ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೪೭
ಬೌದ್ಧಿಕಸ್ಥಿತಿ.

ಗ್ರಂಥವನ್ನು ಬೆಳಕಿಗೆ ತಂದರು. ಸುಶ್ರುತರೆಂಬುವರು ಆಯುರ್ವೇದಶಾಸ್ತ್ರದೊಳಗಿನ ಮುಖ್ಯ ಅಂಗಗಳಾದ ಔಷಧ ಚಿಕಿತ್ಸೆ, ಹಾಗೂ ಶಸ್ತ್ರ ಚಿಕಿತ್ಸೆಯ ಬಗ್ಗೆ ಈಗಿನವರು ಸೋಜಿಗದಿಂದ ಬೆರಳು ಕಚ್ಚಿಕೊಳ್ಳುವಂಥ ವಿದ್ವತ್ತೆಯಿಂದ ಬೆಳಗುವ ಗ್ರಂಥಗಳನ್ನುಂಟು ಮಾಡಿದರು. ಶಸ್ತ್ರ ಚಿಕಿತ್ಸೆಯೊಳಗೆ ೧೨೪ ಶಸ್ತ್ರಗಳನ್ನು ಉಪಯೋಗಿಸುವ ವಿಧವನ್ನು ಹೇಳಿದ್ದು ಅದಕ್ಕೆ ಶಲ್ಯತಂತ್ರವೆಂದು ಹೆಸರುಂಟು. ಕೆಲವು ಶಸ್ತ್ರಗಳು ಕೂದಲನ್ನು ಇಬ್ಭಾಗವಾಗಿ ಕಡಿಯುವಷ್ಟು ಸೂಕ್ಷ್ಮವಾಗಿವೆ. ನ್ಯಾಯ ಹಾಗೂ ಮೀಮಾಂಸಾಶಾಸ್ತ್ರಗಳಿಗೆ ಪ್ರಶಸ್ತವಾದ ಮತ್ತು ಶಬರ ಎಂಬಿಬ್ಬರು ಘನವಿದ್ವಾಂಸರು ಭಾಷ್ಯಗಳನ್ನು ಬರೆದುದರಿಂದ ಕೆಲದಿನಗಳವರೆಗೆ ಬರಡು ಬಂಜೆಯಾದ ಆರ್ಯರ ಮೆದುಳು ಬೆಳನಾಯಿತು. ಕವಿ ಕುಲಗುರುವೆಂದು ಹೆಸರು ಪಡೆದ ಮಹಾಕವಿಭಾಸನು ಇದೇ ಕಾಲದ ಮೆದುಳಿನಿಂದ ಮಿ೦ಚಿದ ಜ್ಯೋತಿಯು. ಮೃಚ್ಛಕಟಕದಂಧ ಉದಾತ್ತ ರಸದಿಂದುಕ್ಕುವ ನಾಟಕವನ್ನು ಬರೆದು ಶೂದ್ರಕ ಕವಿಯು ಇದೇ ಕಾಲಕ್ಕೆ ತನ್ನ ಹೆಸರು ಅಮರಗೊಳಿಸಿದ್ದು.ವ್ಯಾಕರಣಕ್ಕೆ ಮಹಾಭಾಷ್ಯ ಬರೆದು ಭಾಪಾಸೇವೆಗೈದ ವೈಯ್ಯಾಕರಣಿಗಳಾದ ಪತಂಜಲಿಯವರು ಈ ಗೊಂದಲದ ಕಾಲದೊಳಗೇ ಮೈದೋರಿ, ತಮ್ಮ ಬುದ್ಧಿಪ್ರಭೆಯನ್ನು ಸೂರೆಮಾಡಿ ಹೋದರು. ದಕ್ಷಿಣಹಿಂದೂದೇಶದೊಳಗೊಂದು ಚುಕ್ಕೆಯು ಈ ಸಂದರ್ಭಕ್ಕೆ ಹೊಳೆಯಿತು. ಅವರ ಹೆಸರು ನಾಗಾರ್ಜುನರು. ಅವರು ಬೌದ್ಧ ಮಹಾಯಾನಪಂಧದ ಪುರಸ್ಕರ್ತರಿದ್ದುದಲ್ಲದೆ, ನ್ಯಾಯ, ಆಯುರ್ವೇದ, ಜ್ಯೋತಿಷ ಅವೆಲ್ಲ ಶಾಸ್ತ್ರಗಳನ್ನಾಳಿ ತಮ್ಮ ಘನವಾದ ಲೆಕ್ಕಣಿಕೆಯಿಂದ ಅವುಗಳ ಬಗ್ಗೆ ಉದ್ಗ್ರಂಥಗಳನ್ನು ರಚಿಸಿದರು. ರಾಜಕೀಯ ದೃಷ್ಟಿಯಿಂದ ಈ ಕಾಲವು ಬಲುಮಟ್ಟಿಗೆ ಅಳಿಕೆಗೆಟ್ಟ ಸ್ಥಿತಿಗೀಡಾದ್ದರೂ ಬೌದ್ಧಿಕಪ್ರತಾಪವೇನೂ ಕಡಿಮೆಯಿರಲಿಲ್ಲ. ದಕ್ಷಿಣಹಿಂದೂದೇಶವು ಈ ಸಂದುಕಟ್ಟಿನಲ್ಲಿ ವೈದಿಕಸಂಸ್ಕೃತಿಯನ್ನು ಜೀರ್ಣೋದ್ಧಾರ ಮಾಡದಿದ್ದರೆ ಅದು ಜೀವಿತಸ೦ಶಯದೊಳಗೆ ಬೀಳಬಹುದಾಗಿತ್ತು; ದಕ್ಷಿಣಹಿಂದೂ ದೇಶವೇ ಈ ಕಾಲಕ್ಕೆ ವೈದಿಕಸಂಸ್ಕೃತಿಯ ಕೋಟೆಯಾಗಿತ್ತು. ಕಂಚಿಯಲ್ಲಿಯೂ ಧಾನ್ಯಕಟಕದಲ್ಲಿಯೂ ವೈದಿಕವಿದ್ಯೆಯ ದೊಡ್ಡ ವಿದ್ಯಾಲಯ