ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುಲಿಕೇಶಿಯ ಕೊನೆಗಾಲ.

೨೯೭

ಅವುಗಳಿಂದ ಸ್ತ್ರೀಯರಿಗೆ ತತ್ಕಾಲದಲ್ಲಿ ರಾಜ್ಯದಾಡಳಿತೆಯಲ್ಲಿ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯವಿತ್ತೆ೦ಬುದು ತೋರುತ್ತದೆ. ಅಜ೦ತೆಯ ಕೊನೆಯ ಗುಹಾಲಯದೊಳಗೆ ಪುಲಿಕೇಶಿಯು ಇರಾಣದ ಅರಸನ ನಡೆಯಿ೦ದ ಬಂದ ರಾಯಭಾರಿಗೆ ಭೆಟ್ಟಿಯಾಗುತ್ತಿರುವದೊಂದು ಚಿತ್ರವಿರುವದು. ಅದರಿಂದ ಇರಾಣ ಅರಸನ ಸ೦ಗಡ ಆತನ ಸ೦ಬ೦ಧವಿತ್ತೆಂದೂ, ಅವನ ಕಾಲಕ್ಕೆ ಈ ದೇವಾಲಯದ ಚಿತ್ರಕಾರ್ಯವು ಪೂರೈಸಲಾಯಿತೆಂದೂ ತಿಳಿಯುತ್ತದೆ. ಈತನ ಆಳಿಕೆಯ ದರ್ಪವನ್ನು ಬಣ್ಣಿಸುವ ಬಗ್ಗೆ ಹ್ಯುಯೆನತ್ಗ೦ಗನು "ಈತನ ಬಾಯಿಂದ ಮಾತು ಹೊರಡುವದೊ೦ದೇ ತಡ; ಪ್ರಜೆಗಳು ಅದನ್ನು ಮಾಡಿ ಬಿಡುವರು” ಎಂದಿರುವದನ್ನು ಕುರಿತು ಯೋಚಿಸಿದರೆ, ಪ್ರಜೆಗಳಿಗೆ ಈತನ ಆಳ್ವಿಕೆಯು ಎಷ್ಟು ಇಷ್ಟವಿತ್ತೆಂಬುದು ಸಿದ್ದವಾಗುತ್ತದೆ.

ಪುಲಿಕೇಶಿಯ ಕೊನೆಗಾಲ:- ಈ ಮೇರೆಗೆ ಮೀರಿದ ರಾಜಠೀವಿಯ ಅಟ್ಟಹಾಸದಿಂದಲೂ, ವೈಭವದಿಂದಲೂ, ಪ್ರಜೆಗಳಿಗೆ ತಂದೆಯಾಗಿಯೂ, ಪರರಾಯರಿಗೆ ಭಯ೦ಕರನಾದ ಹಗೆಯಾಗಿಯೂ ಇನ್ನಿದಿರಿಲ್ಲವೆ೦ಬುವ೦ತೆ ಪುಲಿಕೇಶಿಯು ರಾಜ್ಯವಾಳುತ್ತಿರಲು, ದುರ್ದೈವದಿ೦ದ ಕಾಲವಿದೀಗ ತಿರುಗಿತು. ಬಲ ತಪ್ಪಿದಾಗ ನೆಲವೆದ್ದು ಬಡಿಯಿತೆಂಬ ನಾಣ್ಣುಡಿಯಂತೆ, ಹುಟ್ಟು ಹಗೆಯಾದ ನರಸಿಂಹವರ್ಮನೆಂಬ ಮಾಂಡಲೀಕನು ಚಾಲುಕ್ಯರನ್ನಣಿಗಿಸಬೇಕೆಂಬ ಒಳ ಹವಣಿಕೆಯಿಂದ ಮೆಲ್ಲನೆ ಗರಿಗಟ್ಟಿಕೊ೦ಡು, ಚೋರ ಚೋಳ ಪಾ೦ಡ್ಯರ ಬೆಂಬಲದಿಂದ ಮೇರೆದಪ್ಪಿದದ೦ಡಿನೊಂದಿಗೆ ಕರ್ನಾಟಕಸಾಮ್ರಾಜ್ಯದೊಳಗೆ ಹೊಕ್ಕು ಪುಲಿಕೇಶಿಯೊಡನೆ ಕಾಳಗಗೊಟ್ಟು ಹೋರಾಡಿದನು. ವೀರರ ಯುದ್ಧವೆಂದರೆ ಕೇಳುವದೇನು? ಅದೊಂದು ದೇವತೆಗಳ ಕಣ್ ಸೊಬಗು. ಇಬ್ಬರೂ ಮೈಯು ಳಸಿಕೊಳ್ಳದೆ ತಮ್ಮ ಶಕ್ತಿ ಮೀರಿ ಸಾಹಸಬಟ್ಟು ಕಾದಿದರು. ಆದರೆ ಜಯಲಕ್ಷ್ಮಿಯು ಯಾರ ಮನೆ ಅಳು? ಈಡಿಲ್ಲದ ಹೋರಾಟದೊಳಗೆ ಪುಲಿಕೇಶಿಯು ಸೋತು ಪಲ್ಲವರಾಜನಾದ ನರಸಿಂಹವರ್ಮನಿಗೆ ಜಯಲಕ್ಷ್ಮಿಯು ಮಾಲೆ ಹಾಕಿದಳು. ಪಲ್ಲವರು ಚಾಲುಕ್ಯರ ಅಭಿಮಾನಪುರುಷನಾದ ಪುಲಿಕೇಶಿವಲ್ಲಭನನ್ನು ಸೋಲಿಸಿ