ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಹಿಂದುಸ್ಥಾನದ ಮೊದಲನೇ ಚಕ್ರವರ್ತಿ. ೨೨೧ ತಾನೇ ದೊರೆಯೆಂದು ಅಳುತ್ತಿದ್ದ ಶಿಕ೦ದರನ ಸುಭೇದಾರನಾದ ಸೆಲ್ಕು ಕಸನೂ, ತನ್ನ ದೊರೆಯ೦ತೆ ತಾನೂ ಸಿ೦ಧುನದಿಯನ್ನು ದಾಟಿ ಹಿಂದು ದೇಶವನ್ನು ಗೆಲಿಯ ಬೇಕೆ೦ಬ ಉನ್ನ ತಾ ಕಾ೦ಕ್ಷೆಯಿಂದ ದೊಡ್ಡ ದಂಡಿ ನೊಡನೆ ಹಿಂದೂ ದೇಶವನ್ನು ನುಗ್ಗಿದನು; ಅದರೆ ಮೊದಲಿನಂತೆ ಈ ಕಾಲಕ್ಕೆ ಹಿಂದೂ ದೇಶವು ನಿರ್ವಿರವಾಗಿರಲಿಲ್ಲ. ಚಂದ್ರ ಗುಹ್ಮನಂತಹ ಪ್ರತಾಪಶಾಲಿಯಾದ ಸೂರ್ಯನು ಇಡೀ ಹಿಂದೂ ದೇಶವನ್ನೆಲ್ಲ ಅಳಿ, ಪರ ರಾಯರಿಗೆ ಭಯ೦ಕರನಾಗಿ ತೋರುತ್ತಿದ್ದದರಿಂದ ಅವನ ಮುಂದೆ ಸೆಲ್ಯುಕಸನ ಬೆಳಕು ಮಸಕಾಗಿ ಶರಣಾಗತನಾಗಬೇಕಾಯಿತು. ಅವ ನಿ೦ದ ಪ೦ಜಾಬ, ಬಲೂಚಿಸ್ಥಾನ, ಅಫಗಾಣಿ ನ್ಯಾನ ಪ್ರಾ೦ತಗಳನ್ನು ತೆಗೆದುಕೊಂಡು ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತನು ಸಲುವಳಿಯಿ೦ದ ಸೆಲುಕಸನಿಗೆ ೫೦೦ ಆನೆಗಳನ್ನು ಸಲ್ಲಿಸಿದನು. ಈ ಮೇರೆಗೆ ಉಭಯ ತ ಕಲ್ಲಿ ಸ್ನೇಹ ಬೆಳೆದುದರಿಂದ ಮುಂದೆ ಇದರಿಂದಲೇ ಸೆಲುಕಸನು ತನ್ನ ಮಗಳನ್ನು ಚಂದ್ರಗುಪ್ತನಿಗೆ ಕೊಟ್ಟು ಶರೀರಸಂಬಂಧ ಬೆಳೆಸಿದನು. ಸೆಲ್ಯುಕಸನು ತನ್ನ ಪರವಾಗಿ ಮೆಗಾ ಸ್ಟೇನಿನ್ ಎ೦ಬೊಬ್ಬ ರಾಯಭಾರಿ ಯನ್ನು ಚಂದ್ರಗುಪ್ತನ ಅನ್ಯಾನದಲ್ಲಿರಿಸಿದನು. ಈ ತನು ತತ್ಕಾಲೀನ ಚಂದ್ರಗುಪ್ತನ ರಾಜ್ಯದ ಇತಿಹಾಸವನ್ನು ಬರೆದನು; ಅದರ ಬಹು ಭಾಗವು ಕಳೆದು ಹೋದ್ದರಿಂದ, ಶಿಕ್ಕ ಹಲಕೆಲವು ಸಂಗತಿಗಳನ್ನು ಮು೦ದೆ ಕೊಡುವೆವು. ಚಂದ್ರಗುಪ್ತನ ರಾಜ್ಯವು ಆತನ ಜೀವಮಾನ ದೊಳಗೆ ಉತ್ತರಕ್ಕೆ ಹಿಮಾಲಯ ದಿಂದ ದಕ್ಷಿಣಕ್ಕೆ ಮೈಸೂರ ಪ್ರಾಂತದ ವರೆಗೂ, ಪೂರ್ವಕ್ಕೆ ಅನಾಮದಿಂದ ಪಶ್ಚಿಮಕ್ಕೆ ಕಂದಹಾರದ ವರೆಗೂ ಹರಡಿಕೊಂಡಿತ್ತು. ಇಡೀ ಭರತಖಂಡವನ್ನು ಅಖಂಡವಾಗಿ ೨೫ ವರ್ಷಗಳವರೆಗೆ ಒಂದೇ ಕೊಡೆಯಿ೦ದ ಆಳಿದ ಚಕ್ರವರ್ತಿಗಳಲ್ಲಿ ಚಂದ್ರ ಗುಪ್ತನೇ ಮೊದಲಿಗನು. ತನ್ನ ಗುರುಗಳೂ, ತನ್ನ ದೈವ ತಿರುಗಿಸುವ ವರೂ ಆದ ಚಾಣಕ್ಯರಿಂದ ರಚಿಸಲ್ಪಟ್ಟ ಕೌಟಿಲ್ಯ ಶಾಸ್ತ್ರ ( ಅರ್ಧ ಶಾಸ್ತ್ರ) ಗ್ರಂಥದ ಆಧಾರವಿಟ್ಟು ಕೊಂಡು ಪ್ರಜೆಗಳಿಗೆ ಕ್ಷೇಮವಾಗುವಂತೆ ರಾಜ್ಯಭಾರ ನಡೆಯಿಸಿದನು. ಮುಂದೆ ತನಗೆ ದಿವಸಗಳಾದ ಬಳಿಕ ಹಿಂದೂ ರಾಜರ ಪದ್ಧತಿಯಂತೆ, ಮೋಕ್ಷ ಮಾರ್ಗವನ್ನನುಸರಿಸಿ ಜನ್ಮ