ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೩
ಬೌದ್ಧಿಕ ಬೆಳವಳಿಗೆ.

ಕುಳಿತ ವೈದಿಕ ಪಂಡಿತರ ಲೆಕ್ಕಣಿಕೆಯು ಈ ಕಾಲದಲ್ಲಿ ಚಿಗುರೊಡೆದು ಕೊಂಚ ನಿರಂಕುಶವಾಗಿ ವಿಹರಿಸಲು ಅವಕಾಶ ದೊರೆಯಿತು. ಪಾಟಲೀಪುತ್ರದೊಳಗೆ ಅರ್ಯಭಟ್ಟನೆಂಬ ಗಣೀತಜ್ಞನು ಜನ್ಮವೆತ್ತಿ (೪೨೦ ಕ್ರಿ. ಶ.) ಭಾರತೀಯ ಜ್ಯೋತಿಷಶಾಸ್ತ್ರವನ್ನು ಮುನ್ನಡೆಯ ಹಚ್ಚಿದನು. ದೇವರು ದಯಪಾಲಿಸಿರುವ ಸೂಕ್ಷ್ಮಬುದ್ದಿಯಿಂದ ಈತನು ತನ್ನ ೨೩ ನೇ ವರ್ಷವೇ ತುಕ್ಕು ಹಿಡಿದ ಭಾರತೀಯ ಜ್ಯೋತಿಷಶಾಸ್ತ್ರವನ್ನು ಕುರಿತು ಮೊದಲನೇ ಗ್ರ೦ಧ ಬರೆದು ಸೂರ್ಯನ ಸುತ್ತು ಪೃಥ್ವಿಯು ತಿರುಗುತ್ತಿರುವುದರ ಮರ್ಮವನ್ನು ಜನರಿಗೆ ತಿಳಿಸಿ ಕೊಟ್ಟಿದ್ದಲ್ಲದೆ, ಸೂರ್ಯಗ್ರಹಣ, ಚಂದ್ರಗ್ರಹಣಾದಿಗಳ ನಿಜವಾದ ಅರ್ಥವನ್ನು ಹೇಳಿ ಬಹು ದಿನಗಳಿಂದ ಬಳ್ಳಿಗುರುಡರಂತೆ ನಡೆಯುತ್ತಿದ್ದ ಹಿಂದೂ ಜನಾಂಗಕ್ಕೆ ಹೊಸದೊಂದು ಕಣ್ಣು ಕೊಟ್ಟನು. ಯಾವ ವಿದ್ಯೆಗಳಾಗಲಿ ಏಳಿಗೆ ಹೊಂದಲಿಕ್ಕೆ ರಾಜಾಶ್ರಯವಿದ್ದೇ ತೀರಬೇಕು. ಪೈರುಗಳಿಗೆ ಮಳೆರಾಜನ ಆಶ್ರಯ ದೊರೆತರೆ, ಅವು ಹೇಗೆ ಭರದಿಂದ ಬೆಳೆದು, ಜನರ ಕಣ್ಣಿಗೂ, ಮನಸಿಗೂ, ದೇಹಕ್ಕೂ, ಅನಂದ ಕೊಡಲು ಸಮರ್ಧವಾಗುವವೋ ಹಾಗೆಯೇ ಪ೦ಡಿತರ ಕಾರ್ಯವು. ಬುದ್ಧಿ ದೇವತೆಯಾದ ಸರಸ್ವತಿಗೆ ಲಕ್ಷ್ಮೀದೇವಿಯ ಬೆಂಬಲವಿಲ್ಲದೆ ಹೋದರೆ ಸರಸ್ವತಿಯು ಕಾಡಿನೊಳಗಿನ ಕ೦ಪಾದ ಹೂಗಳ೦ತೆ ಬಾಡಿ ಹೋಗುವದೇ ಸರಿ; ಆದರೆ ಸಾ೦ಪ್ರತಕಾಲಕ್ಕೆ ಗುಪ್ತರಾಜರು ಸಂಸ್ಕೃತವಿದ್ಯೆ, ವೈದಿಕ ಸಂಸ್ಕೃತಿ ಅವೆರಡನ್ನೂ ಹಿಡಿದೆತ್ತಿ ಜೀರ್ಣೋದ್ಧಾರ ಮಾಡಬೇಕೆಂದು ಕಂಕಣಬದ್ಧರಾಗಿ ನಿಂತುದರಿ೦ದ ಆರ್ಯರ ಬುದ್ಧಿಶಕ್ತಿಗೆ ನೀರೆರೆದಂತಾಯಿತು. ಯಥೇಚ್ಛವಾಗಿ ನೀರುಂಡು ತೃಪ್ತಿ ಪಡೆದಿರುವ ಆ ಬುದ್ಧಿ ಶಕ್ತಿಯಿಂದ ಆ ಮೇಲೆ ಕಾಲಿದಾದಿಸಾಗಳ೦ಥ * ಜಗದ್ವಂದ್ಯರಾದ ಕವಿ


* ಟಿಪ್ಪಣಿ- ಕಾಲಿದಾಸನ ಜನ್ಮ ಮೊದಲಾದವುಗಳ ಬಗ್ಗೆ ಆಧಾರಭೂತವಾದ ಐತಿಹಾಸಿಕ ಸಂಗತಿಗಳೇನೂ ತಿಳಿಯುವದಿಲ್ಲ; ಆದರೂ ಇತ್ತೀಚೆ ದೊರೆತ ಕೆಲವು ಆಧಾರಗಳಿಂದ ಕಾಲಿದಾಸನು, ಸ್ಕಂದಗುಪ್ತನ ಕಾಲಕ್ಕೆ ಇದ್ದನು, ಕುಮಾರಧಾತುಸೇನನೆಂಬ ಸಿಂಹಲ ದ್ವೀಪದ ಅರಸನು ಕಾಲಿದಾಸನನ್ನು ತನ್ನ ನಾಡಿಗೆ ಕರೆಕಳಿಸಿ ಆತನಿಗೆ ಮರ್ಯಾದೆಮಾರಿ ಕೆಲದಿನ ಅಲ್ಲಿಯೇ ಇಟ್ಟುಕೊಂಡನು. ನಂತರ, ಕಾಲಿದಾಸನು ತನ್ನ ದೇಶಕ್ಕಾಗಿ ಹೊರಟನು. ಆದರೆ ದಾರಿಯಲ್ಲಿಯೇ ಅಕಸ್ಮಿಕವಾಗಿ ಕಾಲಿದಾಸನು ಮಡಿದ ಸುದ್ದಿಯನ್ನು