ಪುಟ:ಭಾರತ ದರ್ಶನ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ದೂರ ಉಳಿಯಿತು, ಆಂಗ್ಲ ಸಾಹಿತ್ಯ ಮತ್ತು ಆಂಗ್ಲರ ರಾಜಕೀಯ ಭಾವನೆಗಳು ಇಂಗ್ಲಿಷ್ ಬಲ್ಲ ಕೆಲವರ ಮೇಲೆ ಮಾತ್ರ ಪರಿಣಾಮ ಮಾಡಿದವು. ಈ ರಾಜಕೀಯ ಭಾವನೆಗಳು ತಮ್ಮತಮ್ಮ ಸನ್ನಿವೇಶದಲ್ಲಿ ಮಹತ್ವಪೂರ್ಣವಿದ್ದರೂ ಅಂದಿನ ಭಾರತದಲ್ಲಿ ಕನಸಾಗಿದ್ದವು. ಭಾರತಕ್ಕೆ ಬಂದ ಬ್ರಿಟಿಷರು ರಾಜಕೀಯ ಅಥವ ಸಾಮಾಜಿಕ ಕ್ರಾಂತಿಪುರುಷರಾಗಿರಲಿಲ್ಲ. ಇಂಗ್ಲೆಂಡಿನ ಸಂಪ್ರ ದಾಯ ಶರಣ ಪಂಗಡದ ಪ್ರತಿನಿಧಿಗಳಾಗಿದ್ದರು. ಯೂರೋಪಿನ ಇತರ ಎಲ್ಲ ದೇಶಗಳಿಗಿಂತ ಇಂಗ್ಲೆಂಡ್ ಹೆಚ್ಚು ಸಂಪ್ರದಾಯ ಶಿಷ್ಟ ವಿತ್ತು. * ಭಾರತದ ಮೇಲಣ ಪಾಶ್ಚಾತ್ಯ ಸಂಸ್ಕೃತಿಯ ಧಾಳಿಯಿಂದ, ಮುಂದುವರಿದ ಪ್ರತಿಷ್ಠಿತ ಆಧುನಿಕ ಭಾವನೆಯ ಚೇನತ ಪೂರ್ಣ ಸಮಾಜವೊಂದು ಆಂತರಿಕ ಪರಿಮಿತಿಯಿಂದ ಮುಂದುವರಿಯಲಾರದೆ ಮಧ್ಯ ಯುಗದ ಭಾವನಾಲಹರಿಯಲ್ಲೇ ಮುಳುಗಿದ ಇನ್ನೊಂದು ಪ್ರಗತಿಶೂನ್ಯ ಸಮಾಜದ ಮೇಲೆ ದಾಳಿ ಇಟ್ಟಂತೆ ಆಯಿತು. ಆದರೂ ಈ ಐತಿಹಾಸಿಕ ಘಟನೆಯ ಪ್ರತಿನಿಧಿಗಳಾಗಿ ಬಂದವರಿಗೆ ಭಾರತದಲ್ಲಿ ತಮ್ಮ ಪಾತ್ರ ಏನೆಂಬುದರ ಅರಿವೇ ಇರಲಿಲ್ಲ ಮತ್ತು ಅವರು ಈ ಘಟನೆಯಲ್ಲಿ ನಿಜವಾದ ಯಾವ ಪಾತ್ರವನ್ನೂ ವಹಿಸಲಿಲ್ಲ. ಇಂಗ್ಲೆಂಡಿನಲ್ಲಿ ಅವರ ಪಕ್ಷವು ಆ ಐತಿಹಾಸಿಕ ಘಟನೆಯನ್ನು ತಡೆಗಟ್ಟಲು ಹೋರಾಡಿತು. ಆದರೆ ಎದುರು ಪಕ್ಷದ ಪ್ರಬಲ ಶಕ್ತಿಯನ್ನು ವಿರೋಧಿಸಲಾಗಲಿಲ್ಲ. ಭಾರತದಲ್ಲಿ ಅವರನ್ನು ಎದುರಿಸುವ ಶಕ್ತಿಯೇ ಇರಲಿಲ್ಲ; ಆದ್ದರಿಂದ ಪ್ರಗತಿ ಅಥವ ಪರಿವರ್ತನೆಯ ಪ್ರತಿನಿಧಿಗಳಾಗಿ ಇಲ್ಲಿಗೆ ಬಂದವರೇ ಆ ಪ್ರಗತಿ ಅಥವ ಪರಿವರ್ತನೆಯನ್ನು ಅಡ್ಡಗಟ್ಟಿ ತಡೆದರು. ಭಾರತದಲ್ಲಿ ಸಮಾಜದಲ್ಲಿನ ಪ್ರತಿಗಾಮಿ ಪಂಗಡಗಳಿಗೆ ಪ್ರೋತ್ಸಾಹ ಕೊಟ್ಟು ಬಲಪಡಿಸಿದರು ; ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗಾಗಿ ದುಡಿಯುವವರನ್ನು ವಿರೋಧಿಸಿದರು. ಏನಾದರೂ ಪ್ರಗತಿ ಸಾಧನೆಯಾಗಿದ್ದರೆ ಎಲ್ಲ ಅವರ ಈ ವಿರೋಧ ಮಾರಿ ಆಗಿದೆ ಅಥವ ಅವರ ಇತರ ಚಟುವಟಿಕೆ ಗಳ ಅನಿರೀಕ್ಷಿತ ಪರಿಣಾಮವಾಗಿ ಆಗಿದೆ. ಮಧ್ಯಯುಗದ ಸಮಾಜದಲ್ಲಿ ರೈಲುಗಾಡಿ ಮತ್ತು ಆವಿಯ ಯಂತ್ರವನ್ನು ತಂದುದರ ಪರಿಣಾಮವೇನೋ ಮಹತ್ತರವಾದುದು ; ಆದರೆ ಅದರ ಉದ್ದೇಶವು ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳುವುದಕ್ಕೆ ಮತ್ತು ತಮ್ಮ ಸ್ವಾರ್ಥಕ್ಕಾಗಿ ದೇಶದ ಸಂಪತ್ತನ್ನು ಸೂರೆಗೊಳ್ಳುವುದಕ್ಕೆ. ಆದ್ದರಿಂದ ಬ್ರಿಟಿಷ್ ಅಧಿಕಾರಿಗಳ ಉದ್ದೇಶಪೂರ್ವಕ ನೀತಿಗೂ ಮತ್ತು ಅದರ ಅನಪೇಕ್ಷಿತ ಪರಿಣಾಮಗಳಿಗೂ ಇರುವ ವಿರೋಧದಿಂದ ಸ್ವಲ್ಪ ಭ್ರಮೆಯಾಗುತ್ತದೆ ಮತ್ತು ನೀತಿಗೊಂದು ಬಣ್ಣದ ಮೆರುಗು ದೊರೆಯುತ್ತದೆ. ಪಾಶ್ಚಿಮಾತ್ಯ ಸಂಪರ್ಕದಿಂದ ಭಾರತ ದಲ್ಲಿ ಕ್ರಾಂತಿಯೇನೋ ಆಯಿತು ; ಆದರೆ ಅದು ಭಾರತದಲ್ಲಿ ಬ್ರಿಟಿಷರ ವಿರೋಧವನ್ನು ಮಾರಿ ಆದುದು, ಆ ಕ್ರಾಂತಿಯ ವೇಗವನ್ನು ಅವರು ತಡೆಗಟ್ಟಿದ ಕಾರಣ ಈಗಲೂ ಪೂರ್ಣ ಸುಧಾರಣೆ ಯಾಗಿಲ್ಲ. ಭಾರತವನ್ನು ಆಳಲು ಬಂದ ಇಂಗ್ಲೆಂಡಿನ ಶ್ರೀಮಂತರು ಮತ್ತು ಅವರ ಸ್ನೇಹಿತರಿಗೆ ಪ್ರಪಂ ಚದ ಮೇಲೆ ಶ್ರೀಮಂತಿಕೆಯ ದೃಷ್ಟಿಯೇ ಇತ್ತು. ಅವರಿಗೆ ಇಡೀ ಭಾರತವೇ ಈಸ್ಟ್ ಇಂಡಿಯಾ ಕಂಪನಿಯ ಒಂದು ಜಮೀನುದಾರಿಯಾಯಿತು, ಆ ಆಸ್ತಿಗೆ ಮತ್ತು ಅದರ ಗೇಣಿದಾರರಿಗೆ ಜಮೀನು ದಾರನೇ ಮಾಲಿಕನಾದನು. ಭಾರತದ ಬೊಕ್ಕಸದಿಂದಲೇ ಸಮೃದ್ಧಿಯಾಗಿ ಪರಿಹಾರ ಕೊಟ್ಟು ಭಾರತವನ್ನು ಬ್ರಿಟಿಷ್ ರಾಜನು ವಹಿಸಿಕೊಂಡ ಮೇಲೂ ಇದೇ ಭಾವನೆಯೇ ಉಳಿಯಿತು. ಭಾರತದ ಸಾಲದ ಮೂಲ ಇಲ್ಲಿಂದ, ಭಾರತವನ್ನು ಕೊಂಡುಕೊಳ್ಳಲು ಭಾರತವು ಕೊಟ್ಟ ಪ್ರತಿಫಲ. ಭಾರತದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಮಾಲಿಕ ಹಕ್ಕು ಬಂದಿತು, ಅಥವ ಅದು ಮಾಲಿಕನ ಪ್ರತಿನಿಧಿ ಯಾಯಿತು. ಇಂಗ್ಲೆಂಡಿನ ಶ್ರೀಮಂತರು ಡೆವನ್ ಪೈರಿನ ಡೂಕನನ್ನು ಡೆವನ್ ಪೈರ್ ಎನ್ನುವಂತೆ ಇಲ್ಲಿಯೂ ಸಾಮಾನ್ಯವಾಗಿ ಎಲ್ಲ ವಿಷಯಗಳಲ್ಲೂ ತಾವೇ ಇಂಡಿಯ' ಎಂದು ತಿಳಿದುಕೊಂಡರು. ಭಾರತದ ಕೋಟ್ಯಂತರ ಜನರು ಈ ಜಮೀನುದಾರಿ ಪದ್ಧತಿಗೆ ಸಹಜವಾದ ಗೇಣಿಗುತ್ತಿಗೆ ಕೊಟ್ಟು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಜೀತದ ಆಳುಗಳಾದರು. ಅವರ ದೃಷ್ಟಿಯಲ್ಲಿ ಈ ಪದ್ದತಿಯನ್ನು