ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨ ನೇ ಪ್ರಕರಣ.

ಮಾನವನ ಜನ್ಮಭೂಮಿ ಯಾವುದು?


(ಕ್ರಿ. ಶ. ಪೂ. ೧೦,೦೦೦ ವರ್ಷಗಳಾಚೆಯ ಸ್ಥಿತಿ. )

ಸೃಷ್ಟಿಯ ಆದಿಯಲ್ಲಿ ಮನುಷ್ಯನು ಮೊದಲು ಯಾವ ಭೂಮಿಯಲ್ಲಿ ಹುಟ್ಟಿದನೆಂಬುದನ್ನು ಹೇಳುವದು ಇನ್ನೂವರೆಗೆ ಯಾರಿಗೂ ಸಾಧ್ಯವಾಗಿಲ್ಲ; ಕೆಲವು ಬ್ರಮ್ಹಾವರ್ತವೇ ಮಾನವನ ಆದಿಯಾದ ಹುಟ್ಟುಭೂಮಿಯೆಂದೂ, ಕೆಲವರು ದಂಡಕಾರಣ್ಯವೇ ಜನನ ಭೂಮಿಯೆ೦ದೂ ಆಯಾ ಶಾಸ್ತ್ರಜ್ಞರು ತಮ್ಮ ತಮ್ಮ ಅಭ್ಯಾಸ ಹಾಗೂ ಅನುಭವಗಳಿಗೆ ಅನುಗುಣವಾಗಿ ಚರ್ಚಿಸುತ್ತಿರುವರು; ಆದರೂ ಇದೂವರೆಗೆ ಈ ಬಗ್ಗೆ ನಿಶ್ಚಿತವಾದ ಯಾವುದೊಂದು ಕೊನೆಯ ಸಿದ್ದಾಂತವಾಗಿರುವದಿಲ್ಲ; ಇತ್ತೀಚೆಗೆ ಪೃಥ್ವಿಯ ಬೇರೆ ಬೇರೆ ಭಾಗಗಳಲ್ಲಿ ಇಟ್ಟಂಗಿಯ ಮೇಲೆ ಬರೆದ ಅಕ್ಷರಗಳೂ ಬೇರೆ ಅನೇಕ ಬಗೆಯ ಪುರಾಣ ಕಾಲದ ಪ್ರದಾರ್ಧಗಳೂ ದೊರೆಯ ಹತ್ತಿದಂದಿನಿಂದ ಒಂದು ಬಗೆಬ೦ದ ಹೊಸ ಚರ್ಚೆಗೆ ಪ್ರಾರಂಭವಾಗಿದೆ. ಇರಲಿ, ಋಗ್ವೇದ ಮೊದಲಾದ ಆರ್ಯರ ಅತ್ಯಂತ ಪುರಾಣ ಕಾಲದ ಗ್ರಂಥಗಳನ್ನು ನೋಡಿದರೆ ಎಂಟು ಹತ್ತು ಸಾವಿರ ವರ್ಷಗಳಾಚೆ, ಸಪ್ತಸಿಂಧುವಿನ ದೇಶದಲ್ಲಿ ಅಂದರೆ ಈಗಣ ಪ೦ಜಾಬ ಪ್ರಾಂತದೊಳಗೆ ಎಲ್ಲಕ್ಕೂ ಮೊದಲು ಮನುಷ್ಯನು ಕಾಣಿಸಿಕೊಂಡನೆಂದು ಇತಿಹಾಸಜ್ಞರು ನಿರ್ಣಯಿಸಿದ್ದಾರೆ. ಆರ್ಯರ ವಾಸಸ್ಥಾನದ ದೆಸೆಯಿಂದ ಈಗ ಎರಡು ಮೂರು ಅಭಿಪ್ರಾಯಗಳು ಪ್ರಚಲಿತವಿರುತ್ತವೆ. ಮಧ್ಯ ಏಸಿಯವೇ ಆರ್ಯರ ಮೂಲಾಸ್ಥಾನವೆಂದು ಕೆಲವರೂ, ಉತ್ತರಧ್ರುವನೇ ಅರ್ಯರ ತೌರಮನೆಯಂದು ಲೋಕಮಾನ್ಯ ತಿಲಕರವರೂ, ತಮ್ಮ ತಮ್ಮ