ಪುಟ:ಭಾರತ ದರ್ಶನ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ


ಈ ಪುಸ್ತಕವನ್ನು ಬರೆದದ್ದು ೧೯೪೪ ನೇ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಐದು ತಿಂಗಳಲ್ಲಿ ಅಹಮದ್ ನಗರದ ಕೋಟೆಯ ಸೆರೆಮನೆಯಲ್ಲಿ. ಸೆರೆಮನೆಯಲ್ಲಿನ ನನ್ನ ಕೆಲವು ಸಹಬಂದಿಗಳು ಕರಡು ಪ್ರತಿಯನ್ನು ಓದಿ ಅಮೂಲ್ಯ ಸಲಹೆಗಳನ್ನು ಕೊಟ್ಟಿದಾರೆ. ಸೆರೆಮನೆಯಲ್ಲಿ ಈ ಪುಸ್ತಕವನ್ನು ಪುನ ರಾವಲೋಕನ ಮಾಡಿದಾಗ ಆ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಹೊಸ ವಿಷಯಗಳನ್ನು ಸೇರಿಸಿದ್ದೇನೆ. ಇಲ್ಲಿ ಬರೆದಿರುವುದಕ್ಕೆಲ್ಲ ನಾನೇ ಹೊಣೆಗಾರ ; ಇತರರು ಯಾರೂ ಹೊಣೆಯಾಗಬೇಕಾ ಗಿಯೂ ಇಲ್ಲ, ಒಪ್ಪಬೇಕಾಗಿಯೂ ಇಲ್ಲ, ಆದರೆ ಆಗ ನಡೆಸಿದ ಅಸಂಖ್ಯಾತ ವಿಚಾರವಿನಿಮಯಗಳಿಗೆ ಮತ್ತು ಚರ್ಚೆಗಳಿಗೆ ಅಹಮದ್ ನಗರದ ನನ್ನ ಸಹಬಂದಿಗಳಿಗೆ ನಾನು ಅತ್ಯಂತ ಋಣಿಯಾಗಿದ್ದೇನೆ; ಏಕೆಂದರೆ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ವಿವಿಧ ರೂಪಗಳ ವಿಷಯದಲ್ಲಿದ್ದ ನನ್ನ ಮನೋ ಭಾವನೆ ತಿಳಿಯಾಯಿತು. ಸ್ವಲ್ಪ ದಿನಗಳಾದರೂ ಸೆರೆಮನೆಯು ವಾಸಕ್ಕೆ ಯೋಗ್ಯಸ್ಥಳವಲ್ಲ. ಅನೇಕ ವರ್ಷಗಳಾದರೆ ದೇವರೇ ಗತಿ, ಆದರೆ ಅಲ್ಲಿ ಮಹಾಮೇಧಾವಿಗಳೂ ಸುಸಂಸ್ಕೃತರೂ, ತಾತ್ಕಾಲಿಕ ಉದ್ವೇಗಗಳಿಂದ ಮನೋವಿಕಲರಾಗದ ವಿಶಾಲಹೃದಯರೂ ಆದ ಉನ್ನತ ವ್ಯಕ್ತಿಗಳ ಸಾಪ ಸಹವಾಸ ದೊರತುದು ನನ್ನ ದೊಂದು ಸೌಭಾಗ್ಯ,
ಅಹಮದ್ ನಗರದ ಕೋಟೆಯಲ್ಲಿ ನನ್ನ ಜೊತೆಗಿದ್ದ ಹನ್ನೊಂದು ಜನ ನನ್ನ ಸಹವಾಸಿಗಳು ಇಡೀ ಭಾರತದ ಒಂದು ಅಡ್ಡ ಕೊಯಿತದಂತೆ ಇದ್ದರು. ರಾಜಕೀಯ ಮಾತ್ರವಲ್ಲದೆ ಸನಾತನ ಮತ್ತು ಆಧುನಿಕ ಭಾರತೀಯ ಪಾಂಡಿತ್ಯ ಪ್ರೌಢಿಮೆಯನ್ನೂ ಇಂದಿನ ಭಾರತದ ವಿವಿಧ ಮುಖಗಳನ್ನೂ ಪ್ರತಿಬಿಂಬಿಸುತ್ತಿದ್ದರು. ಇಂಡಿಯದ ಇಂದಿನ ಪ್ರಮುಖ ಜೀವಂತ ಭಾಷೆಗಳಲ್ಲೂ ಮತ್ತು ಹಿಂದೆಯೂ ಮತ್ತು ಈಗಲೂ ಇ೦ಡಿಯದ ಮೇಲೆ ವಿಶೇಷ ಪ್ರಭಾವ ಬೀರಿರುವ ಪ್ರಾಚೀನ ಭಾಷೆಗಳಲ್ಲೂ ಅತ್ಯು ನೃತ ಪಾಂಡಿತ್ಯ ಪ್ರೌಢಿಮೆಯುಳ್ಳ ವ್ಯಕ್ತಿಗಳಿದ್ದರು. ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತ, ಪಾಲಿ, ಅರಬ್ಬಿ ಮತ್ತು ಪರ್ಷಿಯ್ರ ಭಾಷೆಗಳಲ್ಲಿ ಪಾಂಡಿತ್ಯವಿದ್ದವರೂ, ಆಧುನಿಕ ಭಾಷೆಗಳಲ್ಲಿ ಹಿಂದಿ, ಉರ್ದು, ಬಂಗಾಳಿ, ಗುಜರಾತಿ, ಮರಾಠಿ, ತೆಲುಗು, ಸಿ೦ಧಿ ಮತ್ತು ಉರಿಯ ಭಾಷೆಗಳಲ್ಲಿ ಪಂಡಿತರಾದವರೂ ಇದ್ದರು. ಈ ಸಾಹಿತ್ಯ ಸಂಪತ್ತೆಲ್ಲ ನನಗೆ ಸಿದ್ದವಿತ್ತು; ಅದರ ಪೂರ್ಣ ಲಾಭ ಪಡೆಯಲು ನನ್ನ ಅಲ್ಪ ಶಕ್ತಿಯೊಂದೇ ನನಗೆ ಮಿತಿಯಾಗಿತ್ತು. ಅವರೆಲ್ಲರಿಗೂ ನಾನು ಚಿರ ಋಣಿಯಾದರೂ ಮೌಲಾನ ಅಬುಲ್ ಕಲಾಮ್ ಅಜಾದರ ಅಸಾಧಾರಣ ಪಾಂಡಿತ್ಯ ಪ್ರೌಢಿಮೆಯಿಂದ ನಾನು ಮುಗ್ಧನಾಗಿಬಿಡು ತಿದ್ದೆ; ಒಂದೊಂದು ವೇಳೆ ಧಿಮೆ ಹೊಂದುತ್ತಿದ್ದೆ. ಅಂತೆಯೇ ಗೋವಿಂದ ವಲ್ಲಭ ಪಂತ, ನರೇ೦ದ್ರದೇವ ಮತ್ತು ಅಸಫ್ ಆಲಿ ಇವರುಗಳು ವಿಶೇಷ ಗೌರವಾರ್ಹರು.
ಈ ಪುಸ್ತಕವನ್ನು ಮುಗಿಸಿ ಒಂದು ವರ್ಷ ಮೂರು ತಿಂಗಳಾದವು. ಆಗಲೇ ಕೆಲವು ಭಾಗಗಳು ಹಳತಾಗಿವೆ. ಅವನ್ನು ಬರೆದ ನಂತರ ಎಷ್ಟೋ ಘಟನೆಗಳಾಗಿವೆ. ಪುನರವಲೋಕಿಸಿ ಬೇರೆ ಬರೆ ಯೋಣವೆನ್ನಿಸುತ್ತಿದೆ ; ಆದರೆ ಮನಸ್ಸನ್ನು ಬಿಗಿ ಹಿಡಿದಿದ್ದೇನೆ. ಆ ರೀತಿ ಬರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಸೆರೆಮನೆಯ ಹೊರಗಿನ ಜೀವನದ ಹಾಸು ಹೊಕ್ಕು ಗಳೇ ಬೇರೆ. ಯೋಚನೆಗಾಗಲಿ ಬರ ವಣಿಗೆಗಾಗಲಿ ಕಾಲವೇ ಇಲ್ಲ. ನಾನು ಬರೆದುದನ್ನು ಪುನಃ ಓದಲು ಸಹ ಕಾಲ ದೊರೆಯುವುದಿಲ್ಲ. ಮೊದಲು ಎಲ್ಲವನ್ನು ಕೈಯಲ್ಲೇ ಬರೆದೆ. ಆಮೇಲೆ ಅದನ್ನು ಟೈಪ್ ಮಾಡಲಾಯಿತು. ಟೈಪ್ ಮಾಡಿದ್ದನ್ನು ಓದಲು ನನಗೆ ಕಾಲದೊರೆಯದೆ ಪುಸ್ತಕದ ಮುದ್ರಣ ಹಿಂದೆ ಬಿತ್ತು. ನನ್ನ ಮಗಳು ಇಂದಿರ ನನ್ನ ಸಹಾಯಕ್ಕೆ ಬಂದು ಆ ಹೊರೆಯನ್ನು ಹೊತ್ತಳು, ಕೊನೆಯ ಹಿನ್ನುಡಿಯ ಹೊರತು ಪುಸ್ತಕಕ್ಕೆ ಯಾವುದನ್ನೂ ಸೇರಿಸಿಲ್ಲ; ಬದಲಿಸಿಲ್ಲ; ಸೆರೆಮನೆಯಲ್ಲಿ ಬರೆದಂತೆಯೇ ಇದೆ.