ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೮೪ ಭಾರತೀಯರ ಇತಿಹಾಸವು. ದಾಗ್ಗೆ ಜವಾನದ ಮಂತ್ರಿಯೊಬ್ಬನು ಗುಂಡು ಹಾಕಿಕೊಂಡು ಸತ್ಯ ಸ೦ಗತಿಯು ಪ್ರಸಿದ್ಧವಿದೆ. ಧೋರೆಯ ದೆಸೆಯಿಂದ ಪೂರ್ವಿಕರಲ್ಲಿ ತಮ್ಮ ಜೀವವನ್ನು ಸಹ ನಿವಾಳಿಸಿ ಒಗೆಯುವಂಧದೊಂದು ಲೋಕೋತ್ತರ ವಾದ ಸ್ವಾಮಿ ಭಕ್ತಿಯ, ಸಖ್ಯ ಭಕ್ತಿಯ ಇರುವದು ನಿಶ್ಚಯ ವಾಗಿಯೂ ಬಣ್ಣಿಸಲಾಗದ ಮಾತೇ ಸರಿ. ಹಿಂದೂ ಜನರ ತತ್ಯಾ ಲೀನ ಮನಸಿನ ಒಲವು ಬಲಗಳು ಎಷ್ಟು ಸೂಕ್ಷ್ಮ ಮತ್ತು ಕಾಲನಿಗೂ 2ಒಲಿಸತಕ್ಕ ಮಾತಾಗಿದ್ದವೆಂಬುದು ಮಾದರಿಗಾಗಿ ಮೇಲ್ಕಾಣಿಸಿದ ಮಾತುಗಳಿಂದ ವ್ಯಕ್ತವಾಗುತ್ತದಲ್ಲವೇ ? * ಶಿಕ್ಷಣ ಪದ್ಧತಿ:- ಹರ್ಷನ ಆಡಳಿತೆಯ ಸಮಯ ಕೈ ಅರಸು ಮಕ್ಕಳ ಶಿಕ್ಷಣವೂ, ನಾ ಮಾನ್ಯರ ಶಿಕ್ಷಣವೂ ಬೇರೆ ಬೇರೆಯಾಗಿ ನಡೆ ಯುತ್ತಿತ್ತೆಂದು ಹೇಳಲು ನನಗಾವ ಅನುಮಾನವೂ ತೋರುವದಿಲ್ಲ. ಏಕೆಂದರೆ ಬಾಣಕವಿಯು ತನ್ನ ಹರ್ಷ ಚರಿತ್ರೆಯಲ್ಲಿ ಹರ್ಷನ ಶಿಕ್ಷಣ ವನ್ನು ಕುರಿತು ಅಕ್ಷರಗಳಿಂದ ಬಣ್ಣಿಸುವಾಗ್ಗೆ ಹೇಳಿದ್ದು - ಪಟ್ಟಣದ ಹೊರಗಡೆ ಇಟ್ಟಿಗೆಗಳಿಂದ ಕಟ್ಟಿ ದೊಂದು ಕಟ್ಟಡ. ಬೆಳ್ಳಗೆ ಮಂಜಿ ನಂತೊಪ್ಪುವ ಅದರ ಗೋಡೆಗಳು. ಸುತ್ತಲೂ ನೀರಿನಿಂದ ತುಳುಕಾ ಡುತ್ತಿರುವ ಕಂದಕವ. ಇ೦ಧ ಕೋಟೆಯೊಳಗೊಂದು ವಿದ್ಯಾ ಮಂದಿ ರವು, ವಿದ್ಯಾಮಂದಿರದೊಳಗೆ ಮಹಾ ಮಹಾ ವಿದ್ವಾಂಸರು ಉಪಾ ಧ್ಯಾಯ ರಾಗಿ ತರ್ಕ, ವ್ಯಾಕರಣ, ನ್ಯಾಯ, ಅರ್ಧ ಶಾ , ಧರ್ಮ ಶಾ ಸ್ವಾದಿಗಳ ಅಧ್ಯಯನವನ್ನು ತಮ್ಮ ಹಾಗೂ ಅರಸು ಮಕ್ಕಳಿಗೆ ಮಾಡಿ ಸುತ್ತಿದ್ದರು. ಗುರುಗಳ ಬಳಿ ಕಲಿಯಲಿದ್ದ ಅರಸು ಮನೆತನದ ಬಾಲಕ ರನ್ನು ನೋಡಿದರೆ ಪ೦ಜರದಲ್ಲಿ ಜಿಗಿದಾಡುವ ಸಿಂಹದ ಮರಿಗಳನ್ನು ಕ೦ಡ೦ತೆ ಭಾಸವಾಗುತ್ತಿತ್ತು. ಅರಸು ಮಕ್ಕಳಿಗೆ ಶರೀರವ್ಯಾಯಾಮ, ಯುದ್ಧವಿದ್ಯೆ, ಕುದುರೆ ಸವಾರಿ ಮೊದಲಾದವುಗಳನ್ನು ಕಲಿಸಲಿಕ್ಕೂ ಇಲ್ಲಿಯೇ ಏರ್ಪಾಟದ್ದಿತು. ಅರಸು ಮಕ್ಕಳ ಅಧ್ಯಯನಾ ದಿಗಳ ಸಮ ಚಾರವನ್ನು ತಿಳಿದು ಕೊಳ್ಳು ವದಕ್ಕೆಂದು ಮಹಾರಾಜನು ರಾಣಿಯರ ಸಮೇತನಾಗಿ ಆಗಾಗ್ಗೆ ಬಂದು ಕುಶಲವನ್ನು ಕೇಳಿಕೊಂಡು ಹೋಗು ತ್ತಿದ್ದನು. ಇಲ್ಲಿಯೇ ಚಿತ್ರಕಲೆ, ರತ್ನ ಪರೀಕ್ಷೆಯ ಕಲೆ, ಸಂಗೀತ,