ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭೭
ಮನೆತನದ ಸ್ಥಿತಿ ಹಾಗೂ ಅಂತಕಾಲ.

ಮದ ಕುಮಾರರಾಜನು ಈತನಿಂದಲೇ ಉದ್ದಾರವಾದನು. ಈ ಮೇರೆಗೆ ದಿಗ್ವಿಜಯ ಮಾಡಿಕೊಂಡು ಮರಳಿ ಬಂದ ನಂತರ ಹರ್ಷವರ್ಧನನು ಕ್ರಿ. ಶ. ೬೧೨ ರಿ೦ದ ತನ್ನ ಶಕವನ್ನು ಪ್ರಾರಂಭಿಸಿದನು. ಚಕ್ರವರ್ತಿ ಪದವಿಯನ್ನೇರಿದವನು ತನ್ನ ಹೆಸರಿನ ಶಕವನ್ನು ಪ್ರಾರಂಭಿಸುವದೊಂದು ತತ್ಕಾಲೀನ ಲಕ್ಷಣವಾಗಿತ್ತೆಂಬುದು ಅನೇಕ ರಾಜರ ನಡೆಯಿಂದ ಸಿದ್ದವಾಗುತ್ತದೆ. ಉತ್ತರಹಿ೦ದೂದೇಶವೆಲ್ಲ ತನ್ನ ಅಧೀನಕ್ಕೆ ಬಂದ ನಂತರ ತನ್ನ ದಿಗ್ವಿಜಯದ ದಿಕ್ಕನ್ನು ಹರ್ಷನು ದಕ್ಷಿಣಕ್ಕೆ ತಿರುಗಿಸಿದನು; ಮತ್ತು ನರ್ಮದೆಯ ದಕ್ಷಿಣಕ್ಕೂ ತನ್ನ ರಾಜ್ಯವನ್ನು ಬೆಳೆಸಬೇಕೆಂದು ಹಾತೊರೆಯ ತೊಡಗಿದನು. ಆದರೆ ಆ ಕಾಲದಲ್ಲಿ ದಕ್ಷಿಣದೇಶವನ್ನೆಲ್ಲ ಕರ್ನಾಟಕ ವೀರನಾದ ೨ ನೇ ಪುಲಿಕೇಶಿಯು ಅಳುತ್ತಿದ್ದದರಿಂದ ಅವನು ಶ್ರೀಹರ್ಷನಿಗೆ ನರ್ಮದೆಯ ದಂಡೆಯ ಹತ್ತಿರವೇ ತನ ಕೈಮೆಯನ್ನು ತೋರಿಸಿ ಬಿಂಕಬೆಸೆದು ಓಡಿಸಿ, ಆಚೆ ಅಟ್ಟಿದನು. ಈ ಮೇರೆಗೆ ಹೊಡೆತ ತಿಂದು ಇನ್ನು ಮುಂದೆ ಸಾಗುವದು ಒಳಿತಲ್ಲವೆಂದರಿತು, ಶ್ರಿಹರ್ಷನು ಮರಳಿ ರಾಜಧಾನಿಗೆ ಸಾಗಿ ಮು೦ದೆ ೪೧ ವರ್ಷಗಳ ವರೆಗೆ ಅವಿಚ್ಛಿನ್ನವಾಗಿಯೂ, ಬಹು ಸಂಭ್ರಮದಿಂದ ರಾಜ್ಯಭಾರ ನಡಿಸಿದನು, ಹರ್ಷನ ಆಳಿಕೆಯೆಂದರೆ, ಸಿರಿಗಾಲದ ತುಟ್ಟತುದಿ.

ಮನೆತನದ ಸ್ಥಿತಿ ಹಾಗೂ ಅ೦ತಕಾಲ:- ಹರ್ಷನು ಸಾಮ್ರಾಜ್ಯಸುಖವನ್ನನುಭವಿಸುವಂಧ ಮಹಾಭಾಗ್ಯಶಾಲಿಯಿದ್ದರೂ ತನ್ನ ತರುವಾಯ ತಾನು ಗಳಿಸಿದ ರಾಜಭೋಗವನ್ನನುಭವಿಸಲು ಗಂಡು ಸಂತತಿ ಇರದ್ದರಿಂದ ಆತನು ರಾಜ್ಯದ ಬಗ್ಗೆ ಬಹು ಉದಾಸೀನನಾಗಿ ಬರಬರುತ್ತ ಹಚ್ಚೆಚ್ಚು ಧರ್ಮಪರನಾದನು. ಈತನ ಹೊಟ್ಟೆಯಿಂದ ಒಬ್ಬಳೇ ಕನ್ನೆಯಿದ್ದಳು; ಆಕೆಯನ್ನು ವಲಭೀರಾಜನಿಗೆ ಕೊಟ್ಟಿದ್ದಿತು. ತನಗೆ ಗಂಡು ಮಕ್ಕಳಿಲ್ಲೆ೦ಬ ಅಳಲಿನಿಂದ ಅವನ ಮನಸ್ಸಿನಲ್ಲಿಯ ಹವ್ಯಾಸವೆ೦ಬುದೆಲ್ಲವೂ ಉಡುಗಿತು. ಅದ್ವಿತೀಯ ಸಮ್ರಾಟನಾದ ಹರ್ಷನನ್ನು ಹೀಗೆ ವೈರಾಗ್ಯವು ಮುಸುಕಿಕೊ೦ಡದ್ದರಿಂದ ಆತನು ಮು೦ದುಗಾಣದೆ ಐದು ವರ್ಷಕ್ಕೊಮ್ಮೆ ಮಹಾಸಮಾರಂಭವನ್ನು ನಡೆಯಿಸಿ, ಆ ಸಮಾರಂಭಕ್ಕೆ ಬರುವ ವಿದ್ವಾಂಸರಾದ ಬ್ರಾಹ್ಮಣರಿಗೂ ಭಕ್ತಿವಂತರಾದ ಬೌದ್ಧ