ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೬೯
ಕರ್ನಾಟಕದ ಬೆಳಿಗೆ.

ವ್ಯವಸಾಯವು ಲಲಿತವಾಙ್ಮಯ, ಶಾಸ್ತ್ರೀಯವಾಙ್ಮಯ, ಕಲಾಕೌಶಲ್ಯ, ಧರ್ಮಾಭಿಮಾನ ಇವೆಲ್ಲವುಗಳಿಂದ ಬೇರೆ ಬೇರೆ ಬಣ್ಣದ ಹರಳು ಕೆಚ್ಚಿದ ಉ೦ಗುರದಂತೆ ಸರ್ವಾಙ್ಮನೋಹರವಾಗಿದ್ದಿತು. ಇದಕ್ಕೆ ಇನ್ನೂ ಒಂದು ಹೆಚ್ಚಿನ ಕಾರಣವೆಂದರೆ, ಈ ಕಾಲದಲ್ಲಿ ಒಂದೆಡೆಯಲ್ಲಿ ಚೀನರಾಷ್ಟ್ರವು ಮತ್ತೊ೦ದೆಡೆಯಲ್ಲಿ ರೋಮನ್ ಸಾಮ್ರಾಜ್ಯವು ಅವೆರಡೂ ಭಿನ್ನ ಸಂಸ್ಕೃತಿಯ ಜನಾ೦ಗಗಳೊಡನೆ ಹರಿಯುವ ನೀರಿನ೦ತೆ ಹಿ೦ದೂ ಜನರ ಹೊಕ್ಕುಬಳಿಕೆ ನಡೆದುದರಿಂದ ಆ ಜನಾ೦ಗದವರ ನಡೆಯೊಳಗಿನ ಅನೇಕ ನೆರಳುಗಳು ನಮ್ಮಲ್ಲಿ ಮೂಡಿ, ಬುದ್ಧಿವಿಕಾಸಕ್ಕೆ ಇಂಬು ದೊರೆಯಿತು. ನಮ್ಮ ಶಾಸ್ತ್ರ ಹಾಗೂ ಕಲೆಗಳು ಮು೦ದೋಡಲಿಕ್ಕೆ ಪರಕೀಯ ಸಂಸ್ಕೃತಿಯ ಜನಾ೦ಗದವರೊಡನೆ ಸಂಬಂಧ ಬೆಳೆದುದೊ೦ದು ವಿಶೇಷ ಕಾರಣವೆಂದೆನ್ನಲು ಏನೂ ಅಡ್ಡಿಯಿಲ್ಲ.

ಕರ್ನಾಟಕದ ಬೆಳಿಗೆ:- ಚ೦ದ್ರಗುಪ್ತನು ಕರ್ನಾಟಕಕ್ಕೆ ಬಂದು ಈ ನಾಡಿನಲ್ಲಿಯೇ ದೇಹವಿಟ್ಟ ಸಂಗತಿಯನ್ನು ಹಿಂದಕ್ಕೆ ಹೇಳಿದ್ದೇವೆ. ಈ ಕಾಲದಲ್ಲೆಲ್ಲ ಕನ್ನಡನಾಡಿನ ಚರಿತ್ರೆಯು ದಿನಕೊಂದು ಚಂದಾಗಿ ಶರೀರದಿಂದ ಬೆಳೆದು ಕಳೆಗೊಳ್ಳುತ್ತಲೂ, ಮನಸಿನಿಂದ ವಿಚಾರಗಳನ್ನು ಮೈಗೂಡಿಸಿಕೊಂಡು ಮೆಲ್ಲಗೆ ಮೂಡುತ್ತಲೂ ನಡೆದಿತ್ತು. ಈ ನಾಡಿನ ಭವಿಷ್ಯವು ಮು೦ದೆ ಬಹು ವೈಭವವುಳ್ಳದ್ದಾಗಬೇಕೆಂದು ಭಗವಂತನ ಸ೦ಕಲ್ಪವಿದ್ದರಿಂದಲೋ ಏನೋ, ಇದರ ವಿಷಯವಾಗಿ ನಮಗೆ ಅಲ್ಲಿಷ್ಟು ಇಲ್ಲಿಷ್ಟು ಹೀಗೆ ಚದರಿ ಚಲ್ಲಾಪಿಲ್ಲಿಯಾಗಿ ಹೋದ ಸಂಗತಿಗಳು ದೊರಕುತ್ತವೆ. "ಕರ್ನಾಟಕ ಬಲವು" ಕ್ರಿ. ಶ. ಪೂ. ೨೦೫ ರಿ೦ದ ಮು೦ದೆ ಬಹು ದಿನಗಳ ವರೆಗೆ ಅನೇಕ ರಾಜರಿಗೆ ಬೆಂಬಲವಾಗಿದ್ದನ್ನೂ ಚೋಳರಾಜನು ಸಿಂಹಲದ್ವೀಪವನ್ನು ಗೆಲಿಯಲು ಹೋದಾಗ ಕನ್ನಡ ದಂಡನ್ನು ಮೈಸೂರಿನಿಂದ ಒಯ್ದಿರುವ ಸಂಗತಿಯನ್ನೂ ಓದಿದರೆ ಕನ್ನಡಿಗರು ಇಷ್ಟರಲ್ಲಿ ತಮ್ಮದೊಂದು ವೈಶಿಷ್ಟ್ಯವನ್ನು ಶಾರೀರಿಕದೃಷ್ಟಿಯಿಂದ ಬೆಳೆಸಿಕೊಂಡು ದಂಡಿನೊಳಗೆ ತೇಜವಡೆದು ಮಿಂಚುತ್ತಿದ್ದ ರೆನ್ನಲಿಕ್ಕೆ ಸಾಕು. ರಾಜಕೀಯದೃಷ್ಟಿಯಿಂದ ನೋಡಿದರೆ, ಕನ್ನಡ ನಾಡಿನ ಧೊರೆಗಳಾದ ಬಾಣ, ಗಂಗ, ಕದ೦ಬ ಮುಂತಾದವರು ರಾಜ್ಯ