ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೭
ಶಿಲ್ಪಕಲೆ.

ಸೇರಿಕೊಂಡ ಐದು ನೂರು ವರ್ಷಗಳಲ್ಲಿ ನನ್ನ ಮತವು ಹೇಳ ಹೆಸರಿಲ್ಲದಂತಾಗುವದು.” ಎಂದು ಕಣಿ ಹೇಳಿದ ವಾಕ್ಯವು ಮೆಲ್ಲಗೆ ಅನುಭವಕ್ಕೆ ಬರಲಾರಂಭಿಸಿತು. ಬೌದ್ಧರ ಏಳಿಗೆಯ ಕಾಲಕ್ಕೆ ಮೆರೆಯುವ ಪಟ್ಟಣಗಳು ನೋಡಿದಲ್ಲೆಲ್ಲ ಈಗ ಹಾಳು! ಬುದ್ಧದೇವನಿಗೆ ಜ್ಞಾನ ಪ್ರಾಪ್ತವಾದ ಪವಿತ್ರ ಬುದ್ಧಗಯೆಯು ಮುಳ್ಳುಕಂಟಗಳಿ೦ದ ಮುಚ್ಚಿ ಹೋಯಿತು. ಬೌದ್ಧರೇ ಬೌದ್ಧಮತವನ್ನು ಕೆಳಗೆಳೆಯಲಿಕ್ಕೆ ನಿಮಿತ್ತರಾದರೇ ಹೊರ್ತು ಯಾವ ಬ್ರಾಮ್ಹಣರಾಜರೂ ಅದನ್ನು ಕೆಳದೂಡಲಿಕ್ಕೆ ಕಾರಣರಾದ ಸ೦ಗತಿಯು ಇತಿಹಾಸದಲ್ಲಿಲ್ಲ. ಇದಕ್ಕೆ ಪ್ರತಿಯಾಗಿ ಪಾಟಲೀಪುತ್ರದ ನೆರೆಯಲ್ಲೊಂದು ಬೌದ್ಧವಿಹಾರವಿದ್ದು ಅಲ್ಲಿ ಸಾವಿರಾರು ಬೌದ್ಧ ಸನ್ಯಾಸಿಗಳೂ ಭಿಕ್ಷುಗಳೂ ಇದ್ದರೆ೦ದೂ, ಅವರಿಗೆಲ್ಲ ಕಲಿಸಲಿಕ್ಕೆ ಮಂಜುಶ್ರಿ ಎ೦ಬ ಬ್ರಾಹ್ಮಣ ವಿದ್ವಾಂಸನು ಇದ್ದನೆಂದೂ, ಅವನನ್ನು ಮಹಾಯಾನಪಂಧದ ಬೌದ್ಧರು ಬಹು ಮನ್ನಿಸುತ್ತಿದ್ದರೆಂದೂ ಒ೦ದೆಡೆಯಲ್ಲಿ ಹೇಳಿಯಿದೆ. ಬೌದ್ಧಮತದಂತೆ ಜೈನಮತವು ಕೆಳಗೆ ಬೀಳುವಷ್ಟು ಏರದೆ ಹುಟ್ಟುವವರಿಗೆ ಅಣ್ಣನಂತೆಯೂ, ಬೆಳೆಯುವವರಿಗೆ ತಮ್ಮನ೦ತೆಯೂ ಬಾಳಿಕೊ೦ಡಿದ್ದಿತು; ವೈದಿಕಧರ್ಮದ ಕೈಗೂ ಸುಗಳಾದ ವೈಷ್ಣವ ಹಾಗೂ ಶೈವಮತಗಳು ಬಹುಮಟ್ಟಿಗೆ ತಲೆಯೆತ್ತಿರವ. ಈ ಗೊಂದಲದೊಳಗೆ ಶಕ್ತಿಯುಪಾಸಕರಾದ ಶಾಕ್ತರೆ೦ಬ ಮತದವರು ಕೆಲಮಟ್ಟಿಗೆ ಕಾಣಿಸಿಕೊಂಡರೂ, ಅವರ ಮಾರ್ಗವು ಅತಿ ಕ್ರೂರವಾದುದರಿಂದ ಬಹು ಜನರ ಆದರಕ್ಕದು ಪಾತ್ರವಾಗದೆ ಉಳಿಯಿತು.

ಶಿಲ್ಪ ಕಲೆ:- ಆರ್ಯಜನಾ೦ಗಕ್ಕೆ ಆರ್ಯರಾದ ಗುಪ್ತರಿ೦ದ ಧಾರ್ಮಿಕ ರಾಜಕೀಯ ಸಾಮಾಜಿಕ ಮುಂತಾದ ದೃಷ್ಟಿಯಿ೦ದ ಸುಖವಾದಂತೆ, ಶಿಲ್ಪಕಲೆಯೂ ಇವರ ಅಳಿಕೆಯಲ್ಲಿ ಘನತೆಗೇರಿತು; ಆದುದರಿಂದ ಗುಪ್ತರ ಕೈಮಾಟವೆಂಬದೊಂದು ಬೇರೆ ಮಾದರಿಯೇ ಉತ್ಪನ್ನವಾಯಿತು. ಗುಪ್ತರಾಜರು ಕಟ್ಟಿಸಿದ ಗುಡಿಗಳು ಭವ್ಯವಾಗಿಯೂ, ಮೂರ್ತಿಗಳು ಬಹು ಅಂದವಾಗಿಯೂ, ಇರುವವೆಂದು ಅನೇಕ ಆಧುನಿಕ ಶಿಲ್ಪಜ್ಞರು ಬಹು ಪರಿಯಾಗಿ ಹೊಗಳಿದ್ದಾರೆ. ಪ್ರಪಂಚವನ್ನೆಲ್ಲ