ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಪುಷ್ಯಮಿತ್ರನ ಅಶ್ವಮೇಧಯಜ್ಞ. ೨೩೬ ಬೇಕೆ೦ಬೆ೬ಣಿಕೆಯಲ್ಲಿದ್ದು, ಈ ಮಿನಾಂಡರನು ಸ್ವತಃ ಗ್ರೀಕನಿದ್ದು ಬೌದ್ಧ ಮತವನ್ನವಲಂಬಿಸಿದ್ದನು. ಈತನಿಗೂ ಪುಷ್ಯಮಿತ್ರನಿಗೂ ಕಾಳಗ ವೆಸಗಿ ಹಿಂದೂ ಜನರ ಪುಣ್ಯದಿಂದ ಪುಷ್ಯ ಮಿತ್ರನಿಗೇ ಈ ಹೋರಾಟದೊ ಳಗೆ ಗೆಲವಾಯಿತು. ಯವನರು ಹಿಂದೂ ದೇಶದೊಳಗೆ ನುಗ್ಗಲಿಕ್ಕೆ ಯತ್ನಿಸಿದ್ದು ಇದುವೇ ಎರಡನೇ ಸಲವು. ಪುಷ್ಯ ಮಿತ್ರನಿಗೆ ಅಗ್ನಿ ಮಿತ್ರ ನಂಥ ಮುಮ್ಮಗನ ಲಭಿಸಿದ್ದರಿಂದ ಬಲುಮಟ್ಟಿಗೆ ರಾಜ್ಯ ಗಳಿಸುವ ಕಾರ್ಯದೊಳಗೆ ಇವರೀರ್ವರಿಂದ ಅವನಿಗೆ ಸಹಾಯವಾಯಿ ತು; ಮೇಲಾಗಿ ಅಗ್ನಿ ಮಿತ್ರನು ವಿದರ್ಭ ದೇಶವನ್ನು ಗೆದ್ದುಕೊಂಡದ್ದರಿ೦ ದಂತೂ ಅವನು ಗರಿಗಟ್ಟಿ ಕೊ೦ಡ೦ತಾದನು. ಚಂದ್ರಗುಪ್ತನಿಂದ ಮೊದಲು ಗೊ೦ಡು ಇತ್ತೀಚೆ ಬಹು ದಿನಗಳಿ೦ದ ವೈದಿಕ ಧರ್ಮ ಧ್ವಜವನ್ನೆತ್ತಿ ಹಿಡಿದು, ಪರ ರಾಯರ ದಾಳಿಗಳಿ೦ದ, ಅದಕ್ಕೆ ತಗಲಿದ ಧೂಳು ಮಣ್ಣನ್ನು ಕೊಡವಿ ಹಾಕಲಿಕ್ಕಾರೂ ವೈದಿಕ ಧರ್ಮಾಭಿಮಾನಿಗಳಾದ ವೀರರು ಹುಟ್ಟಿ ರದ್ದರಿಂದ ವೈದಿಕ ಧರ್ಮಕ್ಕೆ ಹಲವು ಬಗೆಯಿ೦ದ ಅರಿಷ್ಟ ಕಾಲವು ಒದಗಿದಂತಿತ್ತು. ಅದೀಗ ಪುಷ್ಯಮಿತ್ರನಂಥ ವೀರಪುರುಷನ ಮೈ ದೋರುವಿಕೆಯಿಂದ ಲೋ ವವಾಯಿ ತು. ಪುಷ್ಯ ಮಿತ್ರನ ಅಶ್ವಮೇಧಯ :- ಸಾರ್ವಭೌಮತ್ವದ ಹಕ್ಕನ್ನು ಾಸಿಸಿ ಸುಗ ಪುಷ್ಯಮಿತ್ರನು ವೈದಿಕ ಅರಸರ ಪರಂಪರೆಯ೦ತೆ, ಅಶ್ವಮೇಧಯಾಗವನ್ನು ಮಾಡುವ ತನ್ನ ಮನದೆಣಿಕೆಯನ್ನು ನಿರ್ಧರಿಸಿ, ಒಂದು ಕುದುರೆಯನ್ನು ಬಿಟ್ಟು, ಅದರ ರಕ್ಷಣೆಗಾಗಿ ವಸು ಮಿತ್ರನನ್ನು ದೊಡ್ಡ ಸೇನೆಯೊಂದಿಗೆ ಕಳಿಸಿದನು. ಅನೇಕ ಯವನ ರಾಜರನ್ನು ಸೋಲಿಸಿ, ವಸುಮಿತ್ರನು ಅಜೇಯನಾಗಿ ಹಿ೦ದಿರುಗಿದನು. ಈ ದಿಕ್ಕಿ ಜಯ ದಿಂದ ಮತ್ತಷ್ಟು ಪುಷ್ಯ ಮಿತ್ರನಿಗೆ ಸಂತೋಷವಾಗಿ ಹಿಗ್ಗಿ ಅಶ್ವ ಮೇಧಯಾಗದ ಸಿದ್ಧತೆಯನ್ನು ನಡೆಸಿ, ಸರ್ವ ರಾಜರಿಗೂ ಯಜ್ಞ ಕ್ಕೆ ಬರಲು ಹೇಳಿ ಕಳಿಸಿದನು. ಈ ಯಜ್ಞ ಸಮಾರಂಭವನ್ನು ನೋಡಲು, ತತ್ಕಾಲೀನ ಪ್ರಖ್ಯಾತರಾದ ಪಾಣಿ ನೀಭಾಷ್ಯಕಾರರಾದ ಶ್ರೀಪತಂ ಜಲಿಯವರು ಬಂದಿದ್ದರಂತೆ ! ಅಹಿ೦ಸಾ ಪ್ರತಿಪಾದಕವಾದ ಬುದ್ಧ ಧರ್ಮತತ್ವಗಳಿಂದ ಅನೇಕ ವರ್ಷಗಳಿಂದ ಯಾರ ದೃಷ್ಟಿ ಗೂ ಬೀಳದೆ.