದ ಅವನು ಬಲಗೆಟ್ಟದ್ದನು; ಇಂಥ ಸ್ಥಿತಿಯಲ್ಲಿ ಒಂದು ದಿನ ನದಿಯಲ್ಲಿ ಈ ಜಾಡಿದ್ದೆ ನೆವವಾಯಿತು. ಆತನಿಗೆ ಬಂದ ಜ್ವರ ಆರದೆ ದಿನದಿನಕ್ಕೆ ಏರುತ್ತ ಹೋಗಿ ಕೊನೆಗೆ ಜ್ವರ ಬೆನೆಗೆ ತುತ್ತಾದನು. ಅಲೆಕ್ಸಾಂಡರನ ದಾಳಿಯು ಕ್ರಿ. ಶ. ಪೂ. ೩೨೭ರಿಂದ ೩೨೪ರ ವರೆಗೆ ಸಾಗಿತ್ತು. ಅಲೆಕ್ಸಾಂಡರನ ಗುಣ ಕಲಾಪ:- ತನ್ನ ಆಳಿಕೆಯ ಸ್ವಲ್ಪಾವಧಿ ಯಲ್ಲಿಯೇ ಅಲೆಕ್ಸಾಂಡರನು ಮೀರಿದ ಪರಾಕ್ರಮವನ್ನು ತೋರಿಸಿ, ತನ್ನ ಹಸರಿನ ಜಯಭೇರಿಯನ್ನು ಇಡೀ ಭೂಮಂಡಲದೊಳಗೆ ಮೊಳ ಗಿಸಲಿಕ್ಕೆ ಹಚ್ಚಿದ್ದೆಂದರೆ ಇತಿಹಾಸದೊಳಗೆ ಇದುವೇ ಮೊದಲನೇ ಉದಾಹರಣೆ. ಆದುದರಿಂದಲೇ ಇತಿ ಹಾಸಗಾರರು ಆತನಿಗೆ ಜಗಜಟ್ಟ' ಯೆಂದು ಗೌರವಿಸಿದ್ದಾರೆ. ಗ್ರೀಕರು ಸ್ವಾಭಾವಿಕವಾಗಿ ಬಂಟರ ಜಾತಿಯವರಾದ್ದರಿಂದ ಅವರು ಯುದ್ಧನೀತಿಯಲ್ಲಿ ಒಳ್ಳೆ ಮೇಲು ಗೆ ಯಾಗಿದ್ದರು. ಅವರ ಯುದ್ಧನೀತಿಯು ಚನ್ನಾಗಿ ಪರಿಣತಾವಸ್ಥೆಯ