ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೨೩
ರಾಜ್ಯಭಾರ ನಡಿಸುವ ಕ್ರಮ.

ಇರಾಣಿಯ ಪದ್ಧತಿಯನ್ನೇ ಹೋಲುತ್ತಿದ್ದಿತು. ಚಿನ್ನದಿ೦ದ ಮಡಾಯಿಸಿದ ಪಲ್ಲಕ್ಕಿಯಲ್ಲಿ ಕುಳಿತುಕೊ೦ಡಾಗಲಿ, ಸಿಂಗರಿಸಿದ ಆನೆಯ ಮೇಲೆ ಕುಳಿತಾಗಲಿ ಚಕ್ರವರ್ತಿಯು ತನ್ನ ಓಲಗಕ್ಕೆ ಬರುವವಾಡಿಕೆ. ಒಡ್ಡೋಲಗದ ಗಾಂಭಿರ್ಯ ವೈಭವವನ್ನು ವರ್ಣಿಸುವದೆಂತು ?' ಅರಮನೆಯೊಳಗೆ ಅರಸನ ಸುತ್ತಲೂ ಶಸ್ತ್ರಗಳಿಂದ ಸಜ್ಜಾಗಿರುವ ಹೆಂಗಸರ ಮೈಗಾವಲಿರುತ್ತಿತ್ತು. ಅರಮನೆಯಲ್ಲಿ ಆರಾರು ಅಡಿ ಅಗಲವಾಗಿರುವಭ೦ಗಾರದ ಪಾತ್ರೆಗಳನ್ನು ಬಳಸುತ್ತಿದ್ದರು.

ಅರಸನ ನಡೆನುಡಿ:- ಬೇಟೆಯಾಡುವ ಉದ್ದಿಶ್ಯ ಅರಸರಿಗಾಗಿ ಕಾಡುಗಳನ್ನು ಕಾಯ್ದಿಡುತ್ತಿದ್ದರು. ಬೇಟೆಯಲ್ಲಿ ಯಾವನಿಂದಾದರೂ ಅರಸನಿಗೆ ಅಡ್ಡಿಯುಂಟಾದರೆ ಅವನಿಗೆ ಶೀಕ್ಷೆ ಕೊಡುತ್ತಿದ್ದರು. ಜಟ್ಟಗಳ ಕುಸ್ತಿಗಳನ್ನೂ ಪ್ರಾಣಿಗಳ ಕಾದಾಟಗಳನ್ನೂ ಆಗಾಗ್ಗೆ ರಾಜರ ವಿನೋದಕ್ಕಾಗಿ ಅರಸರು ನಡೆಸುತ್ತಿದ್ದರು. ಆ ಕಾಲಕ್ಕೆ ಇರಾಣಿಯರೊಡನಾಟವು ಬಹು ಸಾಮಾನ್ಯವಾಗಿ ನಡೆಯುತ್ತಿದ್ದುದರಿಂದ ಅವರ ಸಂಸ್ಕೃತಿಯ ಹೆಗ್ಗುರುತುಗಳು ತಪ್ಪದೆ ಕಾಣುತ್ತಿದ್ದವು.

ರಾಜ್ಯಭಾರ ನಡಿಸುವ ಕ್ರಮ:– ಚ೦ದ್ರಗುಪ್ತನು ಸ್ವತಃ ನ೦ದರನ್ನು ನಿರ್ನಾಮಗೊಳಿಸಿ, ತಾನು ರಾಜನಾದ್ದರಿಂದ, ತನ್ನ ಮೇಲೆಯೂ ಅ೦ಧ ಪ್ರಸಂಗವೇ ಬರಬಹುದೇನೋ ಎಂದು ಭಯಪಡುತ್ತಿದ್ದನು; ಆದರೆ ಜಾತಿಯಿಂದ ಚಂದ್ರಗುಪ್ತನು ಮೈಯಲ್ಲಿ ಕಣ್ಣು ಮಾಡಿಕೊಂಡು ನಡೆಯುತ್ತಿದ್ದದರಿಂದಲೇ ನಂದರ ಅನುಯಾಯಿಗಳು ಆತನನ್ನು ಕೊಲ್ಲಬೇಕೆಂದು ಮಾಡಿದ ಮೋಸಕ್ಕೆಡೆಯಾಗಲಿಲ್ಲ. ಚಂದ್ರಗುಪ್ತನು ಮಂತ್ರಿ ಮ೦ಡಲವನ್ನೇರ್ಪಡಿಸಿದ್ದರೂ , ಕೊನೆಯ ತೀರ್ಮಾನ ಹೇಳುವ ಅಧಿಕಾರವನ್ನೆಲ್ಲ ತನ್ನ ಅಂಕೆಯಲ್ಲಿಯೇ ಇರಿಸಿಕೊಂಡಿದ್ದನು. ಚಂದ್ರಗುಪ್ತನಾಳಿಕೆಯಲ್ಲಿ ದಂಡನೀತಿಯು ರೂಢಿಯಲ್ಲಿತ್ತು; ಅಪರಾಧಿಯನ್ನು ಬಲವಾಗಿ ದಂಡಿಸಿ, ಅವನಿಂದ ದಂಡವನ್ನು ತೆಗೆದು ಕೊಂಡು ಅರಮನೆಯ ಬೊಕ್ಕಸಕ್ಕೆ ಸೇರಿಸುತ್ತಿದ್ದರು. ಕಳ್ಳತನಮಾಡಿದವರಿಗೆ ಎಳ್ಳಷ್ಟು ಕನಿಕರ ತೋರದೆ, ಅವರಿಂದ ನಿಜಸ್ಥಿತಿಯನ್ನು ಹೊರಗೆಡಹಲಿಕ್ಕೆ ಹಿಂದುಮುಂದೆ ನೋಡುತ್ತಿರಲಿಲ್ಲ. ಮನೆಗೆ ಬೆಂಕೆಹಚ್ಚಿದವನನ್ನು ಬೆಂಕೆ