ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೫

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೮
ಭಾರತೀಯರ ಇತಿಹಾಸವು.

ಬೆರಗುಗೊಳಿಸುವಂತಹ ಅಜ೦ಟಾ ಹಾಗೂ ವೇರೂಳದಲ್ಲಿಯ ಕೆಲವು ದಿವ್ಯ ಗುಹಾಲಯಗಳು ಗುಪ್ತರಾಳಿಕೆಯ ಕಾಲದಲ್ಲಿಯೇ ವಾಕಾತಕರೆಂಬ ದಕ್ಷಿಣದಲ್ಲಾಳುವ ಅರಸು ಮನೆತನದವರಿಂದ ಕೊರೆಯಲ್ಪಟ್ಟವು. ಅಜಿಂಟಾ ಗವಿಗಳಲ್ಲಿನ ಗೋಡೆಗಳೆಲ್ಲ ನಾನಾವಿಧದ ಚಿತ್ರಗಳಿಂದ ಅಲಂಕರಿಸಲ್ಪಟ್ಟು, (ಇ೦ದಿಗೂ ಹಿಂದೂಜನರ ಮೂರ್ತಿಕಲೆ, ಚಿತ್ರಕಲೆ, ಶಿಲ್ಪಕಲೆಗಳ ಜಾಣ್ಮೆಯನ್ನೂ, ಅವರ ಕೈವಾಡದ ಮೇಲ್ಮೆಯನ್ನೂ, ಅವರ ದೀರ್ಘೋದ್ಯಮದ ತಾಳ್ಮೆಯನ್ನೂ, ಅವರ ಸೂಕ್ಷ್ಮದೃಷ್ಟಿಯ ಬಲ್ಮೆಯನ್ನೂ ಹೊಗಳುತ್ತ ನಿಂತಿರುವಂತಿವೆ! ಗುಡ್ಡದೊಳಗೆ ಕೊರೆದ ಈ ಗುಹೆಗಳನ್ನೂ, ಅವುಗಳ ಸೊಬಗನ್ನೂ, ಅವುಗಳೊಳಗಿನ ಚಿತ್ರಕಲೆಯನ್ನೂ ನೋಡಿದರೆ ಎ೦ಧವನ ಮನಸಾದರೂ ಅಚ್ಚರಿಯಿಂದ ಬೆಚ್ಚಿಬೀಳುತ್ತದೆ; ಆದುದರಿಂದ ಇವುಗಳನ್ನು ಜಗತ್ತಿನೊಳಗಿನ ಚಮತ್ಕಾರಗಳೆಂದು ಬಲ್ಲವರು ಎಣಿಸುವದುಂಟು. ಕಲ್ಲಿನ ಕೆತ್ತಿಗೆಯ ಕೆಲಸದಲ್ಲಿ ಹೇಗೋ ಹಾಗೆ ಧಾತುಗಳಿ೦ದ ಮೂರ್ತಿ ಮಾಡುವದರಲ್ಲಿಯೂ ಎರಕ ಹೊಯ್ಯುವದರಲ್ಲಿಯೂ ಈ ಕಾಲದ ಜನರು ಬಹು ಗಟ್ಟಿಗರು. ಧ್ಯಾನಸ್ಥನಾಗಿ ಕುಳಿತಿರುವ ಏಳುವರೆ ಅಡಿಯುಳ್ಳ ತಾಮ್ರದಲ್ಲಿ ಎರಕ ಹೊಯ್ದುದ್ದೊಂದು ಬುದ್ಧದೇವನ ಮೂರ್ತಿಯು ಇದೇ ಕಾಲದಲ್ಲಿ ಮಾಡಿದುದಾಗಿದ್ದು ಈಗ್ಯೂ ಇ೦ಗ್ಲಂಡ ದೇಶದೊಳಗಿನ ಬರ್ಮಿ೦ಗ ಹ್ಯಾಮ ಪಟ್ಟಣದ ವಸ್ತುಸಂಗ್ರಹಾಲಯದಲ್ಲಿ ಮಿರಿ ಮಿರಿ ಮಿಂಚುತ್ತಿದೆ. ಎ೦ಭತ್ತು ಅಡಿ ಎತ್ತರವಾದ ಬುದ್ದನ ಇನ್ನೊಂದು ಮೂರ್ತಿಯು ಮಗಧರಾಜ್ಯದೊಳಗಿನ ನಾಲಂದವಿಹಾರದೊಳಗೆ ಇಡಲ್ಪಟ್ಟಿತ್ತು. ಈಗ. ದಿಲ್ಲಿಯಲ್ಲಿರುವ ಕಬ್ಬಿಣದ ಕಂಬವು ೨ ನೇ ಚಂದ್ರಗುಪ್ತನ ನೆನಪಿಗಾಗಿ ನೆಡಿಸಲಾಯಿತು. ಇದನ್ನು ನೋಡಿದರೆ ಧಾತುಗಳಿಂದ ಇಂತಿಂತಹ ಅಸಾಮಾನ್ಯವಾದ ಕೈಗೆಲಸಗಳನ್ನು ಹಿಂದೂಜನರು ಹೇಗೆ ಮಾಡುತ್ತಿದ್ದರೆಂಬುವ ಬಗ್ಗೆಯೂ ಅವರ ಕೈಗಾರಿಕೆ ನೈಪುಣ್ಯದ ವಿಷಯದಲ್ಲಿಯೂ ಸೋಜಿಗದಿಂದ ಮನುಷ್ಯನು ಹುಚ್ಚನಾಗುತ್ತಾನೆ. ಇ೦ಧ ಕಾರ್ಯವು ಜಗತ್ತಿನಲ್ಲಿಯೇ ಅಗುವದು ಅಸಾಧ್ಯವೆಂದು ಹಲವು ತಜ್ಞರ ಅಭಿಪ್ರಾಯ. ಈ ಮೇರೆ, ಗುಪ್ತರ ಈ ಕಾಲಕ್ಕೆ ಹಿಂದೂಜನರ ಬೌದ್ಧಿಕ