ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೬
ಭಾರತೀಯರ ಇತಿಹಾಸವು.

ಬ್ರಾಮ್ಹಣನೊಬ್ಬನು ಚೀನದ ಅರಸನ ಅಪ್ಪಣೆಯನ್ನು ಮನ್ನಿಸಿ, ಚೀನ ದೇಶಕ್ಕೆ ಹೋಗಿದ್ದುಕೊಂಡು ಹಿಂದೂದೇಶದೊಳಗಿನ ಅನೇಕ ಉದ್ಗ್ರ೦ಥಗಳನ್ನು ಚೀನಭಾಷೆಗೆ ಪರಿವರ್ತಿಸಿ, ತನ್ನ ವಯಸ್ಸಿನ ೭೨ನೇ ವರ್ಷಕ್ಕೆ ಅಂದರೆ ಕ್ರಿ. ಶ. ೫೬೯ ರಲ್ಲಿ ಕ್ಯಾ೦ಟನ್ನದಲ್ಲಿ ಮಡಿದುದರ ಮೇಲಿಂದ ಚೀನರಿಗೂ ಹಿ೦ದೂಜನರಿಗೂ ಇರುವ ವ್ಯವಹರಣೆ, ಆದರೆ ಅವುಗಳ ವಿಷಯವು ತಿಳಿಯುತ್ತದೆ. ಇರಾಣದ ಅರಸನ ಅಪ್ಪಣೆಯಿಂದ ಈ ಕಾಲದಲ್ಲಿ ಸಂಸ್ಕೃತ ಪಂಚತ೦ತ್ರವು ಪೆಹಲವಿಭಾಷೆಯಲ್ಲಿ ಮಾಡಲಾಯಿತು. ತಮಿಳಭಾಷೆಯು ಸಹ ಈ ಕಾಲಕ್ಕೆ ಊರ್ಜಿತಸ್ಥಿತಿಗೇರಿತು. ಇದಕ್ಕೆ ಆ ಭಾಷೆಯನ್ನಾಡುವ ಪ್ರಾ೦ತದೊಳಗೆ ಮಹಾ ಮಹಾ ಕವಿಗಳೂ ಸತ್ಪುರುಷರೂ ಹುಟ್ಟಿದುದೇ ಕಾರಣ.

ಧಾರ್ಮಿಕಸ್ಥಿತಿ:- ಗುಪ್ತರಾಜರು ವೈಷ್ಣವಮತಾನುಯಾಯಿಗಳಿದ್ದರು. ಅನೇಕ ವರ್ಷಗಳಿ೦ದ ಯಾರೂ ಪ್ರೋತ್ರಾಹಕರಿಲ್ಲದೆ ಸೊರಗುತ್ತಿದ್ದ ವೈದಿಕಧರ್ಮಕ್ಕೆ ಇವರಿಂದ ಅತ್ತೆಗೊ೦ದು ಕಾಲ, ಸೊಸೆಗೊ೦ದು ಕಾಲವೆ೦ಬುವ ನಾಣ್ನುಡಿಯ೦ತೆ, ಬೌದ್ಧಮತವು ಕಳೆಗುಂದಿ ಮುಳುಮುಳುಗೇಳುತ್ತಿರಲು ಗುಪ್ತರ ಕೈಯಾಸರ ದೊರೆತುದರಿಂದ ಅದು ಚೇತರಿಸಿಕೊಂಡೆದ್ದಿತು. ಗುಪ್ತರಾಜರು ನಿಜವಾಗಿಯೂ ಬೌದ್ಧ ಧರ್ಮವನ್ನು ಯಾವ ಬಗೆಯಿಂದಲೂ ಕೀಳಾಗೆಣಿಸದೆ, ತಮ್ಮ ತಮ್ಮ ಕೈಲಾದ ಮಟ್ಟಿಗೆ ಪ್ರೋತ್ಸಾಹಿಸುತ್ತಿದ್ದುದರಿಂದ ಅದು ಇಷ್ಟರ ಮಟ್ಟಿಗಾದರೂ ಜೀವಹಿಡಿದುಕೊ೦ಡಿತ್ತೆನ್ನತಕ್ಕದ್ದು; ಏಕೆಂದರೆ ಕಾಲಚಕ್ರ ಮಹಿಮದಿಂದ ಈಗ ಬೌದ್ಧರು ತಮ್ಮ ಕಾಲ್ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ನತೆಯನ್ನನುಸರಿಸಿದ್ದರು. ಒಂದಾನೊಂದು ಕಾಲಕ್ಕೆ ಅವರಲ್ಲಿ ಹೊಳೆಯುತ್ತಿದ್ದ ಆ ಕೆಂಡದಂಧ ವೈರಾಗ್ಯಭಾಗ್ಯ, ಆ ಸಾಧನ ಸ೦ಪತ್ತಿ, ಆ ಕಾರುಣ್ಯವೃತ್ತಿ, ಅವೆಲ್ಲವುಗಳು ಮಾಯವಾಗ ತೊಡಗಿದ್ದವು. ಬೌದ್ಧಧರ್ಮದೊಳಗೆ ಭಿಕ್ಷುಣಿಯರ ಅನಾಚಾರ ಬೆಳೆದು, ಇರುಳು ಕಂಡ ಹಳ್ಳದೊಳಗೆ ಹಗಲು ಬೀಳುವ ಸ್ಥಿತಿಯಾಗಿತ್ತು;) ಆದರೆ ಕಾಲಚಕ್ರದ ಗತಿಯನ್ನು ತಡೆಗಟ್ಟುವರಾರು? ಹಿಂದಕ್ಕೊಮ್ಮೆ ಬುದ್ಧ ದೇವನು ಹೆಂಗಸರನ್ನು ಕುರಿತು - "ನನ್ನ ಪ೦ಥದೊಳಗೆ ಹೆಂಗಸರು