ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೨ ಭಾರತೀಯರ ಇತಿಹಾಸವು. ಯಾತ್ರೆಗಾಗಿ ತನ್ನ ಗುರುವಿನೊಡನೆ ಭಿಕ್ಷುವೇಷದಿ೦ರಲೆ ಹೊರ ಹೊ೦ಟನು. (ಕ್ರಿ. ಶ. ಪೂ. ೨೪೯ ರಲ್ಲಿ) ಹೀಗೆ ಯಾತ್ರೆಗಾಗಿ ಹೊರಟ ವನು ಮೊದಲು ಬುದ್ಧ ಜನ್ಮ ಸ್ಥಾನವನ್ನು ನೋಡುವದಕ್ಕಾಗಿ ಲುಂಬಿನೀ ಉನವನಕ್ಕೆ ಹೂ ಗಿ, ಮನದಣಿಯುವಂತೆ ಬುದ್ಧನನ್ನು ಕುರಿತು ಹೊಗಳಿ ಹಾಡಿ, ಎಲ್ಲರಿಗೆ ತಿಳಿಯಲಿಕ್ಕೆಂದು ಅಲ್ಲಿ ಬುದ್ಧ ಜನ್ಮಭೂಮಿ ಇದೇ ಎ೦ಬುವದನ್ನು ದೃಢಪಡಿಸುವದೆಂದು ಶಿಲಾಸ್ತಂಭವನ್ನು ನಿಲ್ಲಿಸಿ ತಾನು ಮರಳಿದನು, ತಾನು ಸಿಂಹಾಸನವನ್ನೇರುವ ಮೊದಲು ಕೆಲವರ ಮತವಾಗಿದ್ದ ಬುದ್ಧ ಧರ್ಮವು ಈಗ ಜಗತ್ತಿನ ಧರ್ಮವಾದುದನ್ನು ಕಣ್ಣಾರೆ ಕಾಣುವ ಸು ದೈವವು ಆ ಶೋಕನಿಗೆ ಲಭಿಸಿತು. ಪ್ರಪಂಚದಲ್ಲಿ ಎಲ್ಲೆಲ್ಲಿಯೂ, ಪ್ರೇಮ ನಾಮ್ರಾಜ್ಯದ ಆಳಿಕೆಯಾಗುವದನ್ನು ನೋಡುವದೇ ಧರ್ಮಪೀವನನಾದ ಆತನ ಜೀವಮಾನದ ಹೆಗ್ಗು ರಿಯಲ್ಲದೆ ಮತ್ತೇನು ಇರಲಿಕ್ಕೆ ನಾ ಧೃವ? ಪ್ರಜೆಗಳ ಹಿತಕ್ಕಾಗಿ ತನ್ನ ಪ್ರಾಣವನ್ನು ಸಹ ಓಲಾ ಗಿಡುವ ಈ ಮಹಾತ್ಮನು ರಾಜರ್ಷಿಯ - ತೆ ೩೭ ವರ್ಷಕಾಲ ತನ್ನ ಪ್ರೇಮದ ಆಳಿಕೆಯಿಂದ ಪ್ರಜೆಗಳನ್ನು ತಣಿಸಿ, ತಕ್ಷಶಿಲೆಯೆಂಬಲ್ಲಿ ಜಗತ್ತಿನ ರಂಗಪ್ಪಳ ದಿಂದ ಮಾಯವಾದನು. ಮೌರ್ಯರ ಮುಳುಗು:- ವೈಭವಶಾಲಿಯಾದ ಚಂದ್ರ ಗು ಹಾಗೂ ಆ ಶೋಕ ಇವರಿರ್ವರ ಧನ ಹೊಂದಿದ ಅಳಿಕೆ ಯಲ್ಲಿ ವಿದ್ಯಾವಂತರಿಗೆ ಅನೇಕ ಬಗೆಯಿಂದ ಪ್ರೊತ್ಸಾ ಹನ ದೊರೆಯು ತಿದ್ದುದರಿಂದ ಪಾಣಿನಿಯ ವ್ಯಾಕರಣಗ್ರಂಧಕ್ಕೆ ಕಾತ್ಯಾಯ ನೆಂಬವನು ವಾರ್ತಿಕವನ್ನು ಬರೆದನು. ವಾತ್ಸಾಯನನು ಕಾಮ ಸೂತ್ರಗಳನ್ನು ಬೈಲಿಗೆ ತಂದನು. ಶಾಲಿಹೋತ್ರನೆಂಬುವ ಪ೦ಡಿ ತನು ಪಶು ಶಾಸ್ತ್ರ ನಿರ್ಮಿಸಿದನು. ಪ್ರಸಿದ್ಧ ಪಂಚತತ್ರವ೦ಬ ಗದ್ಯಗ್ರಂಧವು ಮೌರ್ಯರ ಆಳಿಕೆಯಲ್ಲಿ ಬೆಳಕು ಕಂಡಿತು. ಆದರೆ ದೀಪವು ಆರುವ ಮು೦ದೆ ದೊಡ್ಡದಾಗುವಂತೆ ಮುಳುಗುವ ಕಾಲಕ್ಕೆ ಈ ವಂಶಕ್ಕೆ ಅ ಶೋಕ ಮಹಾರಾ ಯನಂಥ ಧರ್ಮಾತ್ಮನಾದ ದೊರೆಯು ದೊರೆತುದೇ ಕೊನೆ ಯಾಯ ತು. ಅಶೋಕನ ನಂತರ ದಶರಥ, ಬೃಹದ್ರಥ ಮೊದಲಾದವರು ಇ೦ತಹ ಅಪಾರವಾದ ನಾಮ್ರಾಜ್ಯವನ್ನು ಅಂಕೆಯಲ್ಲಿಡುವಷ್ಟು ಸಮ