ಪುಟ:ಭಾರತ ದರ್ಶನ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ೨೫೫ ಮತ್ತು ಮಠಗಳ ಆಡಳಿತ ವ್ಯವಸ್ಥೆ ಯುಳ್ಳವರು-ಈ ಹೆಣಭಾರದಿಂದ ಅಮೆರಿಕೆಯ ಕ್ರಾಂತಿಕಾರರು ಬ್ರಿಟಿಷ್ ರಾಜರ ಅಧೀನ ರಾಷ್ಟ್ರಗಳ ಪ್ರಜೆಗಳನ್ನು ಬಿಡುಗಡೆಮಾಡಿದರು. ಬಿಡುಗಡೆಯನಂತರ ಶಾಸನ ಮತ್ತು ರಾಜ್ಯ ನೀತಿಯಲ್ಲಿ ಹತ್ತಿಪ್ಪತ್ತು ವರ್ಷಗಳಲ್ಲಿ ಅಮೆರಿಕನ್ನರು ಸಾಧಿಸಿದ ಸುಧಾರಣೆಗೆ ಳನ್ನು ಇಂಗ್ಲೆಂಡಿನಲ್ಲಿ ನೂರಾರು ವರ್ಷಗಳು ಸತತವಾಗಿ ಹೋರಾಡಿ ಸಾಧಿಸಬೇಕಾಯಿತು. ಕ್ರಾಂತಿ ಯನ್ನೆಬ್ಬಿಸಿದ ಈ ರಾಜಕಾರಣಿಗಳು ಆ ಸುಧಾರಣೆಗಳಿಂದ ಇಂಗ್ಲಿಷ್ ಚರಿತ್ರೆಯಲ್ಲಿ ಅಮರರಾದರು” ಎಂದಿದ್ದಾರೆ. ಸ್ವಾತಂತ್ರದ ಇತಿಹಾಸದಲ್ಲಿ ೧೭೭೬ರಲ್ಲಿ ಸಹಿಯಾದ ಅಮೆರಿಕೆಯ ಸಾತಂತ್ರ ಘೋಷಣೆಯು ಒಂದು ಪ್ರಧಾನ ಘಟ್ಟ. ಆರು ವರ್ಷಗಳನಂತರ ವಸಾಹತು ರಾಜ್ಯಗಳು ಇಂಗ್ಲೆಂಡಿನಿಂದ ಪ್ರತ್ಯೇಕ ವಾದವು. ತನ್ನ ನಿಜವಾದ ಮಾನಸಿಕ, ಆರ್ಥಿಕ, ಸಾಮಾಜಿಕ ಕ್ರಾಂತಿಯನ್ನು ಆರಂಭಿಸಿದವು. ಬ್ರಿಟಿಷರ ಪ್ರೇರಣೆಯಿಂದ ಇಂಗ್ಲೆಂಡಿನ ಪದ್ಧತಿಯಂತೆ ಏರ್ಪಟ್ಟ ಭೂಮಿಯ ಒಡೆತನ ಪದ್ದತಿಯನ್ನು ಪೂರ್ಣ ನಿರ್ಮೂಲ ಮಾಡಲಾಯಿತು. ಅನೇಕ ವಿಶೇಷಾಧಿಕಾರಗಳನ್ನು ಕಿತ್ತುಕೊಳ್ಳಲಾಯಿತು. ದೊಡ್ಡ ದೊಡ್ಡ ಜಮೀನುದಾರಿಗಳನ್ನು ಸರಕಾರವು ವಹಿಸಿಕೊಂಡು ಸಣ್ಣ ಸಣ್ಣ ಹಿಡುವಳಿಗಳನ್ನಾಗಿ ವಿಂಗಡಿಸಿತು. ಜನರಲ್ಲಿ ಒಂದು ಹೊಸ ಸ್ಫೂರ್ತಿಯು ಉಕ್ಕಿ ಬಂದು ವಿಶೇಷ ಮಾನಸಿಕ ಮತ್ತು ಆರ್ಥಿಕ ಕಾರ್ಯ ಚಟುವಟಿಕೆಯು ಹುಟ್ಟಿತು. ಪಾಳೆಯಗಾರಿಕೆಯ ಪದ್ಧತಿ ಮತ್ತು ವಿದೇಶೀಯರ ದಾಸ್ಯಗಳಿಂದ ಬಿಡುಗಡೆ ಹೊಂದಿದ ಅಮೆರಿಕೆಯು ಭೂಮ ಪಾದಗಳಿಂದ ಪ್ರಗತಿ ಶಿಖರವನ್ನೇರಿತು. ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಪುರಾತನ ಸಂಪ್ರದಾಯದ ಸಂಕೇತವಾದ ಬ್ಯಾಸ್ಟಿಲ್ ಸೆರೆಮ ನೆಯು ಧ್ವಂಸವಾಯಿತು ; ದೊರೆಯನ್ನೂ, ಶ್ರೀಮಂತಿಕೆಯನ್ನೂ ನಾಶಮಾಡಿ ಮಾನವ ಸ್ವಾತಂತ್ರ ವನ್ನು ಪ್ರಪಂಚಕ್ಕೆ ಸಾರಿತು. ಇಂಗ್ಲೆಂಡಿನಲ್ಲಿ ? ಅಮೆರಿಕ ಮತ್ತು ಫ್ರಾನ್ಸಿನಲ್ಲಿ ಆದ ಈ ವಿಪ್ಲವಕಾರಕ ಪರಿವರ್ತನೆಗಳನ್ನು ಕಂಡು ಹೆದರಿ ಇಂಗ್ಲೆಂಡ್ ಇನ್ನೂ ಪ್ರತಿಗಾಮಿಯಾಯಿತು. ಕ್ರೂರವೂ ಕಠಿನವೂ ಆದ ಅದರ ದಂಡ ಶಾಸನವು ಇನ್ನೂ ಕ್ರೂರವಾಯಿತು. ೧೭೬೦ರಲ್ಲಿ ಮೂರನೆಯ ಜಾರ್ಜ್‌ ಸಿಂಹಾಸನವನ್ನು ಏರಿದಾಗ ಗಂಡಸರು, ಹೆಂಗಸರು ಮಕ್ಕಳು ಸುಮಾರು ೧೬೦ ಅಪರಾಧಗಳು ಮರಣದಂಡನೆಗೆ ತುತ್ತಾದರು. ೧೮೨೦ರಲ್ಲಿ ಆತನ ಆಳ್ವಿಕೆಯು ಮುಗಿಯುವ ಹೊತ್ತಿಗೆ ಮರಣದಂಡನೆ ಶಿಕ್ಷೆಯುಳ್ಳ ಇನ್ನು ನೂರು ಅಪರಾಧಗಳನ್ನು ಆ ಕ್ರೂರ ಶಾಸನ ಕಡತಕ್ಕೆ ಸೇರಿಸಲಾಯಿತು. ಬ್ರಿಟಿಷ್ ಸೈನ್ಯದ ಸಾಮಾನ್ಯ ಸೈನಿಕನನ್ನು ಮೃಗಕ್ಕಿಂತ ಕಡೆಯಾಗಿ ಕ್ಷೌರದಿಂದ ಅಮಾನುಷ ರೀತಿಯಲ್ಲಿ ನೋಡುತ್ತಿದ್ದರು. ಮರಣ ದಂಡನೆಯು ಸಾಮಾನ್ಯವಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಛಡಿ ಹೊಡೆಯುವುದು ಇನ್ನೂ ಸಾಮಾ ನ್ಯವಿತ್ತು. ನೂರು ಏಟುಗಳವರೆಗೆ ಹೊಡೆಯುತ್ತಿದ್ದರು. ಅನೇಕವೇಳೆ ಸಾವಿನಲ್ಲೇ ಮುಕ್ತಾಯ ವಾಗುತ್ತಿತ್ತು. ಅಥವ ಬದುಕಿದರೂ ಅವನ ವಿಕಾರ ರೂಪು ಸಾಯುವವರೆಗೂ ಅವನ ಕಥೆಯನ್ನು ಸ್ಮರಣೆಗೆ ತರುತ್ತಿತ್ತು. * ಮಾನವೀಯತೆಯಲ್ಲಿ ವ್ಯಕ್ತಿ ಅಥವ ಪಂಗಡದ ಗೌರವದಲ್ಲಿ ಭಾರತವು ಇತರರಿಗಿಂತ ಬಹಳ ಮುಂದೆ ಇತ್ತು, ಅದರ ನಾಗರಿಕತೆಯು ಉನ್ನತಮಟ್ಟದ್ದಿತ್ತು. ವಿದ್ಯಾಭ್ಯಾಸವು ಕೇವಲ ಸಾಂಪ್ರ ದಾಯಕವಿದ್ದರೂ ಇಂಗ್ಲೆಂಡ್ ಅಥವ ಯೂರೋಪಿನ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚು ಜನ ವಿದ್ಯಾ ವಂತರಿದ್ದರು. ಪ್ರಾಯಶಃ ನಾಗರಿಕ ಸೌಲಭ್ಯಗಳೂ ಹೆಚ್ಚು ಇದ್ದವು. ಯೂರೋಪಿನಲ್ಲಿ ಸಾಮಾನ್ಯ ಜನರ ಪರಿಸ್ಥಿತಿಯು ಬಹು ಹೀನಸ್ಥಿತಿಯಲ್ಲಿತ್ತು ; ಭಾರತದ ಪರಿಸ್ಥಿತಿಯೊಂದಿಗೆ ಹೋಲಿಸಿದರೆ ಬಹಳ ಕರುಣಾಜನಕವಿತ್ತು. ಆದರೆ ಒಂದು ಮುಖ್ಯ ವ್ಯತ್ಯಾಸವಿತ್ತು, ಪಶ್ಚಿಮ ಯೂರೋಪಿನಲ್ಲಿ ಹೊಸ ಶಕ್ತಿಗಳು, ಜೀವನವಾಹಿನಿಗಳು ಉದ್ಭವಿಸಿ ಅಗಾಧ ಪರಿವರ್ತನೆ ಮಾಡುತ್ತಿದ್ದವು; ಭಾರತದ ಪರಿಸ್ಥಿ ತಿಯು ಹೆಚ್ಚು ಸ್ಥಾಯಿಸ್ವಭಾವದ್ದಾಗಿತ್ತು. ಇಂಗ್ಲೆಂಡ್ ಭಾರತಕ್ಕೆ ಬಂದಿತು, ೧೬೦೦ ರಲ್ಲಿ ಎಲಿಜಬೆತ್ ರಾಣಿಯು ಈಸ್ಟ್ ಇಂಡಿಯ ಕಂಪ