ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦

ಭಾರತೀಯರ ಇತಿಹಾಸವು.

ಯಾಗಿ ಎಲ್ಲಿಯೋ ಒಂದು ಕೊಂಪೆಯಲ್ಲಿ ದೈನ್ಯದಿಂದಲೂ ದುಃಖದಿಂದಲೂ ಕಾಲಯಾಪನೆ ಮಾಡುತ್ತಿದ್ದ ಚಂದ್ರಗುಪ್ತನಿಗೆ ಚಾಣಕ್ಯರ ದಯೆಯಿ೦ದ ಅರಸುಪಟ್ಟವು ದೊರೆಯಲು, ಚಂದ್ರಗುಪ್ತನು ಕೃತಜ್ಞತೆಯ ಭರದಿಂದ ಮೈಮರೆತವನಾಗಿ ಸಭೆಯೊಳಗೆ ಚಾಣಕ್ಯರ ಪಾದಗಳಿಗೆರಗಿ "ನಿಮ್ಮಿಂದ ಕೃತಾರ್ಥನಾದೆನು; ದೈವಗೇಡಿಯಾದ ನಾನು ದೈವಶಾಲಿ ಯಾದೆನು” ಎಂದು ತನ್ನನ್ನು ಆಶೀರ್ವಾದಿಸಲು ಬಿನ್ನವಿಸಿದನು. ತನ್ನಿಂದಲೇ ಮೂರ್ತಸ್ವರೂಪಕ್ಕೆ ಬ೦ದ೦ಧ ಮೂರ್ತಿಯು ದಿನದಿನಕ್ಕೆ ಉಚ್ಛಾಯಕ್ಕೇರುವಂತೆ ಚಾಣಕ್ಯರು ಆನಂದ ನಿರ್ಭರರಾಗಿ ಹರಿಸಿ ಆತನಿಗೆ ಅನೇಕ ಬಗೆಯ ರಾಜಧರ್ಮ, ನೀತಿ ಧರ್ಮಗಳನ್ನು ಹೇಳಿ. ಪರರಾಯರಿಂದ ಸ್ವದೇಶವನ್ನು ರಕ್ಷಿಸಲು ಬಲವಾಗಿ ಪ್ರೇರಿಸಿದನು ರಾಜನೀತಿಯನ್ನು ಕುರಿತು ಒಂದು ಕೌಟಿಲ್ಯಶಾಸ್ತ್ರವೆಂಬುವ ಗ್ರಂಥವನ್ನು ಬರೆದು ಅನೇಕ ವರ್ಷಗಳ ವರೆಗೆ ಮಂತ್ರಿಯಾಗಿ ರಾಜ್ಯವಾಳಿದರು ಚಾಣಕರಂಧ ಹಣೆಬರಹಗಾರರು ಜಗತ್ತಿನ ಇತಿಹಾಸದೊಳಗೆ ತೀರ ಸ್ವಲ್ಪು ಜನರು ಸಿಗುತ್ತಾರೆ; ಆದರೆ ಅ೦ಧವರು ಚಂದ್ರಗುಪ್ತ ನಂತಹ ದೈವಶಾಲಿಗಳಿಗೆ ಲಭಿಸಬೇಕೆ ಹೊರ್ತು ಅನ್ಯರಿಗಲ್ಲ.

ಹಿಂದುಸ್ಥಾನದ ಮೊದಲನೇ ಚಕ್ರವರ್ತಿ:-ರಾಜನೀತಿ ನಿಪುಣನಾದ ಚಾಣಕ್ಯ ಮಂತ್ರಿಯ ಮ೦ತ್ರಾಲೋಚನೆಯಂತೆ ಚಂದ್ರಗುಪ್ತನು ಮೀರಿದ ವೈಭವದಿಂದ ರಾಜ್ಯವಾಳತೊಡಗಿದನು. ಮನುಷ್ಯನಿಗೆ ದೈವವು ಅನುಕೂಲವಾಯಿತೆಂದರೆ, ಹಿ೦ದೆ ಆತನ ಕೈಯಿ೦ದ ಆಗದ ನೀಗದಂಥ ಕಾರ್ಯಗಳು ಹಾಯವಾಗಿ ಸಾಗುತ್ತವೆ; ದೈವದಾಟವೆ೦ಥದು ? ಅದರ ಮಾಟಗಾರಿಕೆಯ ಮಂತ್ರಕ್ಕೆ ಶಿಲುಕಿದ ಹಿಂದಿನ ಹೆದರುಕುಳಿ ಯಾದ ಚಂದ್ರಗುಪ್ತನು ಇದೀಗ ಮಹಾ ಪರಾಕ್ರಮ ಶಾಲಿಯಾಗಿ ಬೆಳಗಿ, ತಮ್ಮತಮ್ಮೊಳಗೆ ಬಡಿದಾಡುತ್ತಿರುವ ನೆರೆಯಲ್ಲಿರುವ ಚಿಕ್ಕ ಪುಟ್ಟ ರಾಜರುಗಳನ್ನು ತನ್ನ ಬಾಹುಬಲದಿಂದ ಸೋಲಿಸಿ ಮಾಂಡಲಿಕ ರನ್ನಾಗಿಸಿ, ಚಕ್ರವರ್ತಿ ಪದವಿಯನ್ನೇರಿ ಏಕಛತ್ರಾಧಿಪನಾಗಿ ಆಳಿದನು. ಕ್ರಿ. ಶ. ಪೂ. ೩೦೫ ರ ಸಮಾರಕ್ಕೆ ಈಗಿನ ಏಸಿಯ ಮೈನರ, ಸಿರಿಯಾ ಹಾಗೂ ಕೆಲವು ಪೂರ್ವ ದಿಕ್ಕಿನ ಪ್ರಾಂತಗಳನ್ನಾಕ್ರಮಿಸಿಕೊಂಡು