ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೬

ಭಾರತೀಯರ ಇತಿಹಾಸವು.

ಳಿ೦ದ ಸ೦ತೈಸಿ, ಧೈರ್ಯಗೊಟ್ಟು, ತನ್ನೊಡನೆ ಕರೆದುಕೊಂಡು ಹೊರಟನು. ದಾರಿಯಲ್ಲಿರುವ ದಿವಾಕರಮಿತ್ರನೆಂಬ ಬೌದ್ಧ ಭಿಕ್ಷುವು ತನ್ನ ಪತಿಯ ಗೆಳೆಯ ನೆ೦ಬ ವಿದ್ಯಮಾನವನ್ನರಿತಾಗ೦ತೂ, ಸ೦ಸಾರ ಪಾಶವನ್ನು ಹರಿದೊಗೆದು ತಣ್ಣಗೆ ಭಿಕ್ಷುಣಿಯಾಗಿ ಕಾಲಕಳೆಯಬೇಕೆಂದು ಅವಳು ಹಟವಿಡಿದಳು; ಆದರೆ 'ಮೊದಲು ಕರ್ತವ್ಯ, ಕೊನೆಯಲ್ಲಿ ಸನ್ಯಾಸ' ಎಂಬೀ ಅಣ್ಣನ ಹಾಗೂ ದಿವಾಕರಮಿತ್ರರ ಸಲಹೆಯನ್ನು ಮನ್ನಿಸಿ ಅಣ್ಣನೊಡನೆ ತನ್ನ ರಾಜಧಾನಿಯಾದ ಕನೋಜಕ್ಕೆ ಬಂದು ತಲ್ಪಿದಳು. ಆಮೇಲೆ ರಾಜ್ಯವಾಳುವ ಸಲುವಾಗಿ ಯಾವ ದಾರಿಯನ್ನವಲಂಬಿಸಬೇಕೆಂದು ಅವರವರೊಳಗೆ ಚರ್ಚೆ ನಡೆದು ಕೊನೆಗೆ ಹರ್ಷನು ರಾಜ್ಯಶ್ರೀಯನ್ನು ಪಟ್ಟಕ್ಕೆ ಕುಳ್ಳಿರಿಸಿ, ತನ್ನ ರಾಜಧಾನಿಯನ್ನು ರಾಣೇಶ್ವರದಿಂದ ಕನೋಜಕ್ಕೆ ಒಯ್ದು, ತನ್ನ ಹಾಗೂ ತ೦ಗಿಯ ರಾಜ್ಯಭಾರ ನಡಿಸಹತ್ತಿದನು. ಅಣ್ಣ ತಂಗಿಯರ ಈ ಅಕೃತ್ರಿಮವಾದ ಅಕ್ಕರತೆಯು ಇಬ್ಬರ ಜೀವಮಾನದ ವರೆಗೆ ಅಖಂಡವಾಗಿ ಸಾಗಿತು; ಅಲ್ಲದೆ ಅವರಿವರ ಮನಸಿನ ಬಲವು ಬಲುಮಟ್ಟಿಗೆ ಬೌದ್ಧ ಧರ್ಮದ ಕಡೆಗೆ ಒಲಿದಿದ್ದರಿ೦ದಲೂ ಧಾರ್ಮಿಕ ಅ೦ಶದೊಳಗೂ ಅವರಿಬ್ಬರೂ ಒಂದಾಗಿ ಹೋಗುತ್ತಿದ್ದರಿಂದಲೂ ಕಡೆ ಗಾಲದವರೆಗೂ ಅವರಲ್ಲಿ ಯಾವ ವಿಧದ ಕೊ೦ಕೂ ಕಾಣಿಸಿಕೊಳ್ಳಲಿಲ್ಲ. ಹಿಂದೂದೇಶದ ಇತಿಹಾಸದೊಳಗೆ ಈ ಅಣ್ಣ ತ೦ಗಿಯರ ಶುದ್ಧ ಪ್ರೇಮದ ಕತೆಗೆ ಸಾಟಿಯಿಲ್ಲ.

ಹರ್ಷನ ಸಾಮ್ರಾಜ್ಯ ವಿಸ್ತಾರ:-ಕಟ್ಟೆಯ ಕಲ್ಲನ್ನು ಕಟ್ಟಿಗೆ ಕೂಡ್ರಿಸುವ ತೆರನಾಗಿ ಹರ್ಷನು ತಂಗಿಯನ್ನು ಪಟ್ಟಕ್ಕೆ ಕುಳ್ಳಿರಿಸಿ ಕೃತಾರ್ಥನಾಗಿ ಮತ್ತೆ ಯಧಾಪ್ರಕಾರ ದಿಗ್ವಿಜಯಕ್ಕೆ ಅಡಿಯಿಟ್ಟನು. ಆರು ವರ್ಷಗಳ ತನಕ ಇಡೀ ಉತ್ತರಹಿಂದೂದೇಶವನ್ನೆಲ್ಲ ತನ್ನ ಅ೦ಕೆಗೆ ಒಳಪಡಿಸದೆ ಆತನೇನು ಶಸ್ತ್ರವನ್ನು ಕೆಳಗಿಡಲಿಲ್ಲ; ಕುದುರೆಯ ತಡಿಯನ್ನು ಬಿಚ್ಚಲಿಲ್ಲ; ಅನೆಗಳ ಮೇಲೆ ಹೇರಿದ ಅ೦ಬಾರಿಯನ್ನು ಕೆಳಗಿಳಿಸಲಿಲ್ಲ. ಉತ್ತರಹಿ೦ದೂದೇಶದೊಳಗಿನ ಪಂಜಾಬ, ಸಿಂಧ, ಹಾಗೂ ಕಾಶ್ಮೀರ ಇವಿಷ್ಟು ಪ್ರಾಂತಗಳು ಪೂರ್ಣವಾಗಿ ಅವನ ಕೈಸೇರದಿದ್ದರೂ ಅವರಿಂದಲೂ ಕಪ್ಪನ್ನು ತೆಗೆದುಕೊಂಡಿದ್ದನು. ಆಸಾ