ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭೩
ಶ್ರೀಹರ್ಷವರ್ಧನ.

ಗಂಡುಮಕ್ಕಳೂ, ರಾಜ್ಯಶ್ರಿ ಎಂಬೋರ್ವ ಕನ್ಯೆಯ : ಹೀಗೆ ಮೂವರು ಮಕ್ಕಳು. ರಾಜ್ಯಶ್ರಿಯನ್ನು ಕನೋಜದ ಅರಸನಾದ ಗೃಹವರ್ಮನಿಗೆ ಕೊಟ್ಟಿದ್ದರು; ಅದರೆ ಗೃಹವರ್ಮನ ಮೇಲೆ ಮಾಳವದ ಅರಸನಾದ ದೇವಗುಪ್ತನು ದಂಡೆತ್ತಿ ಹೋಗಿ ಗೃಹವರ್ಮನನ್ನು ಸೋಲಿಸಿ ಕೊಲೆ ಮಾಡಿ, ಆತನ ಹೆಂಡತಿಯಾದ ರಾಜಶ್ರಿಯನ್ನು ಸಂಕೋಲೆಗಳಿ೦ದ ಕಟ್ಟಿ ಸೆರೆಯಲ್ಲಿಟ್ಟು, ಬಂಗಾಲದ ಧೊರೆಯಾದ ಶಶಾಂಕಗುಪ್ತನ ನೆರವಿನಿಂದ ರಾಣೇಶ್ವರರಾಜ್ಯವನ್ನು ಮುರಿಯಬೇಕೆ೦ದು ಹೊಂಚು ಹಾಕಿದನು. ಹೀಗೆ ಹೊಂಚು ಹಾಕಿಕೊಂಡು ಕುಳಿತಿರುವಷ್ಟರಲ್ಲಿಯೇ ತನ್ನ ಭಾವಮೈದುನನ್ನು ಕೊಂದ ಸೇಡು ತೀರಿಸಿಕೊಳ್ಳಬೇಕೆಂದು ಮುನ್ನೋಟದ ರಾಜ್ಯವರ್ಧನನು ನಿರ್ಧರಿಸಿಕೊ೦ಡು ಮಾಳವಾಧಿವತಿಯ ಮೇಲೆ ನಡೆಮಾಡಿ, ಅವನನ್ನು ಸೋಲಿಸಿ, ತನ್ನ ಕತ್ತಿಗೆ ತುತ್ತು ಹಾಕಿದನು. ಇಷ್ಟಾದ ಸುದ್ದಿಯನ್ನು ತಿಳಿಯದಲೆ, ಶಶಾ೦ಕಗುಪ್ತನು ಮಿತ್ರನ ಅಭಿಮಾನದಿಂದ ಆತನ ಸಹಾಯಕ್ಕಾಗಿ ಧಾವಿಸಿ ಬಂದು ನೋಡುವಷ್ಟರಲ್ಲಿ ದೇವಗುಪ್ತನ ಕಥೆಯೇ ಮುಗಿದು ಹೋಗಿದ್ದಿತು. ಆಮೇಲೆ ಮಾಡುವದೇನು ? ಶಶಾಂಕಗುಪ್ತನು ಠಾಣೇಶ್ವರದ ರಾಜವರ್ಧನನೊಡನೆ ಒಪ್ಪಂದದ ಮಾತುಕಥೆ ನಡೆಯಿಸಿ ತನ್ನ ಮಗಳನ್ನು ಆತನಿಗೆ ಕೊಡಲೊಪ್ಪಿದನು. ಅದೇ ನಿಮಿತ್ತವಾಗಿ ನಿರ್ಭಯದಿಂದ ಎಲ್ಲರೂ ಕೂಡಿಕೊ೦ಡು ಪ್ರೀತಿಯಿಂದ ಊಟಕ್ಕೆ ಕುಳಿತಿರಲು, ರಾಜ್ಯವರ್ಧನನ್ನು ಶಶಾಂಕಗುಪ್ತನು ಕಪಟದಿಂದ ಕೊಲ್ಲಿಸಿದನು. ಈ ಮೇರೆಗೆ ಸಿ೦ಹಾಸನವನ್ನೇರಿದ ಒಂದು ಒಂದುವರೆ ವರ್ಷದೊಳಗಾಗಿ ಅಂದರೆ ಕ್ರಿ.ಶ. ೬೦೬ ರಲ್ಲಿ ರಾಜ್ಯವರ್ಧನನ ಆಳಿಕೆಯ ಐಸಿರಿಯು ಮುಕ್ತಾಯವಾಯಿತು.

ಶ್ರೀಹರ್ಷವರ್ಧನ:- ಕ್ರಿ. ಶ. ೬೦೬ ರಿಂದ ೬೪೭ ವರೆಗೆ. ಈ ಸಮಯ ಕ್ಕೆ ಹರ್ಷವರ್ಧನನು ಹದಿನಾರು ವರ್ಷದ ಕಾಮಾರ. ತಂದೆಯಾದ ಪ್ರಭಾಕರವರ್ಧನನು ಮಡಿದನ೦ತರ ಅವನೊಡನೆ ತಾಯಿಯೂ ಸಹಗಮನ ಹೋದ್ದರಿಂದ ಇವರಿಗೆ ಪರದೇಶಿತನವೇ ಬಂದಿತ್ತು; ಆದರೂ ಒಡಹುಟ್ಟಿದ ಇಬ್ಬರೂ ಅಣ್ಣ ತಮ್ಮಂದಿರಲ್ಲಿ ರಾಮಲಕ್ಷ್ಮಣ