ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೦

ಭಾರತೀಯರ ಇತಿಹಾಸವು.

ಬಿತ್ತಿ ಬೆಳೆಬರುವಂತೆ ಕಷ್ಟಪಡುವರವರು. ಮೇಲ್ಕಂಡ ಜಾತಿಜಾತಿಗಳಲ್ಲಿ ಹೆಣ್ಣುಗಂಡಿನ ವ್ಯವಹಾರವಿಲ್ಲ. ಎಲ್ಲರೂ ತಮ್ಮ ತಮ್ಮ ಜಾತಿಯೊಳಗಿನ ಹೆಣ್ಣುಗಂಡುಗಳನ್ನಾರಿಸುವರು. ಹೆಂಗಸರು ಪುನರ್ವಿವಾಹ ಮಾಡಿಕೊಳ್ಳುವದಿಲ್ಲ. ಕುಲಶೀಲಕ್ಕನುಗುಣವಾಗಿ ಅವರಲ್ಲಿ ಅನೇಕ ಪಂಗಡಗಳು೦ಟಾಗಿವೆ.” ಮೇಲ್ಕಾಣಿಸಿದಂತೆ ಹ್ಯೂಯೆನತ್ಸ೦ಗನು ಬರೆದಿಟ್ಟಿದ್ದರೂ, ಅರಮನೆತನಗಳಲ್ಲಿ ಕ್ಷತ್ರಿಯವೈಶ್ಯರೆಂಬುವ ನಿಷೇಧವಿಲ್ಲದೆ ಶರೀರಸ೦ಬ೦ಧಗಳು ಸಾಗುತ್ತಿದ್ದವೆನ್ನಲಿಕ್ಕೆ ವೈಶ್ಯರಾದ ಹರ್ಷಮನೆತನಕ್ಕೂ ಕ್ಷತ್ರಿಯರಾದ ಗುಜರಾತಿನ ವಲಭೀ ರಾಜರಿಗೂ ನೆಂಟಸ್ತನವಿದ್ದುದೇ ಸಾಕು. ಕೆಲವೆಡೆಯಲ್ಲಿ ಬ್ರಾಮ್ಹಣ ವೈಶ್ಯ, ಕ್ಷತ್ರಿಯ ಶೂದ್ರ, ಬ್ರಾಮ್ಹಣ ಶೂದ್ರರಲ್ಲಿಯೂ ಅನುಲೋಮ ವಿವಾಹಗಳಾದ ಉದಾಹರಣೆಗಳು೦ಟು. ಹೀಗೆ ಸಡಿಲುಗೊ೦ಡಿರುವ ಸಾಮಾಜಿಕ ರೂಢಿಯು ಬರಬರುತ್ತ ಹೆಚ್ಚೆಚ್ಚು ಬಿಗುವಾಗುತ್ತ ಮು೦ದೆ ಯಾವ ಜಾತಿಗಳೊಡನೆಯೂ ಶರೀರಸ೦ಬ೦ಧ ಬೆಳೆಸುವದೆ೦ದರೆ ಅಧರ್ಮವೆಂಬುವಷ್ಟರ ಮಟ್ಟಿಗೆ ಸ್ಥಿತ್ಯ೦ತರವಾಯಿತು. ಇರಲಿ. ಕ್ಷತ್ರಿಯರೇ ರಾಜರಾಗಬೇಕೆಂದಿದ್ದರೂ ಶೂದ್ರರಿಗಾಗಲಿ, ವೈಶ್ಯರಿಗಾಗಲಿ ಅವರವರ ದೈವಯೋಗದಿಂದ ರಾಜ್ಯಪ್ರಾಪ್ತಿಯಾದರೆ ಅವರನ್ನೆಂದೂ ಕ್ಷತ್ರಿಯರಲ್ಲಿ ಸೇರಿಸುತ್ತಿದ್ದಿಲ್ಲ: ಅಧವಾ ಕ್ಷತ್ರಿಯರೆಂದು ಸಂಬೋಧಿಸುತ್ತಿರಲಿಲ್ಲ. ಬಾಣಭಟ್ಟನಿಗೆ ಆಶ್ರಯದಾತನಾಗಿರುವ ಸಾರ್ವಭೌಮ ಹರ್ಷಮಹಾರಾಜನನ್ನು ಕೂಡ ಬಾಣನು ಹರ್ಷಚರಿತ ಗ್ರ೦ಧದೊಳಗೆ ಕ್ಷತ್ರಿಯನೆ೦ದು ಹೇಳದೆ, ವೈಶ್ಯನೆ೦ದೇ ಸ್ಪಷ್ಟವಾಗಿ ನುಡಿದಿರುವನು. ಇದರಲ್ಲಿಯ ತಿರುಳಿನ ಮಾತೆಂದರೆ, ರಾಜ್ಯಪ್ರಾಪ್ತಿಯಾದರೂ, ಜಾತಿದೃಷ್ಟಿಯಿಂದ ಮನುಷ್ಯನ ಯೋಗ್ಯತೆಯು ಮೇಲು ಕೀಳಾಗುತ್ತಿರಲಿಲ್ಲ; ಮತ್ತು ಹಾಗಾಗಬೇಕೆಂದು ಯಾರೂ ಬಯಸುತ್ತಿರಲಿಲ್ಲ. ಬ್ರಾಮ್ಹಣರ ಹೆಸರಿನ ಮು೦ದೆ ಶರ್ಮಾ, ಭಟ್ಟ, ದೇವ, ಆರ್ಯ ಹಾಗೂ ಸ್ವಾಮಿ ಈ ಉಪಪದಗಳನ್ನು ಹಚ್ಚುವ ವಾಡಿಕೆಯಿದ್ದಿತು. ಹೀಗಿದ್ದರೂ, ಅವರು ಬರಿಯ ಧರ್ಮ ಅಥವಾ ವಿದ್ಯಾಧ್ಯಯನಾದಿಗಳಲ್ಲಿಯೇ ಕಾಲಕಳೆಯದೆ, ರಾಜಕಾರ್ಯದೊಳಗೆ ಹೊಕ್ಕು ದೊಡ್ಡ ದೊಡ್ಡ ಹುದ್ದೆಯ ಕೆಲಸಗಳನ್ನು