ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಎEL ಭಾರತೀಯರ ಇತಿಹಾಸವು. ಜನರ ರಾಜಕೀಯ ಕಲ್ಪನೆಗಳು - ಹಿಂದೆ ಭಾರತದ ಕಾಲೀನವಾದ ರಾಜ್ಯ ವ್ಯವಸ್ಥೆಯನ್ನು ಕುರಿತು ಬರೆಯುವಾಗ ರಾಜ ಕಾರ್ಯದೊಳಗೆ ಭಾರತೀಯರ ವಿಚಾರಗಳು ಎಷ್ಟು ಮು೦ದರಿ ದಿದ್ದ ವೆಂಬುದನ್ನು ಹೇಳಿದ್ದೇವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಆ ಕಾಲದ ರಾಜ್ಯವೆಂದರೆ ರಾಷ್ಟ್ರ, ರಾಜ್ಯ ಹಾಗೂ ರಾಜಿ ಅವು ಮೂರೂ ಒ೦ದೇ ಸರ ದೊಳಗಿನ ದೊಡ್ಡ ಮಣಿಗಳು. ಜನರಿ೦ದ ನಾಡು, ನಾಡಿ ನಿಂದ ಆ ನಾಡಿನ ದೊರೆ. ಹೀಗಿರುವದರಿಂದ ಯಾವ ನಾಡಿನಲ್ಲಿ ಯಾವ ಬಗೆಯ ಜನರು ವಾಸಿಸುತ್ತಿದ್ದರೆ, ಅವರಿಗೆ ಆ ನಾಡಿನ ಹೆಸರಿನಿಂದ ಕರೆಯುತ್ತಿದ್ದರು. ಮತ್ತು ಯಾವ ನಾಡಿನವರನ್ನು ರಾಜನು ಆಳುತ್ತಿರು ವನೋ, ಅದೇ ನಾಡಿನವರ ಹೆಸರನ್ನು ರಾಜನಿಗೆ ಕೊಡುತ್ತಿದ್ದರು. ಮು೦ದೆ ಮು೦ದೆ ಧರ್ಮಶಾಸ್ತ್ರಕ್ಕನುಗುಣವಾಗಿ ಅಳುವಂಧ ಕ್ಷತ್ರಿಯ ರಾಜರ ಆಳಿಕೆಯು ಬಲಗೆ 5 ದಿ ಅನಾರ್ಯರ ಅಳಿಕೆಯೇ ಪ್ರಬಲವಾ ದ್ದರಿಂದ ಧರ್ಮಕ್ಕೂ ರಾಜ್ಯಕ್ಕೂ ರಾಜನಿಗೂ ಇರುವ ಜೀವಾಳ ಸ೦ಬ೦ಧವು ತಪ್ಪಿ ಹೋಗಿ, ಕಡಿವಾ ಣಿಲ್ಲದ ಕುದುರೆಯ೦ತೆ ಅರಸು ಗಳ ಸ್ಥಿತಿಯಾಯಿ ತು; ಇದರಿಂದ ಜನಾ೦ಗದ ಆಳಿಕೆಯಲ್ಲಿ ಜನರ ಕೈ ಸ೦ಪೂ ರ್ಣವಾಗಿ ಇಲ್ಲದಂತಾಗಿ ಕ್ರಮೇಣ, ನಾಗರಿಕತೆಯ ಕಲ್ಪನೆಗಳೂ ಹಕ್ಕುಗಳೂ ಮರೆತು ಹೋದವು. ಇದು ವರೆಗೆ ಜನಾ೦ಗದ ಆಳಾಗಿ, ಜನರ ಕ್ಷೇಮ ನೆಮ್ಮದಿಗಳನ್ನು ಒದಗಿಸಲಿಕ್ಕಿದ್ದ ಅರಸನು ಈ ಗೊಬ್ಬ ಪುಂಡ ಬಲು ಮೆಗಾರನಾದನು. ರಾಜ್ಯ ಪ್ರಜೆಗಳೆಂದರೆ ಈ ಪುಂಡನು ತನ್ನ ಸುಖಕ್ಕಾಗಿ ದೂರಲಿಕ್ಕೆ ಕೊಂಡಿರುವ ಆಸ್ತಿ, ಒಬ್ಬರೂ ರಾಜನ ಉಗುಳು ದಾಟಲಿಕ್ಕಾಗದು. ಇಂಥ ದುರವಸ್ಥೆಯಲ್ಲಿ ಜನಮ ತವನ್ನು ಲೆಕ್ಕಿಸುವರಾರು ? ಜನಮತವನ್ನಾದರಿಸಿದ ರಾಜನು ರಾಜನಲ್ಲವೆಂದು ಸಾರಿ, ಅವನನ್ನು ಪಟ್ಟ ದಿ೦ದ ತಳ್ಳುವಷ್ಟು ನೈತಿಕ ಧೈರ್ಯವು ತತ್ಕಾ ಲೀನ ಹಿಂದೂ ಜನರಿಗೆ ನಾಲದ್ದರಿಂದ, ರಾಜ್ಯ ಪದ್ಧತಿಯ ಭಟ್ಟಿಯೇ ಕೆಟ್ಟು ಹೋಯಿತು. ಹಿಂದೂ ಜನರನ್ನು ಈ ಬಗೆಯಾಗಿ ದಾರಿಗೇಡು ಮಾಡಲಿಕ್ಕೆ ತತ್ಕಾಲಕ್ಕೆ ಅವರಲ್ಲಿ ಬಳಕೆಯಲ್ಲಿರುವ ರಾಜನೆಂದರೆ ದೇವರ ಅ೦ಶಾವತಾರ, ರಾಜ್ಯವು ಪೂರ್ವಜನ್ಮದಲ್ಲಿ ಮಾಡಿದ ತಪಸ್ಸಿನ