ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಆಸಕ, ೨೨೬ ಅಶೋಕ:- ಕ್ರಿ. ಶ. ಪೂ. ೨೭೫-೨೩೨ ರ ವರೆಗೆ. ಬಿ೦ದ ನಾ ಶನ ತರುವಾಯ ಅಶೋಕನು ತನ್ನ ಅಣ್ಣ ತಮ್ಮಂದಿರೊಡನೆ ಬಡಿದಾಡಿ ತಾನೇ ಪಟ್ಟವೇರಿದನು. ಚಂದ್ರಗುಪ್ತನು ಆಳಿ ಬಾಳಿ ಹೋದನಂತರ ಅವನ ಮನೆತನದಲ್ಲಿ ಹುಟ್ಟಿದ ಶ್ರೇಷ್ಠ ವಾದ ವಿಭೂತಿ ಪುರುಷನೆಂದರೆ ಅಶೋಕನೇ ಸರಿ. ಈತನಲ್ಲಿ ಮೊಟ್ಟ ಮೊದಲು ಹೇಳುವಷ್ಟೇನೂ ಧರ್ಮ ಬುದ್ಧಿಯಾಗಲಿ, ಪ್ರಜೆಗಳ ವಿಷಯದಲ್ಲಿ ಅನುರಾಗವಾಗಲಿ ಕಂಡು ಬರಲಿಲ್ಲ. ಎಲ್ಲರಂತೆ ಈತನು ವಿಲಾಸದಲ್ಲಿಯೇ ಮೈ ಮರೆತು ಕಾಲಹರಣ ಮಾಡುತ್ತಿದ್ದನು. ಆದರೆ, ಕಲಿಂಗರು ಅಶೋಕನ ವಿರು ದ್ದವಾಗಿ ಬಂಡಾಯವೆಸಿದೊಂದೇ ತಡ; ಆ ಶೋಕನಿಗೆ ಬಲಗಾ ಲವು ಸಂಧಿಸಿತು. ಕಲಿಂಗದೇಶಕ್ಕೆ ದಂಡೆತ್ತಿ ಹೋಗಿ ಅಶೋಕನು ಅವರನ್ನು ಮುರಿಬಡಿದು ತನ್ನ ಪಾದಕ್ಕೆರಗುವಂತೆ ಮಾಡಿದನು. ಈ ಯುದ್ಧದೊಳಗೆ ಆ ಶೋಕನು ೧ ಲಕ್ಷ ಜನರ ನೆತ್ತರ ಕಾವಲಿ ಹರಿಸಿದ್ದ ಲ್ಲದೆ, ತನ್ನ ದೇಶಕ್ಕೆ ಕಲಿಂಗ ದೇಶದಿಂದ ಒಂದೂವರೆ ಲಕ್ಷ ಜನರನ್ನು ಸೆರೆಯಾಳಾಗಿ ಒಯ್ದನು. ಇದುವೇ ಆ ಶೋಕನ ಮೊದಲಿನ ಹಾಗೂ ಕೊನೆಯ ಕಾಳಗವು. ಈ ಕಾಲಕ್ಕೆ ಬೆಳೆಯುತ್ತಿದ್ದ ಬುದ್ದನ ತತ್ವಗಳು ಮಲ್ಲಮೆಲ್ಲಗೆ ಅ ಶೋ ಕನ ಮನಸಿಗೆಹಿಡಿದು ಉಪಗು ನ೦ಧ ಗುರುವು ದೊರೆತುದರಿಂದ ಕಲಿಂಗ ದೇಶವನ್ನು ಗೆಲಿಯುವಾಗ್ಗೆ ಆ ಶೋ ಕನಲ್ಲಿ ಸ೦ಚಾರವಾಗಿದ್ದ ಕಣ ದೇವತೆಯ ಭೀಕರ ಸ್ವರೂಪವು ಈ ಯುದ್ದ ವಾದ ನಂತರ ಮಲ್ಲಮೆಲ್ಲಗೆ ಇಳಿಯ ತೊಡಗಿ, ಕೊನೆಗೆ ಅದುವೇ ಅವೆ ನಿಗೆ ಒಳ್ಳೆಯ ದಾರಿಗೊಯ್ಯುವದೊ ಅದು ಮೆಟ್ಟಲಾಗಿ ಪರಿಣಮಿಸಿತು. ಅ ಶೋಕನ ಮನಸ್ಸು ತಿರುಗಿತು. ಮರಿಗಳ೦ತೆ ಎಷ್ಟೊಂದು ಜನರನ್ನು ಕೊಲೆ ಮಾಡಿದ ಬಗ್ಗೆ ಆ ಶೋಕನು ಮರಮರನೆ ಮರುಗಿ ತನ್ನ ಘೋರ ಕೃತಿಯ ಬಗ್ಗೆ ಪಶ್ಚಾತ್ತಾಪ ಪಟ್ಟು, ಅಂದು ಮೊದಲ್ಗೊಂಡು ತನ್ನ ನಾಮಾ ಜ ದೊಳಗೆ ಶಾಂತಿಯ ಹಾಗೂ ಪ್ರೇಮದ ರಾಜ್ಯವನ್ನು ನಡಿ ಸಿಯೇ ತೀರಬೇಕೆಂದು ಪಣ ಗಟ್ಟಿದನು, ಮತ್ತು ಸರ್ವರಿಗೂ ಈ ವಿಷ ಯವು ತಿಳಿಯ ಬೇಕೆ೦ದು ( ಈಗ ನಡೆದು ಹೋಗಿರುವ ಕೊಲೆಯ ಮಾತು ಬೇಡ. ಮುಂದೆ ಈ ಕೊಲೆಯಲ್ಲಿ ನಡೆದ೦ಥ ಒ೦ದೆರಡು