ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೨

ಭಾರತೀಯರ ಇತಿಹಾಸವು.

ನ್ಯನಾದ ವೀರನಿಗೆ ಇವರು ಸಹಜವಾಗಿ ಈಲಾಗುತ್ತಿರಲಿಲ್ಲ. ಅಂಥ ಅಪ್ರತೀಮ ವೀರನು ಎರಡನೇ ಮೂರನೇ ಶತಮಾನಗಳಲ್ಲಿ ಹುಟ್ಟಿದ್ದರಿಂದ ದೇಶವೆಲ್ಲ ಅನಾಯಕವಾಯಿತು. ಇರಲಿ, ಉತ್ತರಹಿಂದೂದೇಶಕ್ಕೂ ದಕ್ಷಿಣಹಿಂದೂದೇಶಕ್ಕೂ ಬಹುದೂರದ ಅ೦ತರವಿರುವದರಿಂದ ಉತ್ತರದವರಿಗೆ ದಕ್ಷಿಣದ ವರೆಗೆ ಸುಲಭವಾಗಿ ಬರಲಿಕ್ಕಾಗುತ್ತಿರಲಿಲ್ಲ. ಬಂದರೆ ಅ೦ಧ ವೀರರು ಒರಬೇಕು. ಹೀಗೆ ವಸ್ತುಸ್ಥಿತಿಯಿದ್ದುದರಿಂದ ದಕ್ಷಿಣದೊಳಗೆ ಬಹು ಕಾಲದಿಂದ ಅಳಿಕೊಂಡಿರುವ ಚೋಳ, ಚೇರಿ, ಪಾ೦ಡ್ಯ, ಪಲ್ಲವ, ಗ೦ಗೆ ಮೊದಲಾದವರಿಗೆ ಯಾವ ವಿಧದ ಅಡ್ಡಿಯಿಲ್ಲದೆ ರಾಜ್ಯ ನಡಿಸಲಿಕ್ಕೂ ದ್ವೀಪಾ೦ತರಗಳಿಗೆ ಹೋಗಿ ವ್ಯಾಪಾರ ನಡಿಸಲಿಕ್ಕೂ ಸುಲಭಸಾಗುತ್ತಿತ್ತು. ದಕ್ಷಿಣ ದೇಶದ ರಾಜರುಗಳು ಅ೦ತಃಕಲಹದ ಮಡುವಿಗೆ ಸಿಕ್ಕು ತಂಡವಾಗಿರುವ ನೋಟವೇ ಪದೆ ಪದೆ ನೋಡಲಿಕ್ಕೆ ಸಿಗುತ್ತಿತ್ತೇ ಹೊರ್ತು ಪರರಾಯರ ದವಡೆಗೆ ಶಿಲ್ಕಿರುವ ನೋಟವು ಬಹು ಕಡಿಮೆ. ಕೃಷ್ಣಾ ನರ್ಮದೆಗಳ ನಡುವಿನ ಪ್ರದೇಶವನ್ನು ಗುಪ್ತರಾಳಿಕೆಯಲ್ಲಿ ವಾಕಾತಕ ಮನೆತನದವರು ಆಳುತ್ತಿದ್ದರಿಂದ ಅವರಿಗೂ ಗುಪ್ತರಾಜರಿಗೆ ಶರೀರಸ೦ಬ೦ಧವಾಗಿತ್ತು.

ಬೌದ್ಧಿಕ ಬೆಳವಳಿಗೆ:- ಗುಪ್ತರಾಜರು ವೈದಿಕ ಭಕ್ತರಿದ್ದ ಸಂಗತಿಯು ಅವರು ಆಯಾ ಕಾಲದಲ್ಲಿ ಸಿದ್ದಿಗೊಯ್ದು ಅಶ್ವಮೇಧಾದಿಗಳಿ೦ದ ವ್ಯಕ್ತವಾಗುತ್ತದೆ; ಹೀಗಿದ್ದ ಮೂಲಕವೇ ಅವರಲ್ಲಿ ವೈದಿಕ ಸಂಸ್ಕೃತಿಯ ಸರ್ವಸ್ವವಾದ ಸಂಸ್ಕೃತವಿದ್ಯೆಯ ದೆಸೆಯಿಂದ ಅಭಿಮಾನವಿರುವದು ಸ್ವಾಭಾವಿಕವೇ ಸರಿ. ಇದುವರೆಗೆ ವೈದಿಕ ಅಭಿಮಾನಿಗಳಾದ ಅರಸರ ಆಸರ ಸಿಗದ್ದರಿ೦ದಲೂ, ಬೌದ್ಧರ ಗದ್ದಲದಿಂದಲೂ ಸಂಸ್ಕೃತ ವಿದ್ಯೆಗೆ ತಟ್ಟಿರುವ ಮಾಲಿನ್ಯವು ಬಲುಮಟ್ಟಿಗೆ ಹಾರಿ ಹೋಗಿ ಗುಪ್ತ ಅರಸರ ಆಳಿಕೆಯಲ್ಲಿ ಅದಕ್ಕೊಂದು ಬಗೆಯ ಮಿ೦ಚು ಕೊಡಲಾಯಿತು. ವೈದಿಕ ಧರ್ಮದ ಬೇರೆ ಬೇರೆ ಪಂಗಡಗಳಾದ ಶೈವ, ವೈಷ್ಣವ ಮತಗಳನ್ನು ಪುಷ್ಟೀಕರಿಸುವಂಥ ಗ್ರ೦ಧಗಳೂ ಬೇರೆ ಕೆಲವು ಉಪನಿಷತ್ತುಗಳೂ, ಧನುರ್ವಿದ್ಯೆ, ನಾಟ್ಯವಿದ್ಯೆ, ಶಿಲ್ಪವಿದ್ಯೆ, ಅವುಗಳ ಬಗ್ಗೆ ಅನೇಕ ಶ್ಲೋಕಬದ್ಧ ಗ್ರಂಥಗಳಾದವ. ಒಹು ಶತಾಬ್ದದಿ೦ದ ಮೊಂಡವಾಗಿ