ಪುಟ:ಭಾರತ ದರ್ಶನ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೮೩

ಜನ ತಮ್ಮ ಪೂರ್ವೇತಿಹಾಸಕ್ಕೆ ಈ ರೀತಿ ಬಣ್ಣ ಕೊಟ್ಟು ; ವಿಕೃತಿಮಾಡಿ ಪ್ರಯೋಜನ ಪಡೆದಿ ದ್ದಾರೆ. ಮುಖ್ಯವಾಗಿ ಆಂಗ್ಲರೇ ಬರೆದ ನಾವು ಓದುವ ಭಾರತೀಯ ಚರಿತ್ರೆಗಳಲ್ಲೆಲ್ಲ ಬ್ರಿಟಿಷರ ಆಳ್ವಿಕೆಯಿಂದ ಆಗಿರುವ ಪ್ರಯೋಜನ, ಬ್ರಿಟಿಷರ ಆಳ್ವಿಕೆಯ ಅವಶ್ಯಕತೆ, ಅದರ ಸ್ತೋತ್ರ ಮತ್ತು ಅದರ ಹಿಂದಿನ ಸಾವಿರಾರು ವರ್ಷಗಳ ಚರಿತ್ರೆಯ ಮುಚ್ಚು ಮರೆಯಿಲ್ಲದ ಅವಹೇಳನ. ನಿಜವಾಗಿ ಹೇಳುವುದಾದರೆ ಅವರಿಗೆ ಭಾರತೀಯ ಇತಿಹಾಸ ಆರಂಭವಾಗುವುದು ಬ್ರಿಟಿಷರ ಕಾಲದಿಂದ. ಅದಕ್ಕೆ ಹಿಂದೆ ನಡೆದುದೆಲ್ಲ ಈ ದೈವೇಚ್ಛೆಗೆ ಪೂರ್ವ ಸಿದ್ಧತೆ ! ಬ್ರಿಟಿಷರ ರಾಜ್ಯಭಾರ ಮತ್ತು ಗುಣ ವರ್ಣನೆಗೆ ಬ್ರಿಟಿಷರ ಕಾಲವನ್ನು ಸಹ ವಿಕೃತಿಗೊಳಿಸಲಾಗಿದೆ. ಕ್ರಮೇಣ ನಿಜವಾದ ದೃಷ್ಟಿ ಮೂಡುತ್ತಿದೆ. ಯಾವುದೋ ಕೆಲವು ಉದ್ದೇಶ ಸಾಧನೆಗಾಗಿ, ಅಥವ ವೈಯಕ್ತಿಕ ಊಹೆ ಮತ್ತು ವಕ್ರನೀತಿಯಿಂದ ಚರಿತ್ರೆಯನ್ನು ವಿಕೃತಿಗೊಳಿಸಿದ ನಿದರ್ಶನಗಳಿಗೆ ಪೂರ್ವದ ಇತಿಹಾಸಕ್ಕೆ ಹೋಗು ವದು ಅನವಶ್ಯಕ. ಇಂದಿನ ಚರಿತ್ರೆಯಲ್ಲೇ ತುಂಬಿವೆ. ನಾವೇ ಕಂಡು ಸ್ವತಃ ಅನುಭವಿಸಿದ ಘಟನೆ ಗಳನ್ನೇ ಆ ರೀತಿ ವಿಕೃತಿಗೊಳಿಸಲು ಸಾಧ್ಯವಾದರೆ ಪುರಾತನ ಚರಿತ್ರೆಯ ಪಾಡೇನು ?

ಆದಾಗ್ಯೂ ಯಾವ ವಿಮರ್ಶೆಯ ಗೋಜಿಗೂ ಹೋಗದೆ, ಸ್ವಲ್ಪವೂ ಹಿಂದುಮುಂದೆ ನೋಡದೆ ಶಿಷ್ಟಾಚಾರವೇ ಚರಿತ್ರೆ ಎಂದು ಭಾರತೀಯರು ಬಹುಭಾಗ ಒಪ್ಪುತ್ತಾರೆ. ಈ ರೀತಿ ಆಳವಾಗಿ ಯೋಚನೆ ಮಾಡದೆ, ಸುಲಭವಾಗಿ ನಿರ್ಧಾರಕ್ಕೆ ಬರುವ ಪದ್ದತಿಯನ್ನು ಬಿಟ್ಟು ಬಿಡಬೇಕು. ಪುರಾಣ ಮತ್ತು ಕಾಲ್ಪನಿಕ ಕತೆಗಳ ಕಾಲವನ್ನು , ದೇವರುಗಳು ಮತ್ತು ದೇವತೆಗಳನ್ನು ಎಲ್ಲಿಯೋ ಬಿಟ್ಟು ಬಹುದೂರ ಬಂದಿದ್ದೇನೆ. ಆ ದಿನಗಳಲ್ಲಿ ತುಂಬುಜೀವನವಿತ್ತು, ಜೀವನಕ್ಕೂ ಪ್ರಕೃತಿಗೂ ಒಂದು ನಿಕಟ ಬಾಂಧವ್ಯವಿತ್ತು, ಮಾನವನ ಮನಸ್ಸು ಆಶ್ಚರ್ಯ ಮತ್ತು ಆನಂದದಿಂದ ವಿಶ್ವ ರಹಸ್ಯ ವನ್ನು ದಿಟ್ಟಿಸುತ್ತಿತ್ತು ; ಸ್ವರ್ಗ ಮರ್ತಗಳೆರಡೂ ಸವಿಾಪವಿದ್ದಂತೆ ಕಾಣುತ್ತಿದ್ದವು ; ದೇವರುಗಳು, ದೇವತೆಗಳು, ಒಲಿಂಪಸ್ ನಿಂದ ದೇವರುಗಳು ಇಳಿದು ಬಂದು ಸ್ತ್ರೀ ಪುರುಷರೊಡನೆ ಆಟವಾಡಿ, ಕೆಲವು ವೇಳೆ ಶಿಕ್ಷಿಸುತ್ತಿದ್ದಂತೆ, ಇಲ್ಲಿಯೂ ಸಹ ಕೈಲಾಸ ಅಥವ ತಮ್ಮ ಇತರ ಹಿಮಾಲಯ ಪರ್ವತದ ಆವಾಸಗಳಿಂದ ಇಳಿದು ಬರುತ್ತಿದ್ದರು. ಈ ಒಂದು ತು೦ಬುಜೀವನದಿಂದ ಭಾವನಾಸಂಪತ್ತಿನಿಂದ ಮಹಾಶೂರರೂ, ಸುಂದರ ಪುರುಷರೂ ಆದ ದೇವಾನುದೇವತೆಗಳ ಪುರಾಣಗಳು, ಉಪಾಖ್ಯಾನಗಳು ಬೆಳೆದವು. ಅದಕ್ಕೆ ಕಾರಣ ಪುರಾತನ ಭಾರತೀಯರು ಪುರಾತನ ಗ್ರೀಕರಂತೆ ಸೌಂದಯ್ಯ ಮತ್ತು ಜೀವನೋಪಾಸಕರು. ಒಲಿಂಪಸ್ ದೇವತೆಗಳ ಸೌಂದಯ್ಯ ವೈಭವವನ್ನು ಪ್ರೊಫೆಸರ್ ಗಿಲ್ಟರ್ ಮಿ ವರ್ಣಿಸಿದ್ದಾರೆ, ಆ ವರ್ಣನೆ ಪುರಾತನ ಭಾರತೀಯರ ಮನೋಕಲ್ಪನಾ ಸೌಂದಯ್ಯಕ್ಕೂ ತುಂಬ ಚೆನ್ನಾಗಿ ಅನ್ವಯಿಸುತ್ತದೆ. “ಅವು ಕಲಾವಿದನ ಕನಸುಗಳು, ಆದರ್ಶಗಳು, ರೂಪಕಗಳು ; ತಮ್ಮಿಂ ದಾಚೆ ಇರುವ ಯಾವುದೋ ಅಗೋಚರ ವಸ್ತುವಿನ ಸಂಕೇತಗಳು. ಅರ್ಧ ತಿರಸ್ಕೃತ ಸಂಪ್ರದಾಯದ ಅರಿಯದ ನಟನೆಯ ಮತ್ತು ಹಿರಿಯಾಸೆಯ ದೇವತೆಗಳು. ಅನೇಕ ಉಜ್ವಲ, ಆತ್ಮಶೋಧಕ ತರ್ಕ ಅನುಮಾನ ಗಳಿಗೆ ಎಟುಕದಿದ್ದರೂ ಸಂಶಯಾತ್ಮದಾರ್ಶನಿಕರು ಪ್ರಾರ್ಥಿಸಿ ಪೂಜಿಸಬಹುದಾದ ದೇವತೆ ಗಳು. ಯಾರಿಗೂ ಆ ದೇವತೆಗಳ ಅಸ್ತಿತ್ವದಲ್ಲಿ ನಂಬಿಕೆ ಇಲ್ಲ.” ಪ್ರೊಫೆಸರ್ ಮಿ ಹೇಳುವ ಮುಂದಿನ ಮಾತುಗಳೂ ಸಹ ಇನ್ನೂ ಚೆನ್ನಾಗಿ ಭಾರತಕ್ಕೆ ಅನ್ವಯಿಸುತ್ತವೆ. “ ಮಾನವ ಸೃಷ್ಟಿಯ ಅತ್ಯಂತ ಸುಂದರ ವಿಗ್ರಹ ದೇವರಲ್ಲ, ದೈವತ್ವ ಕಲ್ಪನೆಗೆ ಪೂರಕವಾದ ಒಂದು ಸಂಕೇತ. ಆದ್ದರಿಂದ ಕಾಲ್ಪನಿಕ ದೇವರು ವಾಸ್ತವವಲ್ಲ ; ಆದರೆ ವಾಸ್ತವಿಕತೆ ಅಥವ ಸತ್ಯದ ಕಲ್ಪನೆಗೆ ಒಂದು ಸಂಕೇತ ಮಾತ್ರ. ಈ ಮಧ್ಯೆ ಜ್ಞಾನ ವಿರೋಧವಾಗಿ ಯಾವ ಸಂದೇಶವನ್ನೂ ಸಾರಲಿಲ್ಲ. ತನ್ನ ಆತ್ಮ ಜ್ಯೋತಿಗೆ ವ್ಯತಿರಿಕ್ತ ವಾಗಿ ಪಾಪಕೃತ್ಯ ಮಾಡಲು ಮಾನವನಿಗೆ ಯಾವ ಅನುಜ್ಞೆಯನ್ನೂ ಕೊಡಲಿಲ್ಲ” ಎಂದಿದಾನೆ.

ಕ್ರಮೇಣ ವೇದಕಾಲದ ದೇವರುಗಳು ಮತ್ತು ದೇವತೆಗಳು ಕಣ್ಮರೆಯಾದರು. ಕಠಿಣವೂ, ಗೂಢವೂ ಆದ ತತ್ವಶೋಧನೆ ಬಲಗೊಂಡಿತು. ಆದರೆ ಜನಮನದಲ್ಲಿನ ಈ ದೇವತೆಗಳ ಚಿತ್ರವನ್ನು ಅಳಿಸಲಾಗಲಿಲ್ಲ. ಸುಖದುಃಖಗಳಲ್ಲಿ ಭಾಗಿಗಳೂ ಹಿತರಕ್ಷಕರೂ ಆಗಿ ಜನತೆಯ ಅಸ್ಪಷ್ಟ ಆತ್ಮಪ್ರೇರಿತ