ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

2 اند ೨ ನೇ ಚಂದ್ರಗುಪ್ತ. ಹುಟ್ಟು ಭೂಮಿಯು ಹಿ೦ದೂ ದೇಶವಾದ್ದರಿಂದಲೂ, ಚೀನರು ಬೌದ್ಧರಿ ರುವದರಿಂದಲೂ, ಅವರಿಗೆ ಹಿಂದೂ ದೇಶದ ಹೆಸರೆ ದೊಡನೆ ನಮಗೆ ಕಾಶಿರಾಮ ಸ್ವರಗಳ ನೆನಪಾದಷ್ಟು ಆನಂದ ! ಹೀಗಿರುವದರಿಂದ ಚಿನ ಯಾತ್ರಿಕರು ಬದ್ಧ ದೇವನ ಬೋಧಿವೃಕ್ಷದ ಹಾಗೂ ಅವನ ಅವ ಶೇಷಗಳನ್ನು ಹೂಳಿಟ್ಟಿರುವ ಪವಿತ್ರಸ್ಥಳದ ಸಂದರ್ಶನಾರ್ಥವಾಗಿ ಗುಂಪುಗಟ್ಟಿ ಕೊಂಡು ಬರುತ್ತಿದ್ದರು. ಅವರಲ್ಲಿ ಫಾಹಿಯಾನ ಒಬ್ಬನು. ಈ ಪಂಡಿತ ಯಾತ್ರಿಕನು ಸಂಸ್ಕೃತಗ್ರ೦ಧ, ಬೌದ್ಧಗ್ರಂಧ, ಕಥೆ ಹಾಗೂ ಚಮತ್ಕಾರಗಳ ಜ್ಞಾನಪಡೆಯಲೋಸುಗ ೬ ವರ್ಷ ಕಾಲ ಹಿಂದು ಸ್ಥಾನದೊಳಗೆ ಇದ್ದನು. ವಿಕ್ರಮಾದಿತ್ಯನ ಆಳಿಕೆಯ ಬಗ್ಗೆ ಈ ತನು ಉಸುರಿದ ಸೊಲ್ಲುಗಳು ಬಹು ಮನನೀಯವಾಗಿವೆ. ಮಗಧ ದೇಶದ ಳಗಿನ ಪಟ್ಟಣಗಳು ಸ೦ಪನ್ನ ಸ್ಥಿತಿಯಲ್ಲಿದ್ದವು. ಬರಿಯ ಕಾಣಿಕೆಗಳ ಬಲದಿಂದಲೇ ನಡಿಸಲ್ಪಟ್ಟ ಅನೇಕ ಸಂಸ್ಥೆಗಳಿದ್ದವು. ಪ್ರಯಾಣಿಕರಿಗೆ ಇಳಿದು ಕೊಳ್ಳಲು ದೊಡ್ಡ ದೊಡ್ಡ ಛತ್ರಗಳು ಅಲ್ಲಲ್ಲಿ ದಾರಿಯ ಮೇಲೆ ಬೇಕಾದಷ್ಟಿದ್ದವು. ರಾಜಧಾನಿಯ ನಡುವೆ ದೊಡ್ಡದೊಂದು ಆಸ್ಪತ್ರೆ ಯಿದ್ದು, ಬಡವರೂ, ಅನಾಧರೂ ಆದ ರೋಗಿಗಳಿಗಾಗಿ ಔಷದ ಚಿಕಿತ್ಸೆ ನಡಿಸುವ ಔಷಧಾಲಯಗಳಿದ್ದವು. ಸಿಂಧು ನದಿಯ ಮುಖಪ್ರದೇಶದಿಂದ ಮೊದಲ್ಗೊಂಡು ಯಮುನಾನದಿಯ ದಂಡೆಯ ವರೆಗೆ ಸಾವಿರಾರು ಬೌದ್ಧ ಭಿಕ್ಷುಗಳಿರುತ್ತಿದ್ದ ಹಲವು ದೊಡ್ಡ ಮರಗಳು ಹರಡಿಕೊ೦ಡಿ ದ್ದವು ಅಪರಾಧಿಗಳಿಗೆ ತಕ್ಕ ಮಟ್ಟಿಗೆ ದಂಡನೆ ಕೊಡುವ ವಾಡಿಕೆಯಿ ಧ್ವರೂ ಶೂಲಕ್ಕೇರಿಸುವ ನಡವಳಿಕೆಯಿರಲಿಲ್ಲ. ಸರಕಾರದ ಅಧಿಕಾ ರಿಗಳಿಗೆ ಸಂಬಳವು ಇಂತಿಷ್ಟೆಂದು ಗೊತ್ತು ಮಾಡಲ್ಪಟ್ಟಿದ್ದರಿಂದ ರೈತರ ಮೇಲೆ ಹಣಕ್ಕಾಗಿ ಒತ್ತಾಯ ಬಲವ೦ತಗಳು ನಡೆಯುತ್ತಿರಲಿಲ್ಲ. ದೇಶ ದಲ್ಲಿ ಹಿಂಸೆಯ ಹೆಸರಿಲ್ಲ; ಸೆರೆ ಕುಡಿತದ ಕುರುಹಿಲ್ಲ; ಈರುಳ್ಳಿ ಬೆಳ್ಳುಳ್ಳಿ ಗಳ ತಿನಸಿಲ್ಲ. ದನಗಳ ಮಾರಾಟವಿಲ್ಲ; ಪೇಟೆಯಲ್ಲಿ ಕಟುಕರ ಅಂಗಡಿ ಗಳಿಲ್ಲ; ಭಿಕ್ಷುಗಳಿಗೆ ಅರಸರಿಂದ ಅನ್ನ ಬಟ್ಟೆಗಳ ಏರ್ಪಾಟು ಮಾಡಲಾ ಗುತ್ತಿತ್ತು. ಒಟ್ಟಾರೆ ಜನರು ನೆಮ್ಮದಿಯಿಂದಲೂ, ಅನ೦ದದಿಂದಲೂ ಬಾಳಿಕೊಂಡಿರುತ್ತಿದ್ದರು.” ಎಂದು ಮುಂತಾಗಿ ಬಹು ಪ್ರಶಂಸಾ