ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇಹಾಸವು. ಅನಂದಾನುಭವದಿಂದಲೂ ಹಾಡಿದ ವೇದಗಳು ಈಶ್ವರನ ಶ್ವಾಸೊ ಜ್ಞಾಸ ಮಾತ್ರದಿಂದ ಆವಿರ್ಭವಿಸಿದವೆಂರ, ಅವು ಸೃಷ್ಟಿಯ ಮಲ ಕಾರಣಗಳೆಂದೂ ನಿತ್ಯ ಮತ್ತು ಸನಾತನವೆಂದೂ, ವೇದಗಳ ಋಕ್ಕು ಗಳ ಪ್ರತಿಯೊಂದು ಅಕ್ಷರಗಳಲ್ಲಿ ದೇವತೆಗಳು ನೆಲಸಿರುವರೆಂದೂ, ವೇದ ಗಳಲ್ಲಿಯೇ ಹೇಳಿದೆ. ವೈದಿಕ ವಾ ಬ್ಯಯ ವನ್ನು ಮೊದಲ್ಗೊಂಡು ಉಪ ನಿಷತ್ತಿನವರೆಗೆ ಎಲ್ಲ ದೈವಿಕ ಗ್ರ೦ಥಗಳೊಳಗಿನ ಪ್ರತಿಯೊಂದು ಶಬ್ದದ ಮಾತ್ರೆಯು ಸಹ ಈಶ್ವರನ ಉಸಿರಾಡಿಸುವಿಕೆಯಿಂದ ಉತ್ಪನ್ನವಾದ್ದ ರಿಂದ, ವೇದಗಳು ' ಅಪೌರುಷೇಯ' ವಾದವುಗಳು; ಮತ್ತು ಹಾ ಗೆ೦ ತಲೇ ನಮ್ಮ ಹಿರಿಯರು ವೇದೋಪನಿಷತ್ತುಗಳನ್ನು ಸಾವಿರಾರು ವರ್ಷ ಗಳಿ೦ದ ಕ೦ಠದಲ್ಲಿಟ್ಟು ಕೊಂಡು ತಮ್ಮ ತಮ್ಮ ಶಿಷ್ಯರಿಗೂ ಮಕ್ಕಳಿಗೂ ಗಟ್ಟಿ ಮಾಡಿಸಿ ಕಲಿಸುತ್ತ, ಪ್ರಾಣಕ್ಕಿಂತ ಪ್ರಿಯವೆಂದು ಕಾಯ್ದು ಕೊ೦ ಡರು. ಈ ಹೊತ್ತಿಗೆ ಆ ವೇದೋಪನಿಷತ್ತುಗಳೆಂದರೆ, ನಮ್ಮ ಸಂಸ್ಕೃ ತಿಯ, ನಮ್ಮ ವಾ ಯದ, ನಮ್ಮ ಧರ್ಮದ, ನಮ್ಮ ಜೀವದ ಅಭೇದ್ಯ ಆಧಾರ ಸ್ತಂಭಗಳಾಗಿ ವಿರಾಜಿಸುತ್ತಿವೆ. ಜಗತ್ತಿನ ಇತಿಹಾಸದೊಳಗೆ ವೇದಗಳಷ್ಟು ಪ್ರಾಚೀನತಮವಾದ ಬೇರೆ ಗ್ರ೦ಧಗಳಾವೂ ಇರದ್ದರಿ೦ದ ಅವುಗಳನ್ನು ನಮ್ಮ ಪೂರ್ವಜರು ಪುಸ್ತಕಗಳ ಸಹಾಯವಿಲ್ಲದೆ ಬರಿಯ ಬಾಯಲ್ಲಿಟ್ಟು ಕೊಂಡು ಕಾಪಾಡಿದೆಂದು ಅತ್ಯಂತ ಸೋಜಿಗವಾದ ಸಂಗತಿಯಾಗಿದೆ. ಈ ಮೇರೆಗೆ, ತಮ್ಮ ಶಕ್ತಿ ಸರ್ವಸ್ವವನ್ನೆಲ್ಲ ಸೂರೆ ಮಾಡಿ, ವೈದಿಕ ಕಾಲೀನವಾದ ಜ್ಞಾನಕಾಂಡದ ಭಾ೦ಡಾರವನ್ನು ಆರ್ಯರು ಇದ್ದಕ್ಕಿದ್ದ ಹಾಗೆ ಕಾಯ್ದಿಟ್ಟು ದಕ್ಕಾಗಿ ಅವರ ಬಂಟತನ ವನ್ನೆಷ್ಟು ಹೊಗಳಿದರೂ ಸಾಲದು. ವೇದಗಳಲ್ಲಿ ಖ ಗೈದವೇ ಅತ್ಯಂತ ಬುನಾದಿಯಾದಗ್ರ೦ಥವು.ನಾಮ ವೇದವಾದರೂ ಅಷ್ಟೆ ಹಳೆಯದು. ಯಜುರ್ವೇದವು ಕೊ೦ಚ ಈಚೆ ಯದು, ಅಥರ್ವವೇದವು ಮಾತ್ರ ಯಜುರ್ವೇದಕ್ಕಿಂತ ಹೆಚ್ಚು ಕಡಿಮೆ ಅದೇ ಕಾಲದ್ದಿರಬಹುದೆಂದು ಊಹಿಸಲಿಕ್ಕೇನೂ ಅಡ್ಡಿಯಿಲ್ಲ. ವೈದಿಕ ನಾ ಬೈಯ ವನ್ನು ಸ೦ಹಿತಾ, ಬ್ರಾಹ್ಮಣ, ಉಪನಿಷತ್, ಅಥವಾ ಅರಣ್ಯಕ ಗಳೆಂದು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಆದಿಯಲ್ಲಿ ವೇದವು