ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೪೬ ಭಾರತೀಯರ ಇತಿಹಾಸವು. ವಾಗಿಯೇ ಆರ್ಯರಿಗೆ ಮತಾಭಿಮಾನದ ಮುಂದೆ ದೇಶಾ ಭಿಮಾನಕ್ಕೆ ಬೆಲೆಯಿಲ್ಲ; ಏಕೆಂದರೆ ಮತವೇ ಅವರ ಜೀವನದ ಗುಟ್ಟು. ಮೇಲಾಗಿ ಹಿಂದೂ ದೇಶವೆಂಬುದು ಮೇರೆಯಿಲ್ಲದ ಖಂಡದಂತೆ ನಾಲ್ಕು ದಿಕ್ಕಿಗೆ ಹಬ್ಬಿಕೊಂಡು ನಾವಿರಾರು ಪಾಳೆಗಾರುಗಳಿಗೆ ವಶವಾಗಿದ್ದುದರಿಂದ, ತಾವು ಬಾಳಿಕೊಂಡಿರುವ ರಾಜ್ಯ ಹಾಗೂ ರಾಜನ ಮಟ್ಟಿಗೆನೇ ಅವರ ದೇಶಾಭಿಮಾನವು ಸಂಕೋಚಗೊಂಡು ಮತಾಭಿಮಾನವೇ ಮನುಷ್ಯನ ಬಾಳಿಕೆಯ ಸರ್ವಸ್ವವೆಂದು ಭಾವಿಸಲ್ಪಟ್ಟಿತ್ತು. ಪೂರ್ವದಿಂದಲೂ ಹಿಂದೂ ದೇಶವೆಂದರೆ ಮ ತಾ ಮತಾ೦ತರಗಳ ಗಲಭೆಯ ನ್ಯಾನವ, ವೈದಿ ಕರು, ಶೈವರು, ವೈಷ್ಣವರು, ಶಾಕ್ತರು, ಗಾಣಪತ್ಯರು, ಜೈನರು, ಬೌದ್ಧರು ಇಷ್ಟೆಲ್ಲ ಮತದವರಿದ್ದರೂ, ಅವರೆಲ್ಲರೂ ಅನ್ನೊ ನೌಹಾ ರ್ದದಿಂದಲೇ ಇರುತ್ತಿದ್ದರು. ಒಂರಾನೊಂದು ಕಾಲಕ್ಕೆ ಬೌದ್ಧಮತವು ರಾಜಧರ್ಮವಾಗಿ ಮೆರೆದು ಮರೆದು ಇದೀಗ ಅದು ಯಾರೂ ಉದ್ಯಾ ರಕರಿಲ್ಲದೆ ಬುಡಮೇಲಾಗಹತ್ತಿತ್ತು. ಅನೇಕ ವರ್ಷಗಳ ವರೆಗೆ ಬೌದ್ಧ ಮತದ ಇದು ಕಿಗೆ ಸಿಕ್ಕು ರಾಜಾಶ್ರಯವಿಲ್ಲದೆ ಬಳಲುತ್ತಿದ್ದ ವೈದಿಕ ಮತೀಯರು ಅದೇ ತಾನೇ ತಲೆಯೆತ್ತಿಕೊ೦ಡು ಬೌದ್ಧರ ರಾ ರಿಯನ್ನು ಬಿಟ್ಟು ದಕ್ಷಿಣ ಹಿಂದೂ ದೇಶಕ್ಕೆ ನಡೆದರು. ಅಲ್ಲಿ ಚೋಳ ಪಾಂಡ್ಯ ರ೦ಧ ಆರ್ಯರಾ ಜರು ಆಳುತ್ತಿದ್ದುದರಿಂದ ಅವರನ್ನು ತಮ್ಮ ದಾರಿಗೆಳೆದು ಅವರಿಂದ ರಾಜಸೂಯದಂಥ ಯಜ್ಞಗಳನ್ನು ಮಾಡಿಸಿದರು. ಶಕಯವ ನರ೦ಥ ಪರದೇಶದ ಜನರಿಂದ ಹಿಂದೂ ಸಂಸ್ಕೃತಿಗೆ ತತ್ಕಾಲಕ್ಕೆ ಪೆಟ್ಟು. ತಿನ್ನುವ ಪ್ರಸ೦ಗ ಬ೦ದಾಗ್ಯೂ, ಆ ಶಕಯವನರು ದಂಡಯಾತ್ರೆಗೆಂದು ಈ ದೇಶಕ್ಕೆ ಬಂದವರು ಇಲ್ಲಿಯೇ ನಿಂತು ರಾಜ್ಯ ವ್ಯಾಪಿಸಿಕೊಂಡು ಹಿಂದೂ ಜನರೊಡನೆ ಒಂದಾಗಿ ಹೋದರು. - ೪ ಬೌದ್ದಿಕಸ್ಥಿ ಶಿ:- ಜನಾ೦ಗದ ಸ್ಥಿತಿಯು ಇಷ್ಟು ಅಲ್ಲೋಲ ಕಲ್ಲೋಲವಾಗಿದ್ದರೂ, ಈ ಕಾಲಕ್ಕೆ ಜನಾ೦ಗದ ಬೌದ್ದ ಕಸ್ಥಿತಿಯು ಮಾತ್ರ ತಲ್ಲಣಗೊಂಡಿರಲಿಲ್ಲ. ಈ ಹೊತ್ತಿಗೆ ಕನಿಷ್ಕನ ಓಲಗದಲ್ಲಿ ರುವ ಅಶ್ವಘೋಷನೆಂಬುವನು ಬುದ್ಧಚರಿತವೆಂಬ ಗ್ರ೦ಧ ಬರೆದನು ಚರಕಾಚಾರ್ಯರು ಆಯುರ್ವೇದವನ್ನು ಕುರಿತು ಒಳ್ಳೆ ಮಹತ್ತರ