ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೌದ್ಧಮತದ ಹಬ್ಬುಗೆ.

೨೪೩

ಮತದೊಳಗೆ ಹೊಸ ಪಂಥವನ್ನು ತೆಗೆದು, ಅದರೊಳಗೆ ಹಿಂದು, ಪಾರ್ಶಿ ಕ್ರಿಸ್ತ, ಹೆಲೆನಿಕ್ ಹೀಗೆ ಅನೇಕ ಮತದ ಜನರನ್ನು ಸೇರಿಸಿಕೊಂಡನು. ಈ ಮಹಾಯಾನ ಪ೦ಧದ ಹಬ್ಬುಗೆಯು ಕನಿಷ್ಕನ ರಾಜ್ಯದೊಳಗೆ 'ಮಿಂಚಿನ ವೇಗದಿಂದ ಬೆಳೆದು ಎಲ್ಲೆಲ್ಲಿ ನೋಡಿದರೂ ಚೈತ್ಯಾಲಯಗಳೂ, ಸ೦ಘಾರಾಮಗಳೂ, ವಿಹಾರಗಳೂ ಕಂಗೊಳಿಸತೊಡಗಿದವು. ಮು೦ದೆ ಕ್ರಮೇಣ ಕನಿಷ್ಕನು ಬುದ್ಧಸಂಪ್ರದಾಯದ ಮತಗ್ರಂಥಗಳನ್ನು ಅಭ್ಯಾಸಿಸುತ್ತಿರಲು ಅವನಿಗೆ ಬೇರೆ ಬೇರೆ ಗ್ರಂಥಗಳಲ್ಲಿ ವಿರೋಧವು ಕಂಡು ಬಂದುದರಿಂದ, ತನ್ನ ಸಲಹೆಗಾರನಾದ ಪೂಜ್ಯ ಪಾರ್ಶ್ವನೆಂಬುವನ ಸನುಮತಿಯಿಂದ ಬೌದ್ಧಸಂಪ್ರದಾಯದ ವಿದ್ವಾಂಸರದೊ೦ದು ಧರ್ಮಸಭೆ ನೆರೆಯಿಸಿದನು. ಈ ಸಭೆಯು ಕಾಶ್ಮೀರ ನೆರೆಯಲ್ಲಿರುವ ಕುಂಡಲವನವೆಂಬ ಮರದೊಳಗೆ ನಡೆಯಿತು. ಈ ಧರ್ಮ ಸಭೆಗೆ ವಸುಮಿತ್ರನೆಂಬುವನು ಅಧ್ಯಕ್ಷನು, ಅಶ್ವಘೋಷನು ಉಪಾಧ್ಯಕ್ಷನು. ಪ್ರಾಚೀನ ಕಾಲದಿಂದ ನಡೆದು ಬಂದಿರುವ ಬುದ್ಧ ಸಂಪ್ರದಾಯದ ತತ್ವಗಳನ್ನು ಮೂರು ವಿಧವಾಗಿ ವಿಂಗಡಿಸಿ, ಪರೀಕ್ಷಿಸಿ, ಅವುಗಳಿಗೆ ಟೀಕಾ ಗ್ರಂಥಗಳನ್ನು ಬರೆಯಿಸಿದರು. ಮಹಾವಿಭಾಷಾ ಎ೦ಬುದೊಂದು ಬೌದ್ಧ ತತ್ವಜ್ಞಾನದ ದೊಡ್ಡ ಜ್ಞಾನಕೋಶವು ಈಗ್ಯೂ ಚೀನದಲ್ಲುಂಟು. ಇದನ್ನೊಂದು ತಾಮ್ರಪಟದ ಮೇಲೆ ಬರೆದು ಸ್ತೂಪದೊಳಗಿಟ್ಟಿದ್ದಾರೆ. ಈ ಮೇರೆಗೆ ಬೌದ್ಧಮತಕ್ಕೆ ತಟ್ಟಿದ ಹಿಟ್ಟನ್ನು ಬಹುಮಟ್ಟಿಗೆ ಶುದ್ದೀಕರಿಸಿದ್ದೊ೦ದು ಕನಿಷ್ಕನ ಜೀವಮಾನದೊಳಗಿನ ವಿಶೇಷ ಕಾರ್ಯವು. ಈತನ ಜೀವಮಾನದಲ್ಲಿ ಅಶೋಕನ ಜೀವಮಾನವು ಬಹುಮಟ್ಟಿಗೆ ಪ್ರತಿಬಿಂಬಿತವಾಗಿತ್ತೆಂದು ಹೇಳಬಹುದು; ಆದರೂ ಅಶೋಕನಲ್ಲಿರುವ ಶುದ್ಧ ಧರ್ಮಾಚರಣೆಯೂ, ಪ್ರಜೆಗಳಲ್ಲಿ ದಯಾದಾಕ್ಷಿಣ್ಯವೂ ಈತನಲ್ಲಿರುವಂತೆ ಕಾಣಲಿಲ್ಲ. ಹಾಗೆಂತಲೇ ಈತನ ಕಾಟಕ್ಕೆ ಬೇಸತ್ತು, ಮಾಧರ ಎಂಬೆ ಸರಿನ ಈತನ ಮಂತ್ರಿಯೂ, ಕೆಲವು ಸರದಾರರೂ ಒಗ್ಗಟ್ಟಾಗಿ ಈತನು ಜ್ವರದಿಂದ ಹಾಸಿಗೆ ಹಿಡಿದು ಮಲಗಿರುವಾಗ ದೊಡ್ಡದೊಂದು ಹೊದ್ದಿಕೆಯನ್ನು ಈತನ ಮೇಲೆ ಹಾಕಿ ಮೇಲೊಬ್ಬನು ಕುಳಿತು ಉಸುರುಗಟ್ಟಿ ಕೊಂದುಬಿಟ್ಟರು. ಈತನ ತರುವಾಯ ಹವಿಷ್ಟ ಹಾಗೂ ವಸುದೇವ