ಪುಟ:ಭಾರತ ದರ್ಶನ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

9MOS ಭಾರತ ದರ್ಶನ ವಿದ್ದರೂ ಅದನ್ನು ವಿರೋಧಾಭಾಸಗಳ ದೇಶ ಎಂದಿದಾರೆ. ಭಾರತದಲ್ಲಿ ಇನ್ನಷ್ಟು ವಿರೋಧಾ ಭಾಸಗಳು, ವೈಪರೀತ್ಯಗಳು ಇರಬೇಕು ! ನಮ್ಮ ದೃಷ್ಟಿಯ ನೇರಕ್ಕೆ ಏನು ಬೇಕಾದರೂ ದೊರೆಯು ತದೆ; ಆ ದೃಷ್ಟಿಯ ಬಣ್ಣದ ಪೂರ್ವ ಸಿದ್ದಾಂತದ ಆಧಾರದ ಮೇಲೆ ನಮ್ಮ ಅಭಿಪ್ರಾಯಗಳನ್ನು, ನಂಬಿಕೆಗಳನ್ನು ರೂಪುಗೊಳಿಸುತ್ತೇವೆ. ಆದರೂ ಅದೆಲ್ಲ ಮರಳಿನ ಮನೆ; ಆ ಚಿತ್ರವೇ ಸತ್ಯವೆಂದು ಮೋಸಹೋಗುತ್ತೇವೆ, - ಭಾರತದ ಈಚೆಗಿನ ಇತಿಹಾಸ ಅಂದರೆ ಬ್ರಿಟಿಷರ ಆಳ್ವಿಕೆಯ ಇತಿಹಾಸವು ಇಂದಿನ ಘಟನೆ ಗಳಿಗೆ ತೀರ ಸಮೀಪವಿದೆ. ಇಂದಿನ ಆವೇಶಗಳು ಮನೋವೈಕಲ್ಯಗಳು ಚಿತ್ರದ ನೈಜರೂಪಕ್ಕೆ ಬಣ್ಣ ಕೊಡುತ್ತವೆ. ಬ್ರಿಟಿಷರ ಮತ್ತು ಭಾರತೀಯರ ಮಾರ್ಗ ಬೇರೆಯಾದರೂ ಇಬ್ಬರೂ ತಪ್ಪು ಮಾಡುವುದು ಸಹಜ. ಇತಿಹಾಸಕ್ಕೆ ಒಂದು ರೂಪು ಕೊಡುವ ದಾಖಲೆಗಳು, ಕಾಗದ ಪತ್ರಗಳ ಬಹು ಭಾಗವು ದೊರಕುವುದು ಬ್ರಿಟಿಷರಿಂದ, ಆದ್ದರಿಂದ ಅವು ಬ್ರಿಟಿಷರ ದೃಷ್ಟಿಯನ್ನೇ ಪ್ರತಿ ಬಿಂಬಿಸುವುದು ಅನಿವಾಯ್ಯ. ದೇಶಕ್ಕೆ ಒದಗಿದ ಅಪಜಯ ಮತ್ತು ಕೋಭೆಯಿಂದ ಭಾರತೀಯ ಇತಿಹಾಸ ಮೂಲಗಳು ಯಾವುವೂ ಹುಟ್ಟಲಿಲ್ಲ ; ಇದ್ದ ಕೆಲವು ದಾಖಲೆಗಳೂ ೧೮೫೭ರ ಕ್ರಾಂತಿ ಯಲ್ಲಿ ನಾಶವಾದವು. ಉಳಿದ ಕೆಲವು ದಾಖಲೆಗಳು ಮುಂದೆ ಒದಗುವ ಶಿಕ್ಷೆಯ ಭಯದಲ್ಲಿ ಕತ್ತಲು ಕೋಣೆಗಳನ್ನು ಸೇರಿದವು ; ಯಾರಿಗೂ ದೊರೆಯದೆ, ತಿಳಿಯದೆ, ಕರಡಿನ ರೂಪದಲ್ಲಿಯೇ ಹುಳು ಹುಪ್ಪಡಿಗಳಿಗೆ ಆಹುತಿಯಾದವು. ಹಾಗೂ ಕಳೆದುಳಿದ ಕೆಲವು ಕಾಗದ ಪತ್ರಗಳು ಆಮೇಲೆ ದೊರೆ ತಾಗ ಅನೇಕ ಐತಿಹಾಸಿಕ ಘಟನೆಗಳ ಮೇಲೆ ಹೊಸಬೆಳಕನ್ನು ಬೀರಿದವು. ಬ್ರಿಟಿಷರು ಬರೆದ ಭಾರತದ ಇತಿಹಾಸವನ್ನು ತಿದ್ದಬೇಕಾಯಿತು. ಬೇರೊಂದು ದೃಷ್ಟಿಯ ಭಾರತೀಯ ಇತಿಹಾಸವು ಜನ್ಮತಾಳಿತು, ಈ ದೃಷ್ಟಿಯ ಹಿಂದೆ ಸಹ ಹಿಂದಿನ ನೆನಪು ಮತ್ತು ಅನುಭವಗಳ ಕಹಿ- ತೀರ ಹಿಂದಿನದಲ್ಲ-ನಮ್ಮ ತಾತಂದಿರು ಮತ್ತು ಮುತ್ತಾತಂದಿರು ಸ್ವತಃ ಭಾಗವಹಿಸಿ ಬಲಿಯಾದ ಘಟನೆ ಗಳ ಕಹಿಯು ಅದರ ಹಿಂದೆ ಇತ್ತು. ಇತಿಹಾಸ ದೃಷ್ಟಿಯಿಂದ ಈ ನೆನಪು ಮತ್ತು ಅನುಭವಕ್ಕೆ ಏನೂ ಬೆಲೆ ಇಲ್ಲದಿರಬಹುದು. ಆದರೆ ಭಾರತೀಯರ ಇಂದಿನ ಮನೋಭಾವನೆಯನ್ನು ಅರಿಯಲು ಅದು ತುಂಬ ಸಹಾಯಕವಾಗಿದೆ. ಭಾರತದಲ್ಲಿ ಬ್ರಿಟಿಷರ ಪರಮಶತ್ರು ಭಾರತೀಯರ ಜನನಾಯಕ; ಬ್ರಿಟಿಷರ ಬಿರುದು ಬಾವಲಿಗಳಿಂದ ಪುನೀತರಾದ ಭಾರತೀಯರು ಜನತೆಯ ದ್ರೋಹಿ ಗಳು, ಈ ಕಲಂಕವು ಅವರ ಸಂತತಿಗೂ ಅಂಟಿಕೊಂಡಿದೆ. * ಅಮೆರಿಕದ ಕ್ರಾಂತಿಯ ಇತಿಹಾಸವನ್ನು ಬೇರೆಬೇರೆ ದೃಷ್ಟಿಯಿಂದ ಆಂಗ್ಲರೂ ಬರೆದಿದ್ದಾರೆ ಅಮೆರಿಕನರೂ ಬರೆದಿದ್ದಾರೆ. ದ್ವೇಷಾಸೂಯೆಗಳು ಅಳಿದು ಮೈತ್ರಿಯು ಬೆಳೆದಿದ್ದರೂ ಅವರ ಬರೆ ವಣಿಗೆಯು ಇವರಿಗೆ ಕಹಿ ಇವರದು ಅವರಿಗೆ ಕಹಿ. ನಮ್ಮ ಕಾಲದಲ್ಲಿಯೇ ಉನ್ನತ ಆ೦ಗ್ಲರಾಜ ಕಾರಣಿಗಳನೇಕರಿಗೆ ಲೆನಿನ್ ಒಬ್ಬ ಮಹಾಪಾತಕಿ, ದರೋಡೆಕೋರ ; ಆದರೆ ಕೋಟ್ಯನುಕೋಟ ಜನರಿಗೆ ಆತನೊಬ್ಬ ಯುಗಪುರುಷ, ಜಗದ ಉದ್ಧಾರಕ. . ಇದರಿಂದ ಭಾರತದ ಪೂರ್ವೇತಿಹಾಸ ನನ್ನೆಲ್ಲ ಹಳಿದು, ಧೈರ್ಯೊತ್ಸಾಹದ ನೆನಪುಗಳಿಗೆಲ್ಲ ಮಸಿಬಳಿದು ಬ್ರಿಟಿಷರ ಆಳ್ವಿಕೆಯಿಂದಲೇ ಭಾರತದ ಮುಕ್ತಿ ಎಂದು ಹೊಗಳಿ ಅಟ್ಟಕ್ಕೇರಿಸಿ ಬ್ರಿಟಿಷರು ಬರೆದ ಚರಿತ್ರೆಗಳನ್ನು ಶಾಲೆ ಕಾಲೇಜು ಗಳಲ್ಲಿ ಕಡ್ಡಾಯವಾಗಿ ಕಲಿಸುವುದನ್ನು ಭಾರತೀಯರು ಏಕೆ ವಿರೋಧಿಸುತ್ತಾರೆ ಎಂಬುದು ಅರ್ಥ ವಾಗುತ್ತದೆ. ಭಾರತ ಮತ್ತು ಬ್ರಿಟಿಷರ ಸಂಪರ್ಕವು ಬಿಡಿಸಲಾಗದೊಂದು ದೈವಸಂಕಲ್ಪವೆಂದು ಗೋಪಾಲ ಕೃಷ್ಣಗೋಖಲೆ ತಮ್ಮದೇ ಆದ ಒಂದು ವ್ಯಂಗ್ಯ ರೀತಿಯಲ್ಲಿ ಮೃದುವಾಗಿ ಹಾಸ್ಯ ಮಾಡಿದ್ದರು. ದೈವ ಸಂಕಲ್ಪವೋ, ಐತಿಹಾಸಿಕ ಅದೃಷ್ಟದ ಒಂದು ರೀತಿಯೊ, ಅಥವ ಕೇವಲ ಒಂದು ಆಕಸ್ಮಿಕವೋ ಅಂತೂ ಬ್ರಿಟಿಷರ ಬರುವಿಕೆಯಿಂದ ಎರಡು ಭಿನ್ನ ಜನಾಂಗಗಳ ಸಂಪರ್ಕವಾಯಿತು. ಆದರೆ ಈ ಸಂಪರ್ಕವು ಪರಸ್ಪರ ನೇರವಾಗಿ ಬೆಳೆಯುವ ಬದಲು ಅಪ್ರತ್ಯಕ್ಷವಾಗಿ ಬೆಳೆದು ನಿಜವಾದ ಸಂಪರ್ಕವು