ಪುಟ:ಭಾರತ ದರ್ಶನ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫ ಭಾರತ ದರ್ಶನ ನಿಗೆ ಅನುಜ್ಞೆ ಕೊಟ್ಟಾಗ ಷೇಕ್ಸ್ ಪಿಯರ್ ಜೀವಂತನಿದ್ದು ನಾಟಕರಚನೆ ಮಾಡುತ್ತಿದ್ದನು. ೧೬೧n ರಲ್ಲಿ “ ಬೈಬಲ್'ನ ಇಂಗ್ಲಿಷ್ ಅಧಿಕೃತ ಪ್ರತಿಯು ಹೊರಬಿದ್ದಿತು, ೧೬೦೮ ರಲ್ಲಿ ಮಿಲ್ಟನ್ ಹುಟ್ಟಿದನು. ಅನಂತರ ಹ್ಯಾಂಪ್‌ಡನ್, ಕ್ರಾ೦ವೆಲ್ ಮತ್ತು ರಾಜಕೀಯಕ್ರಾಂತಿ, ೧೬೬೦ ರಲ್ಲಿ ವಿಜ್ಞಾನದ ಬೆಳ ವಣಿಗೆಗೆ ಪ್ರೋತ್ಸಾಹಕೊಟ್ಟ ಇಂಗ್ಲೆಂಡಿನ * ರಾಯಲ್ ಸೊಸೈಟಿ ”ಯು ಹುಟ್ಟಿತು. ಒಂದುನೂರು ವರ್ಷಗಳನಂತರ ೧೭೬೦ ರಲ್ಲಿ ಹಾರುವಲಾಳಿಯನ್ನು ಕಂಡುಹಿಡಿದರು. ಆಮೇಲೆ ನೂಲಿನೆಳೆಗಳ ಯಂತ್ರ (Spinning jenny) ಆವಿಯಯಂತ್ರ (Steam engine) ಮತ್ತು ಯಂತ್ರದ ಮಗ್ಗ ಗಳನ್ನು ಒಂದರಮೇಲೊಂದನ್ನು ಕಂಡುಹಿಡಿದರು. ಇವುಗಳಲ್ಲಿ ಇಂಡಿಯಕ್ಕೆ ಬಂದ ಇಂಗ್ಲೆಂಡ್ ಯಾವುದು ? ಷೇಕ್ಸ್ಪಿಯರ್ ಮಿಲ್ಟನ್ನಿನ, ಉನ್ನತ ಭಾವನೆ, ಬರವಣಿಗೆ ಮತ್ತು ಭಾಷಣದ, ವಿಜ್ಞಾನ ಮತ್ತು ಔದ್ಯೋಗಿಕ ಪ್ರಗತಿಯ, ರಾಜ ಕೀಯ ವಿಜ್ಞಾನ ಮತ್ತು ಸ್ವಾತಂತ್ರ್ಯ ಸಮರದ ಇಂಗ್ಲೆಂಡೇ ಅಥವ ಕ್ರೂರ ದಂಡನೆಯ, ಪಾಶವೀನ ನೋಭಾವದ ಪಾಳೆಯಗಾರಿಕೆಯ ಮತ್ತು ಪ್ರಗತಿ ವಿರುದ್ಧ ಇಂಗ್ಲೆ೦ಡೇ ? ಏಕೆಂದರೆ ಪ್ರತಿಯೊಂದು ದೇಶದ ರಾಷ್ಟ್ರೀಯ ಗುಣ ಮತ್ತು ನಾಗರಿಕತೆಗೆ ಎರಡು ಮುಖಗಳಿರುವಂತೆ ಇಂಗ್ಲೆಂಡಿನಲ್ಲಿ ಎರಡು ಮುಖಗಳಿದ್ದವು. ಇಂಗ್ಲೆಂಡಿನಲ್ಲಿ ಆದರ್ಶ ವ್ಯಕ್ತಿಗೂ ಸಾಮಾನ್ಯ ವ್ಯಕ್ತಿಗೂ ಇದ್ದ ನಾಗರಿಕತೆಯ ಅ೦ತರವು ಅಪಾರವಾಗಿತ್ತು. ಬೇರೆ ಯಾವುದಾದರೂ ದೇಶದಲ್ಲಿ ಹುಡುಕಿದರೂ ಈ ಅಂತರವನ್ನು ಕಾಣು ವಯ ಎಂಬ ಅನುಮಾನವಾಗುತ್ತದೆ. ಅಂತರ ಕಡಮೆಯಾದರೂ ಸ್ವಲ್ಪವೂ ತಿಳಿಯಲಾಗದಂತೆ ನಿಧಾನವಾಗಿ ಕಡಮೆಯಾಗುತ್ತಿದೆ.” ಎಂದು ಎಡ್ವರ್ಡ್ ಥಾಮ್ಪನ್ ಹೇಳುತ್ತಾನೆ. ಎರಡು ಇಂಗ್ಲೆಂಡ್ಗಳೂ ಒಂದರ ಮೇಲೊಂದು ಪ್ರಭಾವವನ್ನು ಬೀರುತ್ತ ಒ೦ದರ ಜೊತೆಯ ಲೌ ಂದು ಬೆಳೆದವು. ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ; ಒಂದನ್ನು ಸಂಪೂರ್ಣವಾಗಿ ಹಿಂದೆ ಬಿಟ್ಟು ಇನ್ನೊಂದು ಮಾತ್ರ ಇಂಡಿಯಾಕ್ಕೆ ಬರಲು ಸಾಧ್ಯವೂ ಇರಲಿಲ್ಲ. ಆದರೂ ಯಾವ ದೊಡ್ಡ ಕಾರ ವನ್ನು ತೆಗೆದುಕೊಂಡರೂ ಇನ್ನೊಂದನ್ನು ಬದಿಗೊತ್ತಿ ಒಂದು ಇಂಗ್ಲೆಂಡೇ ಪ್ರಧಾನ ಪಾತ್ರವನ್ನು ವಹಿಸು ಇದೆ. ಇಂಡಿಯದಲ್ಲಿ ಅಡ್ಡದಾರಿಯ ಇಂಗ್ಲೆಂಡ್ ಆ ಪಾತ್ರವನ್ನು ವಹಿಸಬೇಕಾದ್ದೂ, ಕೀಳುಮಟ್ಟದ ಭಾರತೀಯರ ಸಂಪರ್ಕ ಬೆಳೆಸಿ ಅವರನ್ನೇ ಪ್ರೋತ್ಸಾಹಿಸಿದ್ದೂ ಅನಿವಾರವಾಯಿತು. ಅಮೆರಿಕಾ ಸ್ವಾತಂತ್ರ್ಯವನ್ನು ಸಂಪಾದಿಸಿದ್ದೂ, ಇ೦ಡಿಯ ಸ್ವಾತಂತ್ರ್ಯವನ್ನು ಕಳೆದುಕೊಂಡರೂ ಒಂದೇ ಕಾಲದಲ್ಲಿ. ಕಳೆದ ಒಂದೂವರೆ ಶತಮಾನ ಕಾಲದಲ್ಲಿ ಅಮೆರಿಕೆಯ ಸಂಯುಕ್ತ ಸಂಸ್ಥಾನದಲ್ಲಿ ಸಾಧಿಸಿರುವ ಪ್ರಗತಿಯನ್ನು ಭಾರತದಲ್ಲಿ ಸಾಧಿಸಿರುವ ಮತ್ತು ಸಾಧಿಸಲಾಗದಿರುವ ಕಾರದೊಂದಿಗೆ ಹೋಲಿಸಿ ಸ್ವಲ್ಪ ಯೋಚಿಸಲಾಗುತ್ತದೆ. ಅಮೇರಿಕ ದೇಶಕ್ಕೆ ಅನೇಕ ಅನುಕೂಲತೆಗಳಿದ್ದವನ್ನು ವುದೂ, ನಮಗೆ ಅನೇಕ ನ್ಯೂನತೆಗಳಿದ್ದವೆನ್ನು ವುದೂ ನಿಜ. ಅಮೆರಿಕ ಯಾವ ಬಂಧನವೂ ಇಲ್ಲದ ರಾಷ್ಟ್ರವಾಗಿತ್ತು, ಅಲ್ಲಿನ ಜನರು ಸಂಪೂರ್ಣ ಸರ್ವತಂತ್ರ ಸ್ವತಂತ್ರರಿದ್ದರು. ಹಿಂದಿನ ಕಹಿನೆನಪು ಗಳೂ, ಸನಾತನ ಸಂಪ್ರದಾಯಗಳೂ ನಮ್ಮನ್ನು ಕಟ್ಟಿ ಬಿಗಿದಿದ್ದವು. ಆದರೂ ಬ್ರಿಟನ್ನು ಭಾರತದಲ್ಲಿ ಈ ದೊಡ್ಡ ಹೊರೆಯನ್ನು ಹೊರದಿದ್ದರೆ ಮತ್ತು ಅದು ಹೇಳುತ್ತಿರುವಂತೆ ನಮಗೆ ಅನುಭವವಿಲ್ಲದ ಪ್ರಜಾಪ್ರತಿನಿಧಿ ಪ್ರಭುತ್ವ ಪದ್ಧತಿಯನ್ನು ಕಲಿಸಲು ಇಷ್ಟು ದೀರ್ಘಕಾಲ ಶ್ರಮಪಡದಿದ್ದರೆ ಪ್ರಾಯಶಃ ಇಂಡಿಯ ಸ್ವತಂತ್ರವಾಗಿ ಇನ್ನೂ ಅಭಿವೃದ್ಧಿ ಸ್ಥಿತಿಯಲ್ಲಿ ಇರುತ್ತಿತ್ತು ಅಲ್ಲದೆ ವಿಜ್ಞಾನ, ಕಲೆ ಮತ್ತು ಜೀವನ ಸೌಖ್ಯದಲ್ಲಿ ಇನ್ನೂ ಬಹಳ ಮುಂದೆ ಇರುತ್ತಿತ್ತು.