ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭೯
ಹರ್ಷಕಾಲದ ಜಾತಿವ್ಯವಹಾರಗಳು..

ಮಿರುಗುತ್ತಿರುವ ಬಾಣಭಟ್ಟನೆಂಬ ಗದ್ಯ ಕವಿಯು ಬರೆದಿಟ್ಟಿರುವ ಹರ್ಷಚರಿತವೆ೦ಬುದೂ, ಅವೆರಡೇ ವಿಶ್ವಸನೀಯವಾದ ಆಧಾರಗ್ರಂಥಗಳು ಉಳಿದಿವೆ. ಆದುದರಿಂದ ಈ ಬಗ್ಗೆ ಹ್ಯೂಯೆನತ್ಸ೦ಗ ಪ್ರವಾಸ ವರ್ಣನೆಯಲ್ಲಿರುವ ವಿಷಯವನ್ನಷ್ಟು ತೆಗೆದುಕೊಳ್ಳುವ."ಈ ಕಾಲಕ್ಕಾದರೂ ಭರತಖಂಡಕ್ಕೆ ಶಿಂತು ಅಥವಾ ಹಿಂತು ದೇಶವೆಂಬ ಹೆಸರಿತ್ತು. ಈ ದೇಶದಲ್ಲಿ ಕಂಡುಬರುವ ನಾನಾ ಬಗೆಯ ಜನರುಗಳಲ್ಲಿ ಬ್ರಾಮ್ಹಣರೆಂಬುವರು ಶುದ್ದರೂ, ಸಾತ್ವಿಕರೂ, ಸರ್ವರ ಮನ್ನಣೆಗೆ ಅರ್ಹರಾದವರು. ಇವರ ನಿಷ್ಕಲ೦ಕವಾದ ನಡೆಯಿಂದಲೇ ಈ ದೇಶಕ್ಕೆಲ್ಲ ಬ್ರಮ್ಹಾವರ್ತ ಅಥವಾ ಬ್ರಾಮ್ಹಣರ ದೇಶವೆಂದೇ ವಾಡಿಕೆಯಾಯಿತು.” ಬುನಾದಿಕಾಲದಿಂದ ಮೊದಲುಗೊಂಡು ಆರನೇ ಏಳನೇ ಶತಾಬ್ದಗಳ ವರೆಗೆ ಬ್ರಾಮ್ಹಣರು ತಮ್ಮ ನಿರ್ಮಲವಾದ ಚಾರಿತ್ರ್ಯದಿಂದಲೂ, ಬುದ್ಧಿಯ ಹೆಚ್ಚುಗಾರಿಕೆಯಿ೦ದಲೂ, ಒಂದು ಬಗೆಯಿಂದ ಸಮಾಜದ ಪ್ರಭುಗಳಾಗಿ ಬಾಳುತ್ತಿದ್ದುದು ಬ್ರಾಮ್ಹಣ ಜಾತಿಗೇನೇ ಭೂಷಣವೆ೦ದಾರು ಅನ್ನಲಿಕ್ಕಿಲ್ಲ ? ಯಾವುದೊ೦ದು ದೇಶಕ್ಕೆ ಅಲ್ಲಿರುವ ಜನರ ಪ್ರೌಢಿಮೆಯ ಮೂಲಕ ಅದೇ ಅನ್ವರ್ಥಕವಾದ ಹೆಸರು ಬಂದಿರುವದೆಂದು ಪರದೇಶದ ಪ್ರವಾಸಿಕರು ಬರೆದಿಟ್ಟರುವಲ್ಲಿ ಎಷ್ಟೊಂದು ಅರ್ಧವಿದೆ ? ಬ್ರಾಮ್ಹಣರಂತೆ ಕ್ಷತ್ರಿಯರ ಬಗ್ಗೆಯೂ ಹೂಯೆನತ್ಸಂಗನು “ ಕ್ಷತ್ರಿಯ ಹಾಗೂ ಬ್ರಾಮ್ಹಣರ ನಡೆಯು ಚೊಕ್ಕಟವಾಗಿಯೂ ಸಾದಾ ಅಗಿಯೂ ಇದೆ. ಇವರು ಆಡಂಬರದವರಲ್ಲ. ಬಡತನದಿಂದ ಬಾಳ್ವೆ ಮಾಡಿಕೊಂಡಿರುವವರು. ಈ ದೇಶದೊಳಗೆ ಆನುವಂಶಿಕವಾಗಿ ನಡೆದುಬಂದಿರುವಂಥ ಒಟ್ಟು ನಾಲ್ಕು ಜಾತಿಗಳು. ಅವರೆಲ್ಲರೂ ತಮ್ಮ ತಮ್ಮಗಳ ತತ್ವಕ್ಕೆ ಮೀರದಂತೆ ಸಮಾಧಾನದಿಂದಿರುವರು. ಇವರಲ್ಲಿ ಕ್ಷತ್ರಿಯರು ಎರಡನೇ ಮೆಟ್ಟಿನವರು. ಸಮಾಜದ ಒಡೆಯರು ಅವರೇ ಪರೋಪಕಾರ ಭೂತದಯೆಗಳೇ ಅವರ ಆಳ್ವಿಕೆಯ ಮುಖ್ಯ ಲಕ್ಷಣಗಳು. ಮರನೇ ಮೆಟ್ಟಿಲಿನವರೇ ವೈಶ್ಯರು. ಒಳನಾಡಿನಲ್ಲಿಯೂ ಹೊರನಾಡಿನಲ್ಲಿಯೂ ವ್ಯಾಪಾರನಡಿಸುವದೇ ಅವರ ಗೊತ್ತಿನ ಹೋರೆ. ಶೂದ್ರಜಾತಿಯೇ ನಾಲ್ಕನೆಯದು. ಹೊಲಗದ್ದೆಗಳಲ್ಲಿ ದುಡಿದು, ಉತ್ತು