ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೌದ್ಧ ಸಂಪ್ರದಾಯ ಪ್ರಸಾರ, ೨೨೧ ವಂತ ಹಾಗೂ ನಿಜವಾದ ಅನುಯಾಯಿಯಾದ್ದರಿಂದ, ಬಹು ದಿವಸ ಗಳಿಂದ ನಡೆದು ಬಂದಿರುವ ಬುದ್ಧ ಮ ತ ತತ್ವಗಳನ್ನು ತಾಳಿಸಿ, ಶುದ್ಧಿ ಕರಿಸಬೇಕೆಂಬ ಉತ್ಕಟವಾದ ಅವೇಕ್ಷೆಯಿಂದ ಪ್ರೇರಿತ ನಾಗಿ ಕ್ರಿ. ಶ. ಪೂ, ೨೪೦ ರಲ್ಲಿ ಒಂದು ಮಹಾ ಸಭೆಯನ್ನು ನಡೆಯಿಸಿದನು. ಈ ಸಭೆಗೆ ದಶದಿಕ್ಕುಗಳಿಂದ ಒಬ್ಬ ಭಿಕ್ಷುಗಳು ಸೇರಿದ್ದರು. ಅನೇಕರ ಪರೀಕ್ಷೆ ಚರ್ಚೆ, ವಾದವಿವಾದಗಳು ೯ ತಿಂಗಳ ವರೆಗೆ ಸಾಗಿದ ವು. ಈ ಸಭೆ ದಿ೦ದ ಒುದ್ರ ಮ ತ ತತ್ವಗಳು ಹೆಚ್ಚು ತಿಳಿ ಗೊ೦ಡವ; ಕಳೆ ಗೊ೦ಡವು; ಬೆಳೆ ಗೊ೦ಡವು. ಬುದ್ಧ ಮತದಲ್ಲಿರುವ ತನ್ನ ಈ ಡಿಲ್ಲದ ನಂಬುಗೆಯನ್ನು ನಿಜವೆಂದು ತೋರಿಸುವದಕ್ಕಾಗಿಯೇ ಈ ಮಹಾ ರಾಯನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಬೌದ್ಧ ಧರ್ಮಕ್ಕೆ ಧಾರೆಯೆರೆದನು. ತಮ್ಮನಾದ ಮಹೇಂದ್ರನೆ೦ಬವನೂ, ತಂಗಿಯಾದ ಸಂಘಮಿತ್ರೆಯೆ೦ಬ ವಳೂ ಇವರೀರ್ವರೂ ಒಟ್ಟಾಗಿ ಬುದ್ಧ ಧರ್ಮವನ್ನು ಹೆಚ್ಚಿಸಲಿಕ್ಕೆ ಸಿಂಹ ಲವದಕ್ಕೆ ನಾರಿ, ಅಲ್ಲಿರುವ ಜನರಿಗೆ ಬೌದ್ಧ ಧರ್ಮ ತತ್ವಗಳನ್ನು ತಿಳಿ ಸಿದರು. ಇವರ ಪ್ರಯತ್ನದಿಂದ ಅಲ್ಪಾವಧಿಯಲ್ಲಿಯೇ ಸಿ೦ಹಲ ದ್ವಿ ಪವೇ ಬೌದ್ಧ ಮಯ ವಾಬ ತು. ಅದರಂತೆ ಜಪಾನ, ತಿನ, ತಿಬೇಟ, ಸಯಾಮ ಮೊದಲಾದ ದೇಶಗಳು ಸಹ ಈ ಧರ್ಮೋಪದೇಶದಿಂದ ಚೇತ ರಿಸಿಕೊಂಡಿದ್ದು ತಮ್ಮ ಹೊಸ ಸಂಸ್ಕೃತಿ೦ ೦ದ ಬೆಳಗತೊಡಗಿದವು. ಈಗಲೂ ಮೇಲ್ಕಾಣಿಸಿದ ಜನಾಂಗಗಳಲ್ಲಿ ಬೌದ್ಧ ಧರ್ಮವು ತಲೆಯೆತ್ತಿ ಕೊ೦ಡು ಮೆರೆಯುತ್ತಿದೆ. ಬೌದ್ಧ ಸಂಪ್ರದಾಯ ಪ್ರಸಾರ:- ತನ್ನ ಗುರುವಾದ ಸಗು ನ ಉಪದೇಶದಂತೆ, ಅಶೋಕ ಮಹಾರಾಯನು ಧರ್ಮೋಪದೇಶಕರ ದೊ೦ದು ತ೦ಡನ್ನು ಸಿದ್ಧಪಡಿಸಿ, ಬುದ್ಧ ಮತದ ದಿವ್ಯತತ್ವಗಳನ್ನು ಭೂಮಂಡಲದೊಳಗೆಲ್ಲ ಬಿತ್ತಿ ಬೀರಿ, ಧರ್ಮಧ್ವಜವನ್ನು ನಿಲ್ಲಿಸಲು, ಅವರನ್ನು ಏಸಿಯಾ, ಅಫ್ರಿಕಾ ಯು ರೊಸ ಮೊದಲಾದ ಖ೦ಡಗಳಿಗೆ ಕಳಿಸಿದನು. ಬನವಸೆ, ಮಹಿಷಮ೦ಡಲ, ಕಾಂಚೀಪುರಗಳಿಗೆ ಧರ್ಮ ಪ್ರಚಾರಕರನ್ನು ಕಳಿಸಿ, ಎಲ್ಲೆಲ್ಲಿಯೂ ಅಹಿ೦ಸೆಯ ಸಂದೇಶವನ್ನು ಹರಡಿದನು. ಮುಂದೆ ಸ್ವಾವಕಾಶದೊಳಗೆ ಆ ಶೋಕನು ತೀರ್ಥ