ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೬

ಭಾರತೀಯರ ಇತಿಹಾಸವು.

೨ ನೇ ಚಂದ್ರಗುಪ್ತ:- ಸಮುದ್ರಗುಪ್ತನು ಜೀವದಿಂದಿರುವಾಗಲೇ ರಾಜಕಾರ್ಯದೊಳಗೆ ಆಸಕ್ತಿಯುಳ್ಳವನಾದ ಯುವರಾಜ ೨ನೇ ಚಂದ್ರಗುಪ್ತನು ಕೆಲಮಟ್ಟಿಗೆ ರಾಜ್ಯಭಾರದ ಹೊಣೆಯನ್ನು ಹೊತ್ತಿದ್ದನು. ತ೦ದೆಯು ತೀರಿಕೊ೦ಡೊಡನೆ ತಂದೆಯ ಸಿಂಹಾಸನವನ್ನೇರಿ "ವಿಕ್ರಮಾದಿತ್ರ" ನೆಂಬ ಬಿರುದು ಧರಿಸಿದನು. ತನ್ನ ರಾಜ್ಯವಲ್ಲರೆ ಈತನು ಕ್ಷಿಪ್ರದಲ್ಲಿಯೇ ಸುರಾಷ್ಟ್ರ (ಕಾಠೇವಾಡ) ಮಾಳವ ಹಾಗೂ ಗುಜರಾಥಗಳನ್ನು ಹೊಕ್ಕು ಅನೇಕ ವರ್ಷಗಳಿಂದ ಶಕ ಅರಸರ ಕೈಗೆ ಶಿಲುಕಿದ್ದ ಅರ್ಯಭೂಮಾತೆಯನ್ನು ಅವರ ಅ೦ಕೆಯಿಂದ ಬಿಡಿಸಿ, ಪಶ್ಚಿಮ ದಂಡೆಯ ಮೇಲಿರುವ ರೇವುಗಳನ್ನೆಲ್ಲ ಸ್ವಾಧೀನ ಪಡಿಸಿಕೊ೦ಡನು. ಇದರಿಂದ, ಹಿಂದುಸ್ಥಾನಕ್ಕೂ ಯುರೋಪಖಂಡಕ್ಕೂ ಇಜಿಪ್ತದ ಮಾರ್ಗವಾಗಿ ನಡೆಯುತ್ತಿದ್ದ ಕಡಲ ವ್ಯಾಪಾರವು ೨ ನೇ ಚಂದ್ರಗುಪ್ತನ ಕೈಸೇರಿತು. ಈ ಕಾಲದಲ್ಲಿ ಉಜ್ಜಯಿನೀ ಪಟ್ಟಣವು ಬಹು ಗೌರವಕ್ಕೇರಿದ್ದಿತು. ವ್ಯಾಪಾರದ ದೃಷ್ಟಿಯಿಂದ ಪಶ್ಚಿಮ ಸಮುದ್ರ ದಂಡೆಯ ಮೇಲಿರುವ ರೇವುಗಳಿಗೂ, ಒಳದೇಶಕ್ಕೂ ನಡುವೆ ಉಜ್ಜಯಿನೀ ಪಟ್ಟಣವಿರುವದರಿಂದ ಅದೊ೦ದು ವ್ಯಾಪಾರದ ಪಡಮೂಲೆಯ ಸ್ಥಳವಾಗಿತ್ತು. ಮೇಲಾಗಿ ಹಳೆಯ ಪಟ್ಟಣವೆಂದು ಬಹು ಪುರಾತನ ಕಾಲದಿಂದ ಅದು ಪ್ರಾಚೀನ ಸಂಸ್ಕೃತವಿದ್ಯೆಯ ತೌರೂರಾಗಿತ್ತು. ಅಲ್ಲದೆ ಉತ್ತರ ಹಿಂದೂದೇಶಕ್ಕೆಲ್ಲ ಅದೇ ಕೇಂದ್ರಸ್ಥಳವಾಗುವದರಿಂದ ಅಲ್ಲಿ ಪೂರ್ವ ಪಶ್ಚಿಮ ರೇಖಾಂಶಗಳನ್ನೆಣಿಸುವದೊಂದು ಶಾಲೆಯಿದ್ದಿತು. ಹೀಗೆ ವೈದಿಕಸಂಸ್ಕೃತಿಗೆ ಪೋಷಕವಾಗುವಂಧ ಎಲ್ಲ ಬಗೆಯ ಅನುಕೂಲ್ಯಗಳು ಉಜ್ಜಯಿನೀ ಪಟ್ಟಣದೊಳಗೆ ಒಟ್ಟುಗೂಡಿದ್ದರೂ, ಪರರಾಯರ ಆಳಿಕೆಗೀಡಾಗಿರುವದೊ೦ದೇ ಒಂದು ನ್ಯೂನತೆಯಿದ್ದಿತು. ವೈದಿಕಸಂಸ್ಕೃತಿಯ ಪ್ರಾಚೀನ ಪಟ್ಟಣವು ಪರರಾಯರ ಕೈಗೆ ಬಿದ್ದು ಬಳಲುತ್ತಿರುವದು ಅವಮಾನವೆಂದೆಣಿಸಿ ವಿಕ್ರಮಾದಿತ್ಯನು ಅಲ್ಲಿಯ ರಾಜನನ್ನು ಸೋಲಿಸಿ, ಉಜ್ಜಯಿನಿಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊ೦ಡನು. ಈತನ ಆಳ್ವಿಕೆಯಲ್ಲಿ ಚೀನದ ಮೊದಲನೇ ಪ್ರವಾಸಿಯಾದ ಫಾಹಿಯಾನನೆಂಬವನು ಹಿಂದೂದೇಶಕ್ಕೆ ಬಂದಿದ್ದನು. ಬೌದ್ಧಧರ್ಮದ