ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೮೧
ಸಾಮಾಜಿಕ ದೇಶಾಚಾರಗಳು.

ಮಾಡಿದ ಬಗ್ಗೆ ಎಷ್ಟೋ ಅಧಾರಗಳಿವೆ. ಕ್ಷತ್ರಿಯರು ವರ್ಮಾ, ಭಟ್ಟ, ತ್ರಾತಾ ಈ ಪದವಿಗಳನ್ನು ಹಚ್ಚಿಕೊಳ್ಳುತ್ತಿದ್ದರು. ವೈಶ್ಯರು ಗುಪ್ತ, ವರ್ಧನ, ಭೂತಿ ಈ ಜಾತಿವಾಚಕ ಬಿರುದುಗಳನ್ನು ಬಳೆಯಿಸುತ್ತಿದ್ದರು.

ಸಾಮಾಜಿಕ ದೇಶಾಚಾರಗಳು:-ಹರ್ಷಮಹಾರಾಯನ ಕಾಲವೆಂದರೆ, ಪ್ರಾಚೀನಾರ್ವಾಚೀನ ಕಾಲಗಳಲ್ಲಿಯ ಭೇದವನ್ನು ತೋರಿಸುವಂಥ ಮೇರೆ ಗೆರೆಯು; ಮತ್ತು ಅವೆರಡೂ ಕಾಲಗಳನ್ನು ಕೂಡಿಸುವ ಕೊ೦ಡಿಯು. ಹಳೆಯ ಕಾಲದ ಹೊದಿಕೆಯು ಇಲ್ಲಿಗೆ ಮುಗಿದು ಹೊಸಗಾಲಕ್ಕೆ ಮೊದಲಾಯಿತು. ಈ ಕಾಲದ ಜನರ ಉಡಿಗೆತೊಡಿಗೆ, ನಡೆನುಡಿ, ಒಡವೆತೊಡವೆಗಳನ್ನು ಕುರಿತು ಹ್ಯುಯೆನತ್ಸ೦ಗನು ಬರೆದಿಟ್ಟರುದವದನ್ನೇ ಸಂಕ್ಷೇಪವಾಗಿ ನೋಡೋಣ ."ಈ ಜನರು ಹೊಲಿದ ಬಟ್ಟೆಗಳನ್ನು ಬಳಿಸುವದಿಲ್ಲ. ಇವರಿಗೆ ಬೆರಿಕೆಯ ಬಣ್ಣದ ಬಟ್ಟೆಗಳು ಸೇರುವದಿಲ್ಲ. ಬಿಳಿ ಬಟ್ಟೆಯೆ೦ದರೆ ಬಹು ಇಷ್ಟ. ಗಂಡಸರು ಸೊ೦ಟಕ್ಕೊಂದು ಉದ್ದವಾದ ಬಟ್ಟೆಯನ್ನು ಸುತ್ತಿಕೊಳ್ಳುವರು. ಅ೦ಥದೇ ಪ೦ಜೆಯನ್ನು ಎಡ ಹೆಗಲಿನ ಮೇಲಿಂದ ಹಾಯಿಸಿ ಬಲಗೈಯನ್ನು ತೆರವಿಟ್ಟಿರುತ್ತಾರೆ. ಹೆಂಗಸರು ಈ ಉದ್ದೋಉದ್ದವಾದುದೊ೦ದು ಉಡಿಗೆಯನ್ನುಟ್ಟು ಕಚ್ಚೆ ಹಾಕದೆ ಹಾಗೆಯೇ ಬಿಟ್ಟರುವದು೦ಟು. ತಲೆಯ ಮೇಲ್ಗಡೆಯ ಕೂದಲಿಗೊಂದು ಗಂಟು ಹಾಕಿ ಕೆಳಗಡೆಯ ಕೂದಲನ್ನು ಜೋತು ಬಿಟ್ಟಿರುತ್ತಾರೆ. ಗಂಡಸರಲ್ಲಿ ಕೆಲವರಿಗೆ ಮೀಸೆಯುಂಟು. ಕೆಲವರಿಗಿಲ್ಲ. ಗ೦ಡಸರು ಚಂಡಿಕೆಗೆ ಹೂವಿನ ಕುಚ್ಚುಗಳನ್ನು ಮುಡಿದುಕೊಳ್ಳುವದುಂಟು.” ಇದರಿಂದ ಹರ್ಷಕಾಲದಲ್ಲಿ ಹಿಂದುಸ್ಥಾನದೊಳಗೆ ಇನ್ನೂ ಹೊಲಿಯುವ ಕಲೆಯು ವಾಡಿಕೆಯಲ್ಲಿರಲಿಲ್ಲವೆಂಬದು ಸಿದ್ದವಾಗುತ್ತದೆ. ಹ್ಯುಯೆನತ್ಸಂಗನ ಮೇಲಿನ ವಿಧಾನಕ್ಕೆ ಹರ್ಷಚರಿತ್ರೆಯಲ್ಲಿ ಬೆಂಬಲವುಂಟು. ಹರ್ಷಮಹಾರಾಯನು ದಿಗ್ವಿಜಯಕ್ಕೆ ಬಿಜಯ ಮಾಡಿಸಿದ ಕಾಲಕ್ಕೆ ಆತನ ಮೈಮೇಲೆ ರಾಜಹಂಸ ಅಚ್ಚಿನ ಒ೦ದೇಸಮವಾಗಿರುವ ಎರಡು ಬಿಳೇ ವಸ್ತ್ರಗಳಿದ್ದವು. ಚಕ್ರವರ್ತಿಯ ಲಕ್ಷಣವೆಂದು ಕೋರೆಚಂದ್ರನಾಕಾರದ ಹೂವಿನ ಮಾಲೆಯೊಂದನ್ನು ತಲೆಗೆ ಕಟ್ಟಿಕೊ೦ಡಿದ್ದನೆಂದು ಬಾಣನು ಬಣ್ಣಿಸಿದ್ದಾನೆ.