ಪುಟ:ಭಾರತ ದರ್ಶನ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ದರ್ಶನ

ಗಳಲ್ಲೂ, ನಿರ್ಬ೦ಧ ಪಾಳೆಯಗಳಲ್ಲೂ ಲಕ್ಷಗಟ್ಟಲೆ ಜನ ಕೊಳೆಯುತ್ತಿರುವರೆಂದೂ, ಸಹಸ್ರಗಟ್ಟಲೆ ಜನರು ಗುಂಡಿನ ಬಾಯಿಗೆ ತುತ್ತಾದರೆಂದೂ, ದಶಸಹಸ್ರಗಟ್ಟಲೆ ಶಾಲೆ ಕಾಲೇಜುಗಳಿ೦ದ ಹುಡುಗರು ಓಡಿಸಲ್ಪಟ್ಟಿದ್ದಾರೆಂದೂ, ಸೈನಿಕಾಡಳಿತದಿಂದ ತೀರ ಭಿನ್ನ ವಲ್ಲದ ಒಂದು ಆಡಳಿತ ಪರಿಸ್ಥಿತಿ ದೇಶಾದ್ಯಂತ ಪ್ರಾಪ್ತವಾಗಿದೆಯೆಂದೂ, ಎಲ್ಲೆಲ್ಲೂ ಜನ ಭಯಭೀತಿಯಿಂದ ಕಂಗೆಟ್ಟದಾರೆಂದೂ ಗೊತ್ತಾಗುತ್ತಿದ್ದುದು ವಿನಾ ನಮ್ಮ ಜನರ ವಿಚಾರ ವಿಶೇಷವೇನೂ ತಿಳಿಯಲು ಅವಕಾಶವೇ ಇರಲಿಲ್ಲ. ಸೆರೆಮನೆಯಲ್ಲಿ ವಿಚಾರಣೆಯಿಲ್ಲದೆ ಕೊಳೆಯುತ್ತಿದ್ದ ಲಕ್ಷಾಂತರ ಜನರ ಪರಿಸ್ಥಿತಿ ನಮಗಿಂತ ಕೀಳಾಗಿತ್ತು; ಅವರ ಭೇಟಿಯ ಮಾತಂತಿರಲಿ, ಅವರಿಗೆ ಪತ್ರಗಳು, ವೃತ್ತ ಪತ್ರಿಕೆಗಳು, ಪುಸ್ತಕಗಳು, ಯಾವುದಕ್ಕೂ ಅವಕಾಶವಿರಲಿಲ್ಲ. ಆರೋಗ್ಯಕರವಾದ ಆಹಾರವಿಲ್ಲದೆ ಅನೇಕರು ಕಾಹಿಲೆ ಬಿದ್ದರು ; ಸರಿಯಾದ ಆರೈಕೆ, ಔಷಧೋಪಚಾರ ವಿಲ್ಲದೆ ನಮ್ಮ ಅನೇಕ ಮಿತ್ರರು ಸಾವಿಗೆ ಸಹ ತುತ್ತಾದರು.

ಇಂಡಿಯಾದೇಶದಲ್ಲಿ ಅನೇಕ ಸಹಸ್ರ ಯುದ್ದ ಬಂದಿಗಳು-ಇಟಲಿಯವರೇ ಹೆಚ್ಚು ಜನ ಇದ್ದರು ನಮ್ಮ ಜನರ ಸ್ಥಿತಿಯನ್ನು ಅವರ ಸ್ಥಿತಿಯೊಂದಿಗೆ ಹೋಲಿಸಿ ನೋಡಿದೆವು. ಜಿನೀವ ಒಪ್ಪಂದದ ಪ್ರಕಾರ ಅವರನ್ನು ನೋಡಿಕೊಳ್ಳಲಾಗುತ್ತಿದೆ ಎಂಬುದಾಗಿ ಹೇಳಿದರು. ಆದರೆ ಭಾರತೀಯ ಬಂದಿ ಗಳನ್ನು , ಪೈದಿಗಳನ್ನು ನೋಡಿಕೊಳ್ಳಲು ಆಗಾಗ ನನ್ನ ಬಿಟ್ರಿಷ್ ಆಳರಸರು ಮನಬಂದಂತೆ ಮಾಡಿದ ನಿಯಮಗಳಲ್ಲದೆ ಯಾವ ನಿಯಮ, ಶಾಸನ ಅಥವ ಒಪ್ಪಂದವೂ ಇರಲಿಲ್ಲ.

೨. ಕ್ಷಾಮ

ಬಣ್ಣಿಸಲಶಕ್ಯವಾದ ಕ್ರೂರ, ಭೀಕರ, ತತ್ತರಗುಟ್ಟಿಸುವ ಕ್ಷಾಮವೂ ಬಂದಿತು. ಮಲಬಾರ್, ಬಿಜಾಪುರ, ಒರಿಸ್ಸ, ಎಲ್ಲಕ್ಕೂ ಮಿಗಿಲಾಗಿ ಕಾಳಿನ ಕಣಜ ಎಂದು ಹೆಸರಾದ ಬಂಗಾಳದಲ್ಲಿ ಗಂಡಸರು, ಹೆಂಗಸರು, ಸಣ್ಣ ಮಕ್ಕಳು ಹೊಟ್ಟೆಗಿಲ್ಲದೆ ದಿನವೂ ಸಹಸ್ರಗಟ್ಟಲೆ ಸಾಯತೊಡಗಿದರು ಕಲ್ಕತ್ತೆಯ ಅರಮನೆಗಳ ಮುಂದೆ, ಬಂಗಾಳದ ಅಸಂಖ್ಯಾತ ಹಳ್ಳಿಗಳ ಮಣ್ಣು ಗುಡಿಸಿಲುಗಳಲ್ಲಿ, ರಸ್ತೆಗಳ ಮೇಲೆ ಹೊಲಗದ್ದೆಗಳಲ್ಲಿ ಹೆಣದ ರಾಸಿಗಳು. ಪ್ರಪಂಚದಲ್ಲಿ ಎಲ್ಲ ಕಡೆಯಲ್ಲಿ ಜನರು ಸಾಯುತ್ತಿದ್ದರು, ಯುದ್ಧದಲ್ಲಿ ಒಬ್ಬರನ್ನೊಬ್ಬರು ಕೊಂದು : ಸಾಮಾನ್ಯವಾಗಿ ಶೀಘ್ರ ಮರಣ ಆದರೆ ವೀರಮರಣ ; ಒಂದು ಧೈಯಕ್ಕಾಗಿ ಮರಣ, ಒಂದು ಉದ್ದೇಶ ಸಾಫಲ್ಯಕ್ಕಾಗಿ ಮರಣ ; ಈ ನಮ್ಮ ಉನ್ಮತ್ತ ಪ್ರಪಂಚದ ಘಟನೆಗಳಿಗೆ ಬೇರೆ ಮಾರ್ಗವೇ ಇಲ್ಲ ಎಂಬ ದಯಾರಹಿತ ತರ್ಕದಿಂದ ಮರಣ, ನಮ್ಮಿಂದ ತಿದ್ದ ಲಾಗದ ತಡೆಯಲಾಗದ ಜೀವನಕ್ಕೊಂದು ಹಠಾತ್ತನೆಯ ಮರಣ, ಸಾವು ಎಲ್ಲೆಲ್ಲ ಸಾಮಾನ್ಯ ವಾಗಿತ್ತು.

ಆದರೆ ಇಲ್ಲಿ ಸಾವಿಗೆ ಯಾವ ಉದ್ದೇಶವಾಗಲಿ, ತಾರ್ಕಿಕದೃಷ್ಟಿ ಯಾಗಲಿ, ಆವಶ್ಯಕತೆಯಾಗಲಿ ಇರಲಿಲ್ಲ. ಅದು ಮಾನವನ ಅಯೋಗ್ಯತೆಯ ದಯಾಶೂನ್ಯತೆಯ ಪರಿಣಾಮವಾಗಿ ಬಂದುದು, ಮನುಷ್ಯ ನಿರ್ಮಿತವಾದುದು, ಯಾವ ಪುರುಷಾರ್ಥಸಾಧನೆಯೂ ಇಲ್ಲದೆ ನಿದಾನವಾಗಿ ನುಸುಳಿ ಬಂದ ಭೀತಿಯ ಫಲಜೀವನ ಮರಣದಲ್ಲಿ ಮಿಲನವಾಗಿ ಮರಣವಾಗಿ ಮುಕ್ತಾಯವಾಗುವ ದೃಶ್ಯ, ಜೀವ ಇನ್ನೂ ಇರುವಾಗಲೇ ಕೃಶವಾದ ದೇಹ, ಗೂಳಿಬಿದ್ದ ಕಣ್ಣುಗಳಿಂದ ಸಾವು ದೃಷ್ಟಿ ಬೀರುವ ದೃಶ್ಯ. ಈ ವಿಷಯ ಉಸಿರೆತ್ತುವುದೂ, ಮಾತನಾಡುವುದೂ ಬರೆಯುವುದೂ ತಪ್ಪು, ಒ೦ದು ದುರ್ಘಟನೆಯನ್ನು ನಾಟಕೀಯವನ್ನಾಗಿ ಮಾಡುವುದೇ ? ಇಂಡಿಯಾದಲ್ಲಿ, ಇಂಗ್ಲೆಂಡಿನಲ್ಲಿ ಅಧಿಕಾರಿಗಳು ಸುಳ್ಳು ವರದಿಗಳನ್ನು ಬರೆದರು. ಆದರೆ ಹೆಣಗಳನ್ನು ಬಚ್ಚಿಡಲು ಸಾಧ್ಯವೆ ? ಅಡ್ಡ ಬರಲೇಬೇಕು.

ಈ ಪ್ರೇತಾಗ್ನಿಗೆ ಬಂಗಾಳ ಮತ್ತು ಇತರ ಕಡೆಗಳಲ್ಲಿ ಜನ ಆಹುತಿಯಾಗುತ್ತಿದ್ದಾಗ ಯುದ್ದ ಕಾಲದ ಆರ್ಥಿಕ ಉನ್ನತಿಯಿಂದ ಇಂಡಿಯಾದೇಶದ ಅನೇಕ ಕಡೆಗಳಲ್ಲಿ ರೈತರಿಗೆ ಆಹಾರ ಸಮೃದ್ಧಿ ಇದೆ ಎಂದು ಅಧಿಕಾರವಾಣಿಯೂ ಹೊರಬಿದ್ದಿತು. ಅನಂತರ ತಪ್ಪಲ್ಲ ಸ್ವಪ್ರಭುತ್ವ ಅಧಿಕಾರವುಳ್ಳ ಪ್ರಾಂತೀಯ ಸರಕಾರಗಳ ಜವಾಬ್ದಾರಿಗೆ ಸೇರಿದ್ದು, ರಾಜಕೀಯ ದೃಷ್ಟಿಯಿಂದ ಇ೦ಡಿಯಾ