ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೨

ಭಾರತೀಯರ ಇತಿಹಾಸವು.

ಯವು. ಮುಂದೆಬರುವ ಕನ್ನಡಿಗರ ವೈಭವಗಾಲಕ್ಕೆ ಇದೀಗ ಮು೦ಜಾವು. ಈ ಮುಂಜಾವಿನ ತ೦ಗಾಳಿಯ ಸೊ೦ಪನ್ನೂ ಸೊಬಗನ್ನೂ ಕೆಲಮಟ್ಟಿಗೆ ಅನುಭವಿಸಿದ್ದಾಯಿತು. ಇನ್ನು ಇಲ್ಲಿಯೇ ಕಾಲೂರಿ ನಿಲ್ಲದೆ ಮುಂದೆ ಸಾಗೋಣ.

ದಾಕ್ಷಿಣಾತ್ಯರ ಏಳಿಗೆ:- ಒಟ್ಟಿನ ಮೇಲಿಂದ ನಿರೀಕ್ಷಿಸಲಾಗಿ ಈ ಕಾಲವು ದಾಕ್ಷಿಣಾತ್ಯರಿಗೆ ಶುಭ ಕಾಲವು. ಕನ್ನಡನಾಡಿನಲ್ಲಿ ಹೇಗೊ ಹಾಗೆ ದಕ್ಷಿಣ ದೊಳಗಿನ ತಮಿಳು ನಾಡಿನಲ್ಲಿಯ ಪಲ್ಲವ ಚೋಳ ರಂಧ ವೀರಾಧಿವೀರರು ಆಳಿದ್ದರಿಂದ ಈ ಕಾಲದೊಳಗೆ ದಕ್ಷಿಣ ದೇಶವು ಎಲ್ಲ ಬಗೆ ಬೆಡಗುಗಳಿ೦ದ ಬೆಳಗುತ್ತಿದ್ದಿ ತು, ರಾಜ್ಯದಾಡಳಿತೆ ಯಲ್ಲಿ ನಾ ಡಿರಿ; ಧರ್ಮದೊಳಗೆ ಹೊಕ್ಕು ನಿರೀಕ್ಷಿಸಿ! ಶಿಲ್ಪ ಕಲೆ ಯ೦ಧ ಸೂಕ್ಷವಾದ ಕಲೆಯಲ್ಲಿ ಕಣ್ಣಿಟ್ಟು ನೋಡಿರಿ! ಸತ್ವವನ್ನು ಕಾಯ್ದು ಕೊಂಡು ಅದನ್ನೇ ಬೆಳೆಯಿಸಬೇಕೆಂಬು ದೊಂದು ಕುಗ್ಗದ ಮುಗ್ಗದ ಬಲವಾದ ನಿಡು ಕು ಒಡೆದು ಕಾಣುತ್ತಿದೆ. ಈ ಮಿಡುಕು ಪಲ್ಲವರ ಕಾಲದಲ್ಲಿ ಕಾರ್ಯ ರೂಪದಿಂದ ಹೊರನುಗ್ಗಿದ್ದರಿ೦ದ ನರಸಿಂಹ ವರ್ಮನು ಅಳ್ವಿಕೆಯಲ್ಲಿ ಪಲ್ಲವರ ಕ್ಷಾತ್ರತೇಜವ ಮಿ೦ಚಿ ತು. ಕಂಚಿ ಯಲ್ಲಿ ಈ ಹೊತ್ತು ಕ೦ಡು ಮಿಂಚಾಗಿ ಹೊಳೆಯುವ ಅದ್ಭುತವಾದ ಗುಡಿ ಗೋಪುರಗಳೆಲ್ಲವೂ ಇದೇ ಕಾಲದಲ್ಲಿ ಮಿಂಚಿದವು. ದಕ್ಷಿಣದೇಶ ವೆಂಬ ದ್ರಾವಿಡಸಂಸ್ಕೃತಿಯ ಗುಡಿಯೊಳಗೆ ವೈದಿಕ ಮತಾವಲಂಬಿ ಯಾದ ಶೈವ, ವೈಷ್ಣವ ಸ೦ಧಗಳ ಚಿರಪ್ರತಿಷ್ಟಾಪನೆಯಾಯಿ ತು. ಸ್ವಾಭಾವಿಕವಾಗಿಯೇ ಭಾವನೆಯ ಭಕುತರಾದ ತಮಿಳರಲ್ಲಿ ಭಕ್ತಿರಸ ದಿ೦ದು ಕುವ ಹಮ್ಮಿರರು ಹುಟ್ಟಿದ್ದರಿಂದ ಎಲ್ಲೆಲ್ಲಿಯ ಭಕ್ತಿಯ ಸುಗ್ಗಿ ಕಾಲಕ್ಕೆ ನೊರೆ ಬಂದು ಭಕ್ತಿರಸದ ಸೊನೆಯಿಂದ ದಕ್ಷಿಣನಾ ಡೆಲ್ಲ ತುಂಬಿ ಹರಿಯಿತು. ಇದರ ಪ್ರವಾಹ ಬಲಕ್ಕೆ ಸಿಕ್ಕು ಅಲ್ಲಲ್ಲಿ ಉಳಿದು ಕೊ೦ಡಿರುವ ಬೌದ್ಧ ಮತವೆಲ್ಲವು ಹೇಳ ಹೆಸರಿಲ್ಲದಂತಾಯಿತು. ಕನ್ನಡಿ ಗರಂತೆ ಸೋದರ ಜನಾ೦ಗದವರಾದ ತಮಿಳ ತೆಲಗರಲ್ಲಿಯೂ ಈ ಸ೦ಧ ರ್ಭಕ್ಕೆ ನವಚೈತನ್ಯದ ಗಾಳಿಯು ಸುಳಿದು ಅವರನ್ನೆಲ್ಲ ರಾಷ್ಟ್ರೀಯ ಕಾರ್ಯಕ್ಕೆ ಕಂಕಣ ಬದ್ಧರಾಗಲು ಪ್ರೇರಿಸುವ ಹೃದಯಂಗಮವಾದ