ಪುಟ:ಭಾರತ ದರ್ಶನ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾಯ-೭: ಕೊನೆಯ ಅಂಕ ಬ್ರಿಟಿಷರ ಅಧಿಕಾರ ಪ್ರಾಬಲ್ಯ ಮತ್ತು ರಾಷ್ಟ್ರೀಯ ಚಳವಳಿಯ ಆರಂಭ ೧. ಸಾಮಾಜ್ಯ ಭಾವನೆ-ಹೊಸ ಜಾತಿ ಭಾರತ ಮತ್ತು ಅದರ ಇತಿಹಾಸವನ್ನು ಅರಿತ ಆ೦ಗ್ಲೀಯನೊಬ್ಬ “ ನಮ್ಮ ಇತರ ಎಲ್ಲ ಕೆಲಸ ಗಳಿಗಿಂತ ನಾವು ಬರೆದ ಭಾರತದ ಇತಿಹಾಸ ಭಾರತೀಯರಿಗೆ ತುಂಬ ಅಸಹನೀಯ” ಎಂದಿದಾನೆ' ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರಿಗೆ ತುಂಬ ಅಸಹನೀಯ ಯಾವುದು ಎಂದು ಹೇಳಲು ಅಸಾಧ್ಯ. ಪಟ್ಟಿಯ ಉದ್ದವೂ ಹೆಚ್ಚು ವೈವಿಧ್ಯವೂ ಹೆಚ್ಚು. ಆದರೆ ಬ್ರಿಟಿಷರು ಬರೆದಿರುವ ಭಾರತದ ಇತಿಹಾಸವನ್ನು ಅದರಲ್ಲೂ ಮುಖ್ಯವಾಗಿ ಬ್ರಿಟಿಷರ ಕಾಲದ ಇತಿಹಾಸವನ್ನು ಕಂಡರೆ ಆಗುವುದಿಲ್ಲ. ಸಾಮಾನ್ಯವಾಗಿ ಚರಿತ್ರೆಯನ್ನು ಬರೆಯುವವರೆಲ್ಲ ಗೆದ್ದವರು ಮತ್ತು ವಿಜಯಶಾಲಿಗಳು; ತಮ್ಮ ದೃಷ್ಟಿ ಯನ್ನೇ ಅದರಲ್ಲಿ ಚಿತ್ರಿಸುತ್ತಾರೆ. ಸಾಮಾನ್ಯವಾಗಿ ಅವರ ಅಭಿಪ್ರಾಯಗಳಿಗೇ ಪ್ರಾಮುಖ್ಯತೆ ಮತ್ತು ಮನ್ನಣೆ. ಪ್ರಾಯಶಃ ಇದೇ ರೀತಿ ಭಾರತದ ಆರರ ಪ್ರಾಚೀನ ಗ್ರಂಥಗಳೆಲ್ಲ, ಆರರ ಪುರಾಣಗಳು ಇತಿಹಾಸಗಳೆಲ್ಲ-ಆರರನ್ನೇ ಹೊಗಳಿ ಗೆದ್ದ ನಾಡಿನ ಜನರಿಗೆ ಅನ್ಯಾಯ ಮಾಡಿವೆ. ತನ್ನ ಜನಾಂಗ ದೃಷ್ಟಿಯನ್ನು ಮತ್ತು ಸಾಂಸ್ಕೃತಿಕ ಮಿತಿಯನ್ನು ಮೀರಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ; ಜನಾಂಗ ಗಳಿಗೆ ಮತ್ತು ರಾಷ್ಟ್ರಗಳಿಗೆ ಹೋರಾಟ ನಡೆದಾಗ ಸಮದೃಷ್ಟಿಯನ್ನು ತೋರಲೆತ್ನಿ ಸುವುದೂ ರಾಷ್ಟ್ರ ದ್ರೋಹವೆನಿಸಬಹುದು. ಈ ಹೋರಾಟದ ಅಂತಿಮ ಘಟ್ಟವಾದ ಯುದ್ದ ಸಮಯದಲ್ಲಿ ಶತ್ರುವಿನ ವಿಷಯದಲ್ಲಿ ಎಲ್ಲ ನ್ಯಾಯಪರತೆ ಮತ್ತು ಸಮತಾದೃಷ್ಟಿಯೂ ಮಾಯವಾಗುತ್ತವೆ. ಶತ್ರುವಿನ ಮುಖಕ್ಕೆ ಕಪ್ಪು ಬಳಿದು ಆತನನ್ನು ಪರಮ ಪಾತಕಿಯನ್ನಾಗಿ ಮಾಡಿ ತನ್ನ ನೀತಿಯನ್ನು ಸಮರ್ಥನೆ ಮಾಡುವ ಮಾರ್ಗ ಒಂದನ್ನು ಬಿಟ್ಟು ಉಳಿದೆಲ್ಲ ಮಾರ್ಗಗಳೂ ಕಾಣದಾಗುತ್ತವೆ. ಸತ್ಯವು ಎಲ್ಲೋ ಅಂತರಾಳದಲ್ಲಿ ಅಡಗುತ್ತದೆ; ಅಸತ್ಯವು ಲಜ್ಞಾರಹಿತ ನಗ್ನತೆಯಿಂದ ಸ್ಟೇಚ್ಛೆಯಾಗಿ ತಾಂಡವ ಮಾಡುತ್ತದೆ. ಪ್ರತ್ಯಕ್ಷವಾಗಿ ಯುದ್ಧ ನಡೆಯದಿದ್ದರೂ ರಾಷ್ಟ್ರ ರಾಷ್ಟ್ರಗಳಿಗೆ ಅಪ್ರತ್ಯಕ್ಷ ಘರ್ಷಣೆಗಳೂ, ಯುದ್ದವೂ ಆಗುತ್ತಲೇ ಇರುತ್ತವೆ. ಪರಕೀಯರ ದಾಸ್ಯದಲ್ಲಿ ತೊಳಲುತ್ತಿರುವ ದೇಶದಲ್ಲಿ ಈ ಘರ್ಷಣೆಯು ನಿರಂತರವೂ, ಆತ್ಮಗತವೂ ಆಗಿ ಜನರ ಭಾವನೆ ಮತ್ತು ಕಾವ್ಯಗಳನ್ನು ಮಾರ್ಪಡಿಸಿ ವಿಕೃತಿಗೊಳಿಸುತ್ತದೆ. ಯುದ್ದ ಭಾವನೆಯು ಹೋಗುವುದೇ ಇಲ್ಲ. ಹಿಂದಿನ ಕಾಲದಲ್ಲಿ ಯುದ್ಧದ ಪರಿಣಾಮವಾಗಿ ಪಾಶವೀ ವೃತ್ತಿ, ಜಯ ಮತ್ತು ಅದರ ಹಿಂದೆಯೇ ದಾಸ್ಯ ಇವು ಅನಿವಾರವೆಂಬ ಭಾವನೆ ಇದ್ದಾಗ ಬೇರೊಂದು ದೃಷ್ಟಿಯಿಂದ ಅವುಗಳನ್ನು ಮರೆಮಾಚುವುದಕ್ಕಾಗಲಿ ಸರಿ ಎಂದು ಸಾಧಿಸುವುದಕ್ಕಾಗಿ ಆವಶ್ಯಕತೆಯೇ ಇರುತ್ತಿರಲಿಲ್ಲ. ಮಾನವನ ಜೀವನಮಟ್ಟವು ಹೆಚ್ಚಿದಂತೆಲ್ಲ ಆ ಪರಿಣಾಮವೇ ಸರಿ ಎಂದು ಸಾಧಿಸುವುದು ಅವಶ್ಯವೆನಿಸಿದೆ. ಇದರಿಂದ ಅನೇಕವೇಳೆ ಉದ್ದಿಶ್ಯ ಪೂರ್ವಕವಾಗಿ, ಇನ್ನು ಕೆಲವು ವೇಳೆ ಉದ್ದಿಶ್ಯವಿಲ್ಲದೆ ಸತ್ಯದ ಕೊಲೆಯಾಗುತ್ತದೆ. ಈ ರೀತಿ ಠಕ್ಕು ತನಕ್ಕೊಂದು ಕಪಟ ಸಂನ್ಯಾಸತ್ವ ದೊರೆಯುತ್ತದೆ. ಕೃತಕವೂ, ಅಸಹ್ಯವೂ ಆದ ವೈರಾಗ್ಯಕ್ಕೆ ದುರುಳುತನದ ಸಖ್ಯ ದೊರೆಯುತ್ತದೆ. ಯಾವ ದೇಶದಲ್ಲಿಯೇ ಆಗಲಿ, ಅದರಲ್ಲೂ ಜಟಿಲ ಇತಿಹಾಸ ಮತ್ತು ಮಿಶ್ರ ಸಂಸ್ಕೃತಿಯ ಭಾರತದಂತಹ ದೊಡ್ಡ ದೇಶದಲ್ಲಿ ಯಾವುದೋ ಒಂದು ವಿಶಿಷ್ಟ ಭಾವನೆಗೆ ಪುಷ್ಟಿ ದೊರೆಯುವ ಅಂಶಗಳು, ಮತ್ತು ಜಾಡುಗಳು ದೊರೆಯುವುದು ಅತಿಸುಲಭ. ಅನಂತರ ಆ ಭಾವನೆಯೇ ಒಂದು ಹೊಸ ವಾದಮೂಲವಾಗುತ್ತದೆ. ಅಮೆರಿಕದಲ್ಲಿ ಉನ್ನತ ಮಟ್ಟವೂ ಮತ್ತು ಸಮತೆಯೂ ವಿಶೇಷ 17