ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಷ್ಟ್ರಜೀವನ.

೨೩೫

ಸೌಖ್ಯಗಳನ್ನನುಭವಿಸಿರಲಿಲ್ಲ. ಅಶೋಕನಂತೂ, ಪ್ರಚಾರ೦ಜನೆಯ ಕಾರ್ಯದೊಳಗೆ ಎಲ್ಲ ರಾಜರಿಗಿಂತ ಮುಂದುವರಿದು, ಚಂದ್ರಗುಪ್ತನಿಂದ ಕಟ್ಟಲ್ಪಟ್ಟು, ಬಿ೦ದುಸಾರನಿಂದ ನಡೆಯಿಸಲ್ಪಟ್ಟ ಪ್ರಜೆಗಳ ಸುಖವೆಂಬ ಗೋಪುರವನ್ನು ತಾನು ಪೂರ್ತಿಗೊಳಿಸಿ ಕಳಸವನ್ನಿಟ್ಟನು. ಪ್ರಜೆಗಳ ಸುಖವೇ ತನ್ನ ಸುಖವೆಂಬುವಷ್ಟು ಅಶೋಕ ಮಹಾರಾಯನು ಉದಾರಹೃದಯವುಳ್ಳವನಾದ್ದರಿಂದ ಅವಾಗಿನ ರಾಷ್ಟ್ರಜೀವನವು ಎಷ್ಟು ಸ್ವರ್ಗೀಯ ಜೀವನವಾಗಿರಬಹುದೆಂಬುದನ್ನು ಯಾರಾದರೂ ತರ್ಕಿಸಬಹುದು.