ಪುಟ:ಭಾರತ ದರ್ಶನ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೮೪
ಭಾರತ ದರ್ಶನ

ಆದರ್ಶಗಳೂ, ಹೆಬ್ಬಯಕೆಗಳ ಸಂಕೇತಗಳೂ ಆಗಿ ಜನಮನದಲ್ಲಿ ಉಳಿದರು, ಈ ದೇವತೆಗಳ ಸುತ್ತ ಕವಿಗಳು ಭಾವಾವೇಶದ, ಕಲ್ಪನಾಸೌಂದಯ್ಯದ ಚಿತ್ತಭಿತ್ತಿಗಳನ್ನು ಕೆತ್ತಿದರು. ಎಫ್. ಡಬ್ಬು , ರ್ಬೇ ಭಾರತೀಯ ಪುರಾಣ ಕತೆಗಳ ತನ್ನ ಚಿಕ್ಕ ಹೊತ್ತಿಗೆಗಳಲ್ಲಿ ಈ ಸುಂದರ ಕತೆಗಳನ್ನು ಬಹು ಚೆನ್ನಾಗಿ ಉಪಯೋಗಿಸಿದ್ದಾನೆ. ಇವುಗಳಲ್ಲಿ ಈ ದಿ ಡಿಜಿಟ್ ಆಫ್ ದಿ ಮೂನ್ ” ಎಂಬ ಗ್ರಂಥದಲ್ಲಿ ಸ್ತ್ರೀಯ ಸೃಷ್ಟಿ ಕ್ರಮವನ್ನು ತಿಳಿಸಿದ್ದಾನೆ. “ ದೇವಶಿಲ್ಪಿಯಾದ : ತ್ವಷ್ಟ ಸ್ತ್ರೀಯನ್ನು ಸೃಷ್ಟಿಸಲು ಬರುವ ಹೊತ್ತಿಗೆ ಮನುಷ್ಯನನ್ನು ಸೃಷ್ಟಿ ಮಾಡುವುದರಲ್ಲಿ ತನ್ನ ಎಲ್ಲ ಶ್ರೇಷ್ಠ ಸಾಮಗ್ರಿಗಳನ್ನೂ ಮುಗಿಸಿದ್ದನಂತೆ. ದಿಕ್ಕು ತೋರದೆ ದೀರ್ಘಾಲೋಚನೆಮಾಡಿ ಚಂದ್ರನ ಗೋಳಾಕರ, ಲತೆಗಳ ಕೊಂಕು, ಕುಡಿಗಳ ಆಶ್ರಯ ವೃತ್ತಿ, ಗರಿಕೆಯ ಬಳುಕು, ಅಲಗಿನ ತೆಳವು, ಹೂಗಳ ಅರಳುವಿಕೆ, ಎಲೆಗಳ ಹಗುರ, ಆನೆಯ ಸೊ೦ಡಿ ಲಿನ ಬಾಚು, ಚಿಗರಿಯ ನೋಟ, ಜೇನಿನ ಸಾಲ್ಯೂ ಡು, ಎಳೆಬಿಸಿಲಿನ ಮಂದಹಾಸ, ಮೋಡಗಳ ಅಶ್ರುಧಾರೆ, ವಾಯುವಿನ ಚಂಚಲತೆ, ಮೊಲದ ಅ೦ಜುಬುರುಕುತನ, ನವಿಲಿನ ವೈಯಾರ, ಗಿಳಿ ಮೈಯ ಕೋಮಲತೆ, ಕಗ್ಗಲ್ಲಿನ ಕಾಠಿಣ್ಯ, ಮಧುವಿನ ಮಾಧುರ, ಹುಲಿಯ ರೋಷ, ಅಗ್ನಿಯ ಬೆಚ್ಚ ನೆಯ ಪ್ರಕಾಶ, ಹಿಮದ ಚಳಿ, ಸ್ವರ್ಣಚೂಡ ಪಕ್ಷಿಯ ಕಿಕಿಕಿ ಹರಟೆ, ಕೋಗಿಲೆಯ ಇಂಚರ, ಬಕನ ಬಿನ್ನಾಣ, ಚಕ್ರವಾಕನ ನಿಷ್ಠೆ ಇವೆಲ್ಲವನ್ನೂ ಸೇರಿಸಿ, ಸ್ತ್ರೀ ಸೃಷ್ಟಿ ಮಾಡಿ ಮನುಷ್ಯನಿಗೆ ದಾನಮಾಡಿ ದನಂತೆ.

೧೩. ಮಹಾಭಾರತ

ಪುರಾಣ ಗ್ರಂಥಗಳ ಕಾಲನಿರ್ಣಯವು ಬಹು ಕಷ್ಟ, ಆರ್ಯರು ಭಾರತಕ್ಕೆ ಬಂದು ನೆಲಸಿ ಬುಡಭದ್ರತೆ ಮಾಡಿಕೊಳ್ಳುತ್ತಿದ್ದ ಬಹುಹಿಂದಿನ ಕಾಲ, ಬರವಣಿಗೆಯಲ್ಲಿ ಅನೇಕ ಕವಿಗಳ ಕೈವಾಡವೂ ಕ್ರಮಕ್ರಮೇಣ ಪ್ರಕ್ರಿಪ್ತ ಭಾಗಗಳನ್ನು ಸೇರಿಸಿರುವುದೂ ಸ್ಪಷ್ಟ ತೋರುತ್ತದೆ. ರಾಮಾಯಣ ಮಹಾ ಕಾವ್ಯದಲ್ಲಿ ಒಂದೇ ವಿಧವಾದ ರಚನಾಶೈಲಿ ಇದೆ. ಮಹಾಭಾರತವು ಅನೇಕ ಪುರಾಣ ಕತೆಗಳ ಮಹಾ ಸಮುದ್ರ, ಈ ಎರಡು ಕಾವ್ಯಗಳೂ ಬುದ್ಧನ ಕಾಲಕ್ಕಿಂತಲೂ ಹಿಂದೆ ಹುಟ್ಟಿರಬೇಕು. ಅನಂತರ ಅನೇಕ ಭಾಗಗಳು ಸೇರಿರಬೇಕು.

ಫ್ರಾನ್ಸಿನ ಚರಿತ್ರಕಾರನಾದ ಮೈಕೇಲ್ ೧೮೬೪ ರಲ್ಲಿ ರಾಮಾಯಣದ ವಿಷಯವಾಗಿ ಬರೆಯುತ್ತ “ಮನಸ್ಸು ಮತ್ತು ಇಷ್ಟ ಎರಡಿದ್ದರೆ ಈ ಪಾತ್ರೆಯಿಂದ oಾರಿಗೆ ಬೇಕಾದರೂ ಮನದಣಿಯುವಂತೆ ಜೀವನದ ಸುಖವನ್ನು ಪಡೆಯಬಹುದು. ಯೌವನದ ಆನಂದವನ್ನು ಅನುಭವಿಸಬಹುದು. ಪಾಶ್ಚಿ ಮಾತ್ಯದಲ್ಲಿ ಎಲ್ಲವೂ ಸಂಕುಚಿತ, ಗ್ರೀಸ್ ಬಹು ಚಿಕ್ಕದು, ಉಸಿರು ಕಟ್ಟುತ್ತದೆ ; ಜೂಡಿಯ ಮರು ಭೂಮಿ, ಬಾಯಿ ಒಣಗುತ್ತದೆ. ಮಹಾಏಷ್ಯದ ಕಡೆಗೆ, ಪೌರ್ವಾತ್ಯದ ಗಾ೦ಭೀರದ ಕಡೆ ಸ್ವಲ್ಪ ನೋಡೋಣ. ಅಲ್ಲದೆ, ಹಿಂದೂ ಸಾಗರದಂತೆ ವಿಶಾಲವೂ, ಪವಿತ್ರ ತನವೂ, ದಿವಸ್ಪತಿಯಂತೆ ಪ್ರತಿಭಾ ಪೂರ್ಣವೂ ಆದ ಒಂದೂ ಒಡಕು ಶಬ್ದ ವಿಲ್ಲದ ದೈವಿಕ ಮಾಧುರ್ಯದ ಮಹಾಕಾವ್ಯ. ಅದರಲ್ಲಿ ಒಂದು ಗಂಭೀರ ಶಾಂತಿ ಇದೆ. ಯುದ್ಧದ ತುಮುಲವಿದ್ದರೂ ಅನಂತ ಸೌಂದಯ್ಯವಿದೆ. ವಿಶ್ವ ವ್ಯಾಪಕವಿರುವ ಅಪರಿಮಿತ ಬಾಂಧವ್ಯವಿದೆ, “ಆಳವೂ, ಮೇರೆ ಇಲ್ಲದದೂ ಆದ ಪ್ರೇಮ, ಕರುಣೆ ಮತ್ತು ದಯೆಯ ಸಾಗರವಿದೆ,” ಎಂದಿದಾನೆ.

ರಾಮಾಯಣ ಮಹಾಕಾವ್ಯ ಅತಿಮಹತ್ವದ್ದಾಗಿ, ಜನಪ್ರಿಯವಾಗಿದ್ದರೂ ನಿಜವಾಗಿಯೂ ಮಹಾ ಭಾರತವೇ ಪ್ರಪಂಚದ ಮಹಾಗ್ರಂಥಗಳಲ್ಲಿ ಒಂದು. ಅದೊಂದು ಬೃಹದಂಥ, ಸಂಪ್ರದಾಯಗಳ ಐತಿಹಾಸಿಕ ಕತೆಗಳ ಮತ್ತು ಪ್ರಾಚೀನ ಭಾರತದ ರಾಜಕೀಯ ಸಾಮಾಜಿಕ ಸಂಸ್ಥೆಗಳ ಸಂಪ್ರದಾಯ ಗಳ ಮಹಾಕೋಶ, ಕಳೆದ ಹತ್ತಾರು ವರ್ಷಗಳಿಂದ ಅನೇಕ ಭಾರತೀಯ ವಿದ್ವಾಂಸರು ಒಂದು ಅಧಿಕಾರಯುತ ಮುದ್ರಣವನ್ನು ಕೊಡಬೇಕೆಂದು, ದೊರೆತ ಎಲ್ಲ ಮೂಲಪ್ರತಿಗಳನ್ನಿಟ್ಟು ಕೊಂಡು ಪರಿಶೀಲನೆಮಾಡಿ, ಶೋಧಿಸುವ ಕಾಠ್ಯದಲ್ಲಿ ತೊಡಗಿದ್ದಾರೆ. ಕೆಲವು ಭಾಗಗಳೂ ಅಚ್ಚಾಗಿವೆ; ಆದರೆ